ಶ್ರೀ ಜವರನಹಳ್ಳಿ ವಿರಕ್ತ ಮಠದ ಕಾರ್ಯಕ್ರಮದಲ್ಲಿ ಪ್ರಭು ಸ್ವಾಮೀಜಿ ಉಪನ್ಯಾಸ
ಹಾಸನ: ಬದುಕು ಶ್ರೇಷ್ಠಮಟ್ಟ ಕ್ಕೇರಲು ಧಾರ್ಮಿಕವಾಗಿ ಮತ್ತು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಎಂದು ಬಳ್ಳಾರಿಯ ಕಂಪ್ಲಿ ಮಠದ ಶ್ರೀ ಪ್ರಭು ಸ್ವಾಮೀಜಿ ಸಲಹೆ ನೀಡಿದರು.
ನಗರದ ಶ್ರೀ ಜವೇನಹಳ್ಳಿ ಮಠದಲ್ಲಿ ಧ್ಯಾನ ಧಾಮ ಶ್ರೀ ಜವರನಹಳ್ಳಿ ವಿರಕ್ತ ಮಠದ ಶ್ರೀ ಸಂಗಮೇಶ್ವರ ಮಹಾಸ್ವಾಮೀಜಿ 33ನೇ ಪುಣ್ಯಾರಾಧನೆಯಲ್ಲಿ ಮಾತನಾ ಡಿದ ಅವರು, ಶರಣರ ತತ್ವ ಸಿದ್ಧಾಂತ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಜೀವನ ಇರುವುದೇ ಅಲ್ಪದಿನ. ಆ ಕಾಲಾ ವಧಿಯಲ್ಲೇ ಸಮಾಜದಲ್ಲಿ ಉತ್ತಮ ಕೆಲಸ ಮಾಡಿರಿ ಎಂದು ಆಶೀರ್ವಚನ ನೀಡಿದರು.
ಕೋಳಗುಂದ ಕೋದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಮಾತ ನಾಡಿ, ಇತ್ತೀಚೆಗೆ ಜಾತಿವಾರು ಮಠಗಳ ಸ್ಥಾಪನೆಯಾಗುತ್ತಿವೆ. ಎಲ್ಲಾ ಮಠಗಳ ಉದ್ದೇಶವೂ ಸಮಾಜವನ್ನು ಉತ್ತಮಪಡಿ ಸುವುದೇ ಆಗಿದೆ. ಲಿಂಗ ಸಂಸ್ಕಾರ ಹೇಳಿ ಕೊಡುವ ಮಠ ಇದ್ದರೆ ಭಕ್ತರು ಒಳ್ಳೆಯ ದಾರಿಗೆ ಹೋಗಲು ಸಾಧ್ಯ. ಜೀವನದಲ್ಲಿ ತಪ್ಪೆಸಿಗಿದಾಗ ಮಠಕ್ಕೆ ಬಂದು ವಿಚಾರ ವಿನಿಮಯ ಮಾಡಿಕೊಂಡರೆ ಮತ್ತೆ ಸರಿದಾರಿಗೆ ಹೋಗಬಹುದು ಎಂದು ಸಲಹೆ ನೀಡಿದರು.
ಶ್ರೀ ಸಂಗಮೇಶ್ವರ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು. ಬೆಳಗಾವಿ ಮಡಿವಾಳೇಶ್ವರ ಮಠದ ಶ್ರೀಗಂಗಾಧರ ಸ್ವಾಮೀಜಿ, ಹೊಳೆ ನರಸೀಪುರ ಬನವಾಸಿಯ ಶ್ರೀನಾಗ ಭೂಷಣ ಸ್ವಾಮೀಜಿ, ಮಾಗಡಿ ರುದ್ರ ಮುನಿಶ್ವರದ ಶ್ರೀಚಂದ್ರಶೇಖರ ಸ್ವಾಮೀಜಿ, ಅರಕಲಗೂಡು ಮಠದ ಶ್ರೀಜಯದೇವ ಸ್ವಾಮೀಜಿ, ಶ್ರೀ ತೀರ್ಥಕುಮಾರ ಸ್ವಾಮೀಜಿ ಉಪಸ್ಥಿತರಿದ್ದರು.
ಮಠದಲ್ಲಿ ಬೆಳಿಗ್ಗೆಯಿಂದ ಹರಮೂರ್ತಿ, ತ್ರಿಮೂರ್ತಿ ಗುರುಗಳ ಗದ್ದುಗೆಗೆ ಅಭಿಷೇಕ, ಮಹಾಮಂಗಳಾರತಿ ನೆರವೇರಿತು. ಮಧ್ಯಾಹ್ನ ಅನ್ನದಾಸೋಹ ನಡೆಸಲಾಯಿತು.