ನೆನೆಗುದಿಗೆ ಬಿದ್ದಿರುವ ಕಾಮಗಾರಿ ತ್ವರಿತ ಅನುಷ್ಠಾನ
ಹಾಸನ

ನೆನೆಗುದಿಗೆ ಬಿದ್ದಿರುವ ಕಾಮಗಾರಿ ತ್ವರಿತ ಅನುಷ್ಠಾನ

June 2, 2019

ಜಿಲ್ಲಾಧಿಕಾರಿ ಕಚೇರಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಸ್ಪಷ್ಟ ನಿರ್ದೇಶನ
ಹಾಸನ: ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವ ಹಿಸುವುದರ ಜೊತೆಗೇ, ನೆನೆಗುದಿಗೆ ಬಿದ್ದಿ ರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮಂಜೂರಾ ಗಿರುವ ಹೊಸ ಯೋಜನೆಗಳನ್ನೂ ಶೀಘ್ರ ವಾಗಿ ಅನುಷ್ಠಾನಗೊಳಿಸಿ ಎಂದು ಲೋಕೋಪ ಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಕೆ.ಎನ್.ವಿಜಯಪ್ರಕಾಶ್ ಅವ ರೊಂದಿಗೆ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು ಹಾಗೂ ವಿವಿಧ ಇಲಾಖೆ ಗಳ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಹಲವು ನಿರ್ದೇಶನಗಳನ್ನು ನೀಡಿದರು.

ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ವಿದ್ಯುತ್ ಪ್ರಸರಣ ನಿಗಮದ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಬೇಕು. ಪ್ರತಿ ಗ್ರಾಮಕ್ಕೆ ಹಾಗೂ ಸಾರ್ವಜನಿಕರ ಅನು ಕೂಲದ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಬೇಗ ಒದಗಿಸಬೇಕು. ಕುಡಿಯುವ ನೀರಿನ ಯೋಜನೆಗಳನ್ನು ಯಾವುದೇ ವಿಳಂಬ ವಿಲ್ಲದೇ ಸಂಪರ್ಕ ಕಲ್ಪಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ತಾಲೂಕು ಆಡ ಳಿತ ಪೂರ್ಣ ಜವಾಬ್ದಾರಿ ತೆಗೆದುಕೊಳ್ಳ ಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಈ ವಿಚಾರದಲ್ಲಿ ನಿರಂತರ ನಿಗಾ ವಹಿಸಬೇಕು ಎಂದು ಸೂಚಿಸಿದರು.

ತಹಸೀಲ್ದಾರರು, ತಾಪಂ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರುಗಳು ಪ್ರತಿ ವಾರ ಗ್ರಾಮಗಳಿಗೆ ತೆರಳಿ ಪರಿಸ್ಥಿತಿ ಅವ ಲೋಕಿಸಬೇಕು. ಸಮಸ್ಯೆಗಳಿದ್ದರೆ ತಕ್ಷಣವೇ ಪರಿಹರಿಸಬೇಕು. ಬಳಿಕ ಆ ಬಗ್ಗೆ ಜಿಲ್ಲಾ ಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಅಗತ್ಯವಿರುವ ಕಡೆ ಮತ್ತು ನೀರು ಲಭ್ಯವಾಗುವ ಪ್ರದೇಶಗಳಲ್ಲಿ ಕೊಳವೆ ಬಾವಿ ಕೊರೆಸಿರಿ. ಅನಿವಾರ್ಯವಾದರೆ ಟ್ಯಾಂಕರ್ ಬಳಸಿ ಗ್ರಾಮಗಳಿಗೆ ನೀರು ಪೂರೈಸಿರಿ. ಸ್ಥಳೀಯವಾಗಿ ಹಾಲು ಉತ್ಪಾ ದಕರ ಸಂಘಗಳ ಸಹಕಾರದೊಂದಿಗೆ ಜಾನುವಾರುಗಳಿಗೆ ಬೇಕಾದ ಮೇವನ್ನು ಬೆಳೆದು ಕೊರತೆ ನೀಗಿಸಿ ಎಂದು ಸಚಿವರು ಸೂಚನೆ ನೀಡಿದರು.

ಯಾವುದೇ ಗ್ರಾಮದಲ್ಲೂ ಬರದಿಂದ ಜನರು ಗುಳೆ ಹೋಗುವಂತಾಗಬಾರದು. ಉದ್ಯೋಗ ಖಾತರಿ ಯೋಜನೆ ಸಮ ರ್ಪಕ ಸದ್ಬಳಕೆಯಾಗಬೇಕು. ಆ ಮೂಲಕ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಯೋಜನೆಗಳನ್ನು ಸಂಯೋಜಿಸಿ ರೈತರ ಉತ್ಪಾದಕತೆ ಹೆಚ್ಚಿಸುವ ಚಟುವಟಿಕೆ ನಡೆಸಿ ಎಂದು ಸಚಿವರು ತಿಳಿಸಿದರು.

ಅರಸೀಕೆರೆ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗಾ ಗಲೇ ಅನುಷ್ಠಾನಗೊಂಡಿದೆ ಎಂದ ಸಚಿ ವರು, ತೀವ್ರ ಸಮಸ್ಯಾತ್ಮಕ ಗ್ರಾಮಗಳಿಗೆ ಮೊದಲು ನೀರು ಪೂರೈಸಲು ಆದ್ಯತೆ ನೀಡಿ ಎಂದರು.

ಮಾದರಿ ಬಹು ಬೆಳೆ: ಕೃಷಿ ಮತ್ತು ತೋಟ ಗಾರಿಕೆಯನ್ನು ಲಾಭದಾಯಕ ಉದ್ಯೋಗ ವನ್ನಾಗಿ ಮಾರ್ಪಾಡು ಮಾಡುವ ಅನಿ ವಾರ್ಯತೆ ಇದೆ. ಇದಕ್ಕಾಗಿ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ 500 ಎಕರೆ ರೈತರ ಜಮೀನು ಗುರುತಿಸಿ ಅದರಲ್ಲಿ ಮಾದರಿ ಎನಿಸುವ ಬಹು ಬೆಳೆ ಬೇಸಾಯ ಯೋಜನೆ ಜಾರಿಗೆ ತರಬೇಕು ಎಂದು ಸಚಿವರು ಹೇಳಿದರು.

ಉದ್ಯೋಗ ಖಾತರಿ ಯೋಜನೆ, ತೋಟ ಗಾರಿಕೆ, ಕೃಷಿ ಇಲಾಖೆಗಳ ಯೋಜನೆ ಗಳನ್ನು ಸಂಯೋಜಿಸಿ ರೈತರ ಜಮೀನು ಗಳಲ್ಲಿ ಬೆಳೆಗಳನ್ನು ಅಭಿವೃದ್ಧಿಪಡಿಸಿ, ತಾಂತ್ರಿಕ, ವೈಜ್ಞಾನಿಕ ಮಾರ್ಗದರ್ಶಕ ನೆರವು ನೀಡಿ ತಾತ್ಕಾಲಿಕ ಹಾಗೂ ದೀರ್ಘಕಾಲಿಕ ಆದಾಯ ಬರುವಂತೆ ಮಾಡಬೇಕು ಎಂಬ ಆಶಯವನ್ನು ರೇವಣ್ಣ ವ್ಯಕ್ತಪಡಿಸಿದರು. ವೈಜ್ಞಾನಿಕ ಬೆಳೆ ಪದ್ಧತಿ ಮೂಲಕ ಕೃಷಿ ಚಟುವಟಿಕೆ ಖಾತರಿ ಆದಾ ಯದ ಉದ್ಯೋಗ ಮೂಲವನ್ನಾಗಿಸಲು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿ ಕಾರಿಗಳು ವಿನೂತನ ಯೋಜನೆಗಳನ್ನು ರೂಪಿಸಿ ವರದಿ ಸಲ್ಲಿಸಿರಿ ಎಂದೂ ಸಚಿವರು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಆಲೂಗೆಡ್ಡೆ ಬೆಳೆಗೂ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅಗತ್ಯವಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ವತಿಯಿಂದ ಹೆಚ್ಚಿನ ಪ್ರಚಾರ ಹಾಗೂ ಅರಿವಿನ ಚಟುವಟಿಕೆ ನಡೆಸ ಬೇಕು. ಆಲೂಗೆಡ್ಡೆ ಬಿತ್ತನೆ ಬೀಜಕ್ಕೆ ಬಿಡುಗಡೆ ಮಾಡಿರುವ 30 ಕೋಟಿ ರೂ. ಸಬ್ಸಿಡಿ ಹಣವನ್ನು ಅರ್ಹ ರೈತರನ್ನು ಗುರುತಿಸಿ ಅವರ ಖಾತೆಗೆ ವರ್ಗಾಯಿಸಿ ಎಂದು ಸೂಚಿಸಿದರು.

ಸಮಗ್ರ ಅಭಿವೃದ್ಧಿಗೆ ಆದ್ಯತೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಆದ್ಯತೆ ಯಾಗಿದೆ. ಶೈಕ್ಷಣಿಕ ಯೋಜನೆಗಳಿಗೂ ಅಷ್ಟೇ ಮನ್ನಣೆ ನೀಡಲಾಗುತ್ತಿದೆ ಶಾಲಾ- ಕಾಲೇಜು ಕಟ್ಟಡಗಳು, ವಿದ್ಯಾರ್ಥಿ ನಿಲಯ ಗಳು, ವಸತಿ ಶಾಲೆ, ವಸತಿ ನಿಲಯ, ಕಾಮ ಗಾರಿಗಳು ಬೇಗನೇ ಮುಗಿಯಬೇಕು ವಿದ್ಯಾರ್ಥಿ ಗಳಿಗೆ ಹೆಚ್ಚಿನ ಗುಣಮಟ್ಟದ ಕಲಿಕಾ ಸೌಲಭ್ಯ ಜಿಲ್ಲೆಯಲ್ಲಿ ದೊರೆಯಬೇಕು. ವಿವಿಧ ಇಲಾಖಾ ಕಚೇರಿಗಳಿಗೆ ಕಟ್ಟಡ ಅಗತ್ಯ ವಿದ್ದು, ಸೂಕ್ತ ಸ್ಥಳ ಗುರುತಿಸಿ ಆದಷ್ಟು ಬೇಗ ಕಟ್ಟಡಗಳನ್ನು ನಿರ್ಮಿಸಿ ಎಂದರು.

ಪಿಂಚಣಿ ವಂಚಿತರಾಗಬಾರದು: ಜಿಲ್ಲೆ ಯಲ್ಲಿ ಯಾವುದೇ ಅರ್ಹ ವಯೋ ವೃದ್ಧರು ವಿಕಲ ಚೇತನರು, ವಿಧವೆಯರು ಮಾಸಿಕ ಪಿಂಚಣಿ ಯೋಜನೆಯಿಂದ ಹೊರಗುಳಿಯಬಾರದು. ಸಂಬಂಧಪಟ್ಟ ತಹಸೀಲ್ದಾರರು ಗ್ರಾಮ ಮಟ್ಟದಲ್ಲಿ ಸಮೀಕ್ಷೆ ನಡೆಸಿ ಅರ್ಜಿಗಳನ್ನು ತ್ವರಿತವಾಗಿ ವಿಲೇ ವಾರಿ ಮಾಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಅಕ್ರಮ ಸಕ್ರಮ: ತಾಲೂಕುಗಳಲ್ಲಿ ಅಕ್ರಮ ಸಕ್ರಮ ಯೋಜನೆಯ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡುವಂತೆ ಸಚಿವ ರೇವಣ್ಣ ಅವರು ತಹಸೀಲ್ದಾರರಿಗೆ ಸೂಚನೆ ನೀಡಿದರು.

ಮಾಹಿತಿ: ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಪಂ ಸಿಇಒ ಕೆ.ಎನ್.ವಿಜಯ್‍ಪ್ರಕಾಶ್, ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ, ಮೇವಿನ ಲಭ್ಯತೆ, ಉದ್ದೇಶಿತ ಹೊಸ ಯೋಜನೆಗಳ ಕುರಿತು ಮಾಹಿತಿ ನೀಡಿ ದರು. ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ, ಕೃಷಿ ಅಭಿವೃದ್ಧಿಗೆ ಪೂರಕ ಯೋಜನೆಗಳ- ಹೊಸ ಅಗತ್ಯಗಳ ಬಗ್ಗೆ ವಿವರಿಸಿದರು. ಉಪ ವಿಭಾಗಾಧಿಕಾರಿ ಗಳಾದ ಹೆಚ್.ಎಲ್.ನಾಗರಾಜು ಮತ್ತು ಕವಿತಾ ರಾಜಾರಾಂ ಅವರು ಉಪವಿಭಾಗ ಮಟ್ಟದ ವಿಷಯಗಳ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಸಚಿವರು ಅತಿವೃಷ್ಟಿ ಪರಿಹಾರ ಕಾಮಗಾರಿಗಳ ಪ್ರಗತಿ, ಮುಂಗಾರು ಅವಧಿಗೆ ಮಾಡಿಕೊಂಡಿರುವ ಸಿದ್ಧತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗಳ ಪ್ರಗತಿ ಬಗ್ಗೆ ಸಂಬಂಧಿಸಿದ ಅಧಿಕಾರಿ ಗಳಿಂದ ಮಾಹಿತಿ ಪಡೆದರು.

ಚಿಪ್ಪಿನಕಟ್ಟೆಯಲ್ಲಿ ಮಾದರಿ ಶಾಲೆ
ಬಹುತೇಕ ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರೇ ವಾಸಿಸುತ್ತಿರುವ ಚಿಪ್ಪಿನಕಟ್ಟೆ ಸೇರಿದಂತೆ 4 ಕಡೆ 1ನೇ ತರಗತಿಯಿಂದ ದ್ವಿತೀಯ ಪಿಯು ವರೆಗೂ ವ್ಯಾಸಂಗ ಸೌಲಭ್ಯವಿರುವ ಸರ್ಕಾರಿ ಇಂಗ್ಲೀಷ್ ಶಾಲೆ ಪ್ರಾರಂಭಿ ಸಲು ಯೋಜಿಸಲಾಗಿದೆ. ಇದಕ್ಕೆ ಅಗತ್ಯ ಕ್ರಿಯಾ ಯೋಜನೆ ಸಲ್ಲಿಸುವಂತೆ ಸಚಿ ವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

Translate »