ವೃದ್ಧಾಶ್ರಮಕ್ಕೆ ಬಂದ ಶಾಲಾ ಮಕ್ಕಳ ಕಂಡು ಹಿರಿಯರ ಕಣ್ಣಲ್ಲಿ ಮಿಂಚು!
ಹಾಸನ

ವೃದ್ಧಾಶ್ರಮಕ್ಕೆ ಬಂದ ಶಾಲಾ ಮಕ್ಕಳ ಕಂಡು ಹಿರಿಯರ ಕಣ್ಣಲ್ಲಿ ಮಿಂಚು!

June 17, 2019

ಹಾಸನ, ಜೂ.16- ಸದಾ ಶಾಲೆ, ಮನೆ, ಮನೆ ಪಾಠ ಇಲ್ಲವೇ ಮೈದಾನದಲ್ಲೇ ಇರುತ್ತಿದ್ದ ಶಾಲೆಯ ಮಕ್ಕಳು ಭಾನುವಾರ ಹೊಸದೊಂದು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿದ್ದವರಿಗೆ ಅಚ್ಚರಿ ಮೂಡಿಸಿದರು. ಮನೆಯಲ್ಲಿ ಒಬ್ಬರೋ, ಇಬ್ಬರೋ ಅಜ್ಜ- ಅಜ್ಜಿಯಂದಿರನ್ನು ಕಂಡಿದ್ದ ಮಕ್ಕಳಿಗೂ ಅಲ್ಲಿದ್ದ ಹಿರಿಯ ಜೀವಿಗಳ ಗುಂಪು ಕಂಡು ಅಚ್ಚರಿಯಾಯಿತು!

ಹಾಸನದ ವಿದ್ಯಾನಗರದಲ್ಲಿರುವ ಕ್ರೈಸ್ಟ್ ಶಾಲೆಯ ವಿದ್ಯಾರ್ಥಿಗಳನ್ನು ಗವೇನಹಳ್ಳಿ ಯಲ್ಲಿರುವ ಕಾಮಧೇನು ವೃದ್ಧಾಶ್ರಮಕ್ಕೆ ಭಾನುವಾರ ಕರೆದೊಯ್ಯಲಾಗಿತ್ತು. ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಸೇವಾ ಮನೋ ಭಾವ ಬೆಳೆಸಬೇಕೆಂಬುದೇ ಈ ಭೇಟಿ ಆಯೋಜನೆಯ ಉದ್ದೇಶವಾಗಿತ್ತು.

ಕಾಮಧೇನು (ಚೈತನ್ಯ) ವೃದ್ಧಾಶ್ರಮ ದಲ್ಲಿ ಭಾನುವಾರ `ಸೇವೆ’ ವಿಚಾರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. `ಏನಾಗಲಿ, ಮುಂದೆ ಸಾಗು ನೀ’ ಹಾಡನ್ನು ವಿದ್ಯಾರ್ಥಿ ಗಳು ಹಾಡಿದರು. ಮಿಮಿಕ್ರಿ ಹಾಗೂ ನೃತ್ಯದ ಮೂಲಕ ಹಿರಿಯ ಜೀವಗಳ ಮನಸ್ಸನ್ನು ರಂಜಿಸಿದರು. ಹಿರಿಯರಿಗೆ ಹೇಗೆ ಗೌರವ ಸಲ್ಲಿಸಬೇಕು, ಹೇಗೆ ನಡೆದುಕೊಳ್ಳಬೇಕು ಎಂಬ ಬಗೆಗೂ ಮಕ್ಕಳಿಗೆ ನೀತಿ ಪಾಠ ಹೇಳಿಕೊಡಲಾಯಿತು. ಈ ಸಂದರ್ಭ ಅಜ್ಜಿ ಯೊಬ್ಬರು ಹಾಡಿದ ಹಾಡು ಎಲ್ಲರ ಗಮನ ಸೆಳೆಯಿತು. ಮನುಷ್ಯರಾದ ನಾವು ಹೆಚ್ಚು ಹೆಚ್ಚು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಮಾತನ್ನು ಹಿರಿಯರು ಮಕ್ಕಳಿಗೆ ತಿಳಿಸಿಕೊಟ್ಟರು.

ಹಿರಿಯರಿಗಾಗಿ ಮ್ಯೂಸಿಕಲ್ ಚೇರ್ ಹಾಗೂ ಪಾಸಿಂಗ್ ದಿ ಬಾಲ್ ಆಟ ನಡೆಸ ಲಾಯಿತು. ಹಿರಿಯರನ್ನು ಮಕ್ಕಳು ಹುರಿ ದುಂಬಿಸಿದರು. ಒಂದೆರಡು ಗಂಟೆ ಕಾಲ ಹಿರಿಯರೊಂದಿಗೆ ಕಾಲ ಕಳೆದ ಮಕ್ಕಳು, ತಾವೇ ಮುಂದಾಗಿ ಹಿರಿಯರಿಗೆ ಉಪಾ ಹಾರ ಬಡಿಸಿದರು, ಹಣ್ಣು-ಹಂಪಲು ಹಂಚಿ ದರು. ಈ ಸಂದರ್ಭ ಕ್ರೈಸ್ಟ್ ಶಾಲೆಯ ಪ್ರಾಂಶು ಪಾಲ ರೆ.ಫಾದರ್ ಪ್ರೈಸಸ್ ಕೆ.ಥಾಮಸ್, ವ್ಯವಸ್ಥಾಪಕ ರೆ.ಫಾದರ್ ಜೋಸ್, ಶಿಕ್ಷಕಿ ರುಕಿಯಾ ಭಾನು ಮತ್ತಿತರರಿದ್ದರು.

Translate »