ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಿದ್ಧತೆ: ಸಹಾಯಧನದಡಿ ಕೃಷಿ ಪರಿಕರ ಮಾರಾಟ, ಸದ್ಬಳಕೆಗೆ ರೈತರಿಗೆ ಸಲಹೆ
ಹಾಸನ

ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಿದ್ಧತೆ: ಸಹಾಯಧನದಡಿ ಕೃಷಿ ಪರಿಕರ ಮಾರಾಟ, ಸದ್ಬಳಕೆಗೆ ರೈತರಿಗೆ ಸಲಹೆ

April 24, 2019

ಹಾಸನ: ಮುಂಗಾರು ಆರಂಭ ವಾಗುತ್ತಿದ್ದು, ಕೃಷಿ ಇಲಾಖೆಯು ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದೆ. ಈಗಾ ಗಲೇ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿದೆ.

ಜಿಲ್ಲೆಯಲ್ಲಿ ಸುಮಾರು 15,000 ಹೆಕ್ಟೇರ್ ಪ್ರದೇಶದಲ್ಲಿ ಪೂರ್ವ ಮುಂಗಾರು ಬೆಳೆ ಗಳಾದ ಉದ್ದು, ಹೆಸರು, ಎಳ್ಳು, ಅಲಸಂದೆ ಬೆಳೆಯುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಿಂದ ರಿಯಾಯಿತಿ ದರ ದಲ್ಲಿ ಬಿತ್ತನೆ ಬೀಜ ವಿತರಿಸಲು ಕ್ರಮಕೈ ಗೊಳ್ಳಲಾಗಿದೆ. ವಿವಿಧ ದ್ವಿದಳ ಧಾನ್ಯಗಳಲ್ಲಿ ನೂತನ ತಳಿಗಳಾದ ಹೆಸರು(ಬಿಗಿ ಎಸ್-9, ಡಿಜಿಜಿವಿ-2), ಉದ್ದು(ಟಿ-9, ಟಿ ಏಯು -1), ತೊಗರಿ(ಬಿಆರ್‍ಜಿ-2) ಮತ್ತು ಅಲಸಂದೆ(ಬಿ.ಸಿ-15)ಗಳನ್ನು ರೈತರು ಸದು ಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಗಳನ್ನು ನಿರ್ವಹಿಸುವುದು ಮತ್ತು ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸುವುದು ಮಳೆ ಯಾಶ್ರಿತ ಬೇಸಾಯ ಕ್ರಮದಲ್ಲಿ ಅನಿವಾ ರ್ಯವಾಗಿದೆ. ಬೆಳೆಯು ಅಧಿಕ ಇಳುವರಿ ಯನ್ನು ನೀಡಲು ಹಾಗೂ ಕೃಷಿಯಲ್ಲಿ ಸುಸ್ತಿ ರತೆಯನ್ನು ಕಾಪಾಡಲು ಮಣ್ಣಿನ ಫಲ ವತ್ತತೆ ಅತೀ ಮಹತ್ವದ ಪಾತ್ರ ವಹಿಸುತ್ತದೆ.
ಮಣ್ಣಿನ ಫಲವತ್ತತೆ ಪರೀಕ್ಷಿಸಿ: ಮೊದಲು ತಮ್ಮ ಜಮೀನಿನ ಮಣ್ಣನ್ನು ಪರೀಕ್ಷೆ ಮಾಡಿಸಿ, ಇದಕ್ಕೆ ಪೂರಕವಾಗಿ ಪೋಷಕಾಂಶ ಗಳನ್ನು ಮಣ್ಣಿಗೆ ಸೇರಿಸಬೇಕು. ಈ ನಿಟ್ಟಿ ನಲ್ಲಿ ವಿವಿಧ ಮಾದರಿಯ ಕಾಂಪೋಸ್ಟ್, ಎರೆಗೊಬ್ಬರ ತಯಾರಿಕೆ, ಅಜೋಲಾ, ಸಾವಯವ ಯೂರಿಯಾ, ದ್ರವರೂಪ ಗೊಬ್ಬರ ತಯಾರಿಕಾ ಘಟಕಗಳನ್ನು ನಿರ್ಮಾಣ ಮಾಡಿಕೊಳ್ಳಬಹುದು. ಜೊತೆಗೆ ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರ ಇತ್ಯಾದಿಗಳನ್ನು ಮಣ್ಣಿಗೆ ಸೇರಿಸುವುದ ರಿಂದ ಮಣ್ಣು ಫಲವತ್ತಾಗಿ ಬೆಳೆಗೆ ಅಗತ್ಯ ಪೋಷಕಾಂಶಗಳನ್ನು ಪೂರೈಸುವುವು ಎಂದು ಕೃಷಿ ಇಲಾಖೆಯು ಪ್ರಕಟಣೆ ಯಲ್ಲಿ ತಿಳಿಸಿದೆ.

ಹಸಿರೆಲೆ ಗೊಬ್ಬರಗಳನ್ನು ಮಣ್ಣಿಗೆ ಹೆಚ್ಚು ಸೇರಿಸುವುದರಿಂದ ಸಾರಜನಕದ ಬಳಕೆ ಕಡಿಮೆ ಮಾಡಿ ಮಣ್ಣಿನ ಫಲ ವತ್ತತೆಯನ್ನು ಹೆಚ್ಚಿಸಲು ಬಹು ಪ್ರಯೋ ಜನಕಾರಿಯಾಗಿದೆ. ಹಸಿರೆಲೆ ಗೊಬ್ಬರ ಗಳಾದ ಡಯಾಂಚ, ಗ್ಲಿರಿಸಿಡಿಯಾ, ಸಸ್ಬೇನಿಯಾ, ಹೊಂಗೆ ಜೊತೆಗೆ ದ್ವಿದಳ ಧಾನ್ಯಗಳಾದ ಅಲಸಂದೆ, ಹುರುಳಿ, ತೊಗರಿ, ಹೆಸರು, ಉದ್ದು ಇತ್ಯಾದಿ ಬೆಳೆ ಗಳನ್ನು ಬೆಳೆದು ಹಸಿರೆಲೆ ಗೊಬ್ಬರಗಳ ರೂಪದಲ್ಲಿ ಮಣ್ಣಿಗೆ ಸೇರಿಸಬಹುದು.

ಹಸಿರೆಲೆ ಗೊಬ್ಬರಗಳನ್ನು ಮೂಲ ಬೆಳೆ ಬೆಳೆಯುವುದಕ್ಕಿಂದ ಮೊದಲು ಹೊಸಗದ್ದೆ ಗಳಲ್ಲಿ ಬೆಳೆದು, ಹೂವಾಡುವ ಹಂತದಲ್ಲಿ ಅಂದರೆ ಸುಮಾರು 45 ದಿವಸಗಳ ಬೆಳೆ ಯನ್ನು ಮಣ್ಣಿಗೆ ಸೇರಿಸಬೇಕು. ಡಿಸ್ಕ್ ನೇಗಿಲಿನಿಂದ ಅಥವಾ ಎತ್ತಿನ ರೆಂಟೆ ಹೊಡೆದು 7-8 ಅಂಗುಲ ಆಳಕ್ಕೆ ಮಣ್ಣಿ ನಲ್ಲಿ ಪೂರ್ತಿ ಮುಚ್ಚುವ ಹಾಗೆ ಸೇರಿಸ ಬೇಕು. ಮುಂದಿನ ಬೆಳೆ ಬಿತ್ತುವುದಕ್ಕಿಂತ ಒಂದು ತಿಂಗಳು ಮುಂಚೆಯೇ ಹಸಿರೆಲೆ ಗೊಬ್ಬರ ಬೆಳೆಯನ್ನು ಮಣ್ಣಿನಲ್ಲಿ ಸೇರಿಸು ವುದು ಒಳ್ಳೆಯದು. ಹೆಕ್ಟೇರ್‍ಗೆ 15-20 ಟನ್ ಹಸಿರೆಲೆ ಗೊಬ್ಬರ ಸೇರಿಸುವುದ ರಿಂದ ಬೆಳೆಗೆ ಸುಮಾರು 50-75 ಕಿಗ್ರಾಂ ನಷ್ಟು ಸಾರಜನಕ ದೊರಕಿದಂತಾಗುತ್ತದೆ ಹಾಗೂ ದ್ವಿದಳ ಧಾನ್ಯಗಳನ್ನು ಹಸಿರೆಲೆ ಗೊಬ್ಬರಗಳಾಗಿ ಆಯ್ಕೆ ಮಾಡಿದಾಗ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೇ ಊಟಕ್ಕೆ ಸಾಕಷ್ಟು ಕಾಳು ಸಿಗುತ್ತದೆ ಹಾಗೂ ಹೊರಗಿನಿಂದ ಕೊಡುವ ಗೊಬ್ಬರವನ್ನು ಕಡಿಮೆ ಮಾಡಬಹುದು.

ಕೃಷಿ ಸುಣ್ಣದ ಬಳಕೆ: ಜಿಲ್ಲೆಯ ಮಲೆ ನಾಡಿನ ಭಾಗಗಳಲ್ಲಿ ಹೆಚ್ಚಿನ ಮಳೆ ಬೀಳುವ ಪ್ರದೇಶದಲ್ಲಿ ರಸ ಸಾರವು 6.5ಕ್ಕಿಂತ ಕಡಿಮೆ ಇದ್ದ ಮಣ್ಣಿನಲ್ಲಿ ಆಮ್ಲೀಯ ಅಂಶ ಹೆಚ್ಚಾ ಗುತ್ತದೆ. ಏಕೆಂದರೆ, ಮಣ್ಣಿನಲ್ಲಿರುವ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ವಸ್ತುಗಳು ಬಸಿದು ಹೋಗುತ್ತದೆ. ಅಲ್ಲದೇ ಮಣ್ಣು ಹೆಚ್ಚಾಗಿ ಅಲ್ಯುಮಿನಿಯಂ ಮತ್ತು ಕಬ್ಬಿಣದ ಸಂಯುಕ್ತ ವಸ್ತುಗಳಿಂದ ಕೂಡಿ ರುತ್ತದೆ. ಇಂತಹ ಮಣ್ಣಿನಲ್ಲಿ ಪೋಷ ಕಾಂಶದ ಕೊರತೆ ಅಧಿಕವಾಗಿ ಕಂಡು ಬರುತ್ತದೆ. ಆದ್ದರಿಂದ ಈ ಮಣ್ಣನ್ನು ಸುಧಾ ರಿಸಲು ಕೃಷಿ ಸುಣ್ಣವನ್ನು ಸುಮಾರು 200ಕೆ.ಜಿ/ಎಕರೆಯಂತೆ (ಮಣ್ಣು ಪರೀಕ್ಷೆ ಯನ್ನು ಆಧರಿಸಿ) ಬಳಸಲು ಕೃಷಿ ಇಲಾಖೆ ಸಲಹೆ ನೀಡಿದೆ.

Translate »