ನಗರ ಪ್ರದಕ್ಷಿಣೆ ವೇಳೆ ಅಧಿಕಾರಿಗಳಿಗೆ ಶಾಸಕ ಪ್ರೀತಂ ಗೌಡ ಸೂಚನೆ
ಹಾಸನ: ಮಳೆಗಾಲ ಆರಂಭ ವಾಗಿದ್ದು, ಅಧಿಕಾರಿಗಳು ಸಮಸ್ಯೆಗಳು ಎದು ರಾಗದಂತೆ ಮುಂಜಾಗರೂಕತಾ ಕ್ರಮ ಗಳನ್ನು ಕೈಗೊಳ್ಳಬೇಕು ಎಂದು ಹಾಸನ ಶಾಸಕ ಪ್ರೀತಂ ಗೌಡ ಸೂಚನೆ ನೀಡಿದರು.
ಬುಧವಾರ ನಗರದಲ್ಲಿ ವಾರ್ಡ್ ವೀಕ್ಷಣೆ ಮಾಡಿದ ಶಾಸಕರು, ನಗರದಲ್ಲಿ ಮಳೆ ನೀರು ಸುಲಭವಾಗಿ ಹರಿದುಹೋಗಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮಳೆ ಗಾಲದಲ್ಲಿ ಯಾವುದೇ ಸಮಸ್ಯೆ ಬಾರ ದಂತೆ ಮುಂಚಿತವಾಗಿಯೇ ಜಾಗ್ರತೆ ವಹಿಸ ಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 2, 3, 4, 5ನೇ ವಾರ್ಡ್‍ಗಳಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದರು.
ರಸ್ತೆಯಲ್ಲಿಯೇ ಮಳೆ ನೀರು ನಿಂತು ವಾಹನ ಚಾಲಕರಿಗೆ ಹಾಗೂ ಪಾದ ಚಾರಿಗಳಿಗೆ ತೊಂದರೆಯಾಗಬಾರದು. ಚರಂಡಿ ಮತ್ತು ಯುಜಿಡಿ ನೀರು ಸರಾಗ ವಾಗಿ ಹರಿದುಹೋಗುವಂತಿರ ಬೇಕು ಎಂದು ಸೂಚನೆ ನೀಡಿದರು. ಹೌಸಿಂಗ್ ಬೋರ್ಡ್‍ನಲ್ಲಿನ ರಾಜಕಾಲುವೆ ಪರಿಶೀ ಲಿಸಿ ಸಾರ್ವಜನಿಕರ ಜತೆ ಚರ್ಚಿಸಿದರು. ನಗರಸಭೆ ಆಯುಕ್ತೆ ರೂಪಾಶೆಟ್ಟಿ ಮತ್ತು ಅಧಿಕಾರಿಗಳು ಜತೆಗಿದ್ದರು.
ಇಂದು: ಶಾಸಕರ ನಗರ ಪ್ರದಕ್ಷ್ಷಿಣೆ ಗುರುವಾರ ರಂಗೋಲಿಹಳ್ಳ, ಹೇಮಾವತಿ ನಗರ ಹಾಗೂ 8, 9 10, 11, 12, 13, 14ನೇ ವಾರ್ಡ್‍ಗಳಲ್ಲಿ ನಡೆಯಲಿದೆ.