ಹಾಸನ: ನಗರದ ವಿವಿಧೆಡೆ 3000 ನಿವೇಶನಗಳಿಗೆ ಜಾಗ ಗುರುತಿಸ ಲಾಗಿದ್ದು, ಹಲವು ವರ್ಷಗಳಿಂದ ಹಾಸನ ನಗರದಲ್ಲಿ ವಾಸವಿರುವ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಸದ್ಯದಲ್ಲೇ ವಿತರಣೆಯಾಗಲಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ನಗರಸಭೆ ಅಧಿಕಾರಿ ಗಳಿಗೆ ಶನಿವಾರ ನಿರ್ದೇಶನ ನೀಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಹಾಸನ ನಗರದಲ್ಲಿ ಹಲವು ವರ್ಷಗಳಿಂದ ವಾಸವಿದ್ದೂ ಸ್ವಂತ ಮನೆ ಹೊಂದಲಾಗದೇ ಪರಿತಪಿಸುತ್ತಿರುವ ಬಡವರಿಗೆ ನಿವೇಶನ ನೀಡಬೇಕಿದೆ. ಈ ನಿಟ್ಟಿನಲ್ಲಿ ಜೂ.19ರಂದು ಸಾರ್ವಜನಿಕ ಪ್ರಕಟಣೆ ನೀಡಿ ಜೂ.21ರಿಂದ ವಾರ್ಡ್ ವಾರು ಅರ್ಜಿ ಸ್ವೀಕರಿಸಲು ಕ್ರಮ ಕೈಗೊಳ್ಳಿ ಎಂದು ನಗರಸಭೆ ಹಾಗೂ ನಗರಾಭಿ ವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಚಿಪ್ಪಿನಕಟ್ಟೆ, ಅಂಬೇಡ್ಕರ್ ನಗರ, ಸಿದ್ದಯ್ಯ ನಗರ, ಪೆನ್ಷನ್ ಮೊಹಲ್ಲಾ ಸೇರಿ ದಂತೆ ವಿವಿಧೆಡೆ ಅನೇಕ ವರ್ಷಗಳಿಂದ ವಾಸವಿ ರುವ, ಸ್ವಂತ ಮನೆ ಇಲ್ಲದವರನ್ನು ಗುರುತಿಸಿ, ದಾಖಲೆಗಳನ್ನು ಪರಿಶೀಲಿಸಿ, ತ್ವರಿತಗತಿ ಯಲ್ಲಿ ನಿವೇಶನ ಹಕ್ಕುಪತ್ರ ವಿತರಿಸಿ ಎಂದರು.
ರಸ್ತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಮನೆ ಕಳೆದುಕೊಳ್ಳುವವರಿಗೆ ಬೇರೆÀಡೆ ಮನೆ ನಿರ್ಮಿಸಿಕೊಡಿ ಎಂದೂ ಸಚಿವರು ಜಿಲ್ಲಾ ಧಿಕಾರಿ ಮತ್ತು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ ಅಭಿವೃದ್ಧಿ ಯೋಜನೆ ಗಳ ತ್ವರಿತ ಅನುಷ್ಠಾನಕ್ಕೆ ಅನುಕೂಲ ಕಲ್ಪಿಸಿ. ಬೇಲೂರು, ಬಿಳಿಕೆರೆ ರಸ್ತೆ, ಹಾಸನ, ಆಲೂರು, ಬೇಲೂರು, ಚಿಕ್ಕಮಗಳೂರು ರೈಲ್ವೆ ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಬೇಗ ಆಗಬೇಕಿದ್ದು, ಸರ್ವೆ ಕಾರ್ಯ ತುರ್ತಾಗಿ ಮುಗಿಸಿ ಎಂದರು.
ನಗರದ ಎನ್.ಆರ್.ವೃತ್ತದಿಂದ ತಣ್ಣೀರು ಹಳ್ಳದವರೆಗೆ 4 ತಿಂಗಳಲ್ಲಿ ಹಂತ ಹಂತ ವಾಗಿ ರಸ್ತೆ ಅಭಿವೃದ್ಧಿಪಡಿಸಬೇಕು, ಪೊಲೀಸ್ ಇಲಾಖೆ ಇದಕ್ಕೆ ಅಗತ್ಯ ಸಂಚಾರಿ ನಿಯಂ ತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಮಾರ್ಗ ಸೂಚಿಯಂತೆ ವ್ಯವಸ್ಥಿತವಾಗಿ ರಸ್ತೆ ಕಾಮ ಗಾರಿ ಮುಗಿಸಿ ಎಂದು ಸಚಿವರು ರಾಷ್ಟ್ರೀಯ ಹೆದ್ದಾರಿ, ನಗರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊಸ ನೀರಾವರಿ ಯೋಜನೆಗಳಿಗೆ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ಗಳ ಕಚೇರಿಗೆ ಅಗತ್ಯವಿರುವ ಸರ್ವೆಯರ್ ಗಳನ್ನು ಹಾಗೂ ಇತರ ಸಿಬ್ಬಂದಿಗಳನ್ನು ಶೀಘ್ರ ನಿಯೋಜಿಸುವಂತೆ ಜಿಲ್ಲಾಧಿಕಾರಿ ಯವರು ಮತ್ತು ಭೂದಾಖಲೆಗಳ ಉಪ ನಿರ್ದೇಶಕರಿಗೆ ಸಚಿವರು ಹೇಳಿದರು.
ಅಕ್ರಮ ಮದ್ಯಕ್ಕೆ ತಡೆ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಪೂರ್ಣ ನಿಯಂತ್ರಿ ಸಲು ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿ ದರು. ಶಾಲಾ ಮಕ್ಕಳಿಗಾಗಿ ಅಗತ್ಯ ಮಾರ್ಗ ಗಳಲ್ಲಿ ಬಸ್ ಸಂಚಾರ ಆರಂಭಿಸುವಂತೆ ಕೆಎಸ್ ಆರ್‍ಟಿಸಿ ಅಧಿಕಾರಿಗಳಿಗೆ ಆದೇಶಿಸಿದರು.
ಜಿಲ್ಲೆಯಲ್ಲಿ ಮಳೆ ಪ್ರಾರಂಭಕ್ಕೂ ಮುನ್ನ ತುರ್ತು ದುರಸ್ತಿ ಕಾರ್ಯಗಳು ಅಗತ್ಯವಿ ರುವ ಕೆರೆಗಳನ್ನು ಗುರುತಿಸಿ ತಕ್ಷಣ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅವರು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಗಳಿಗೆ ನಿರ್ದೇಶನ ನೀಡಿದರು. ನಗರ ದಲ್ಲಿನ ಕೆರೆಗಳ ಅಭಿವೃದ್ಧಿಗೆ ಅಗತ್ಯ ಅನು ದಾನ ಒದಗಿಸಲಾಗುವುದು ಎಂದೂ ಇದೇ ವೇಳೆ ತಿಳಿಸಿದರು.
ಆಲೂಗಡ್ಡೆ ಬಿತ್ತನೆ ಬೀಜ ಸಬ್ಸಿಡಿ ವಿತರಣೆ ಸಮರ್ಪಕವಾಗಿರಲಿ. ತೋಟ ಗಾರಿಕೆ ಇಲಾಖೆ ಮತ್ತು ತಾಲೂಕು ಕಚೇರಿ ಅಧಿಕಾರಿಗಳು ಜತೆಗೂಡಿ ಸಮೀಕ್ಷೆ ನಡೆಸಿ ಅರ್ಹರೆಲ್ಲರಿಗೂ ಸೌಲಭ್ಯ ಒದಗಿಸಿ ಎಂದು ಸೂಚಿಸಿದರು. ತೋಟಗಾರಿಕಾ ಕಾಲೇಜಿನ ಫಲಪುಷ್ಪ ಅಭಿವೃದ್ಧಿ ಕೇಂದ್ರದ ಮಾದರಿಯಲ್ಲಿಯೇ ಸೋಮನಹಳ್ಳಿ ಕಾವಲ್‍ನ ಆಲೂಗಡ್ಡೆ ಸಂಶೋಧನಾ ಕೇಂದ್ರವೂ ನಿರ್ಮಾಣವಾಗಬೇಕು. ಅದಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾ ಗುವುದು ಎಂದರು
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ 500 ಎಕರೆ ಜಮೀನು ಗುರುತಿಸಿ ಮಾದರಿ ಕೃಷಿ ಪದ್ಧತಿ ಅಳವಡಿಸಿ ಪ್ರಸ್ತಾವನೆ ಸಲ್ಲಿಸಿ. ಇಲ್ಲಿ ಉದ್ಯೋಗ ಖಾತರಿ, ಕೃಷಿ, ತೋಟ ಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶು ಪಾಲನೆ ಇಲಾಖೆ ಯೋಜನೆಗಳನ್ನು ಸಂಯೋಜಿಸಿ, ಸಬ್ಸಿಡಿ, ಬ್ಯಾಂಕ್ ಸಾಲ ಒಳಗೊಂಡಂತೆ ಪಂಚವಾರ್ಷಿಕ ಯೋಜನೆ ಸಿದ್ಧಪಡಿಸಿರಿ ಎಂದು ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಅಕ್ರಂ ಪಾಷ, ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು, ಉಪ ವಿಭಾಗಾಧಿಕಾರಿ ಹೆಚ್.ಎಲ್.ನಾಗ ರಾಜ್, ಕವಿತಾ, ವಿಶೇಷ ಭೂಸ್ವಾಧೀನಾ ಧಿಕಾರಿ ಗಿರೀಶ್, ನಂದನ್, ತಹಸೀಲ್ದಾರ್ ಗಳು, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿದ್ದರು.
ನಾಡಕಚೇರಿ-ಕಂಟ್ರೋಲ್ ರೂಂ
ಅಗತ್ಯ ಪರಿಗಣಿಸಿ ಮೊಸಳೆಹೊಸಳ್ಳಿ, ಹರಿಹರಪುರ, ಹೆರಗು, ಸೋಮನಹಳ್ಳಿ ಯಲ್ಲಿ ನಾಡಕಚೇರಿ ಆರಂಭಿಸಲು ಪ್ರಸ್ತಾ ವನೆ ಸಲ್ಲಿಸಿರಿ. ಜಿಲ್ಲೆಯಲ್ಲೊಂದು ಅತ್ಯಾ ಧುನಿಕ ಕಂಟ್ರೋಲ್ ರೂಂ ಸ್ಥಾಪಿಸಿ ಜಿಲ್ಲೆಯ ಎಲ್ಲಾ ಆಗುಹೋಗುಗಳತ್ತ ನಿಗಾವಹಿಸಿ. ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಚುರುಕುಗೊಳಿಸಿ. ಅಕ್ರಮ- ಸಕ್ರಮ ಅರ್ಜಿಗಳ ತ್ವರಿತ ವಿಲೇವಾರಿ ಮಾಡಿ. ಸರ್ಕಾರಿ ಜಾಗಗಳ ರಕ್ಷಣೆಗೆ ಅಗತ್ಯ ಕ್ರಮವಹಿಸಿ. – ಹೆಚ್.ಡಿ.ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ