‘ವಿದ್ಯೆಗಿಂತ ಮಿಗಿಲಾದ ಆಸ್ತಿ ಮತ್ತೊಂದಿಲ್ಲ’
ಮೈಸೂರು

‘ವಿದ್ಯೆಗಿಂತ ಮಿಗಿಲಾದ ಆಸ್ತಿ ಮತ್ತೊಂದಿಲ್ಲ’

June 17, 2019

ಮೈಸೂರು, ಜೂ.16- ಮೈಸೂರಿನ ಸಮ ರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆ ವತಿಯಿಂದ ಕೆಆರ್‍ಎಸ್ ರಸ್ತೆಯಲ್ಲಿರುವ ಸಾದನಹಳ್ಳಿ ಸಪ್ತರ್ಷಿ ಗುರುಕುಲ ಸೇವಾ ಆಶ್ರಮದ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿ.ವಿ. ಮಹಾರಾಜ ಸಂಜೆ ಕಾಲೇ ಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ವಿದ್ವಾಂಸರಾದ ಡಾ.ಕೆ.ಅನಂತರಾಮು ಆಶ್ರಮದ ಮಕ್ಕಳಿಗೆ ಲೇಖನ ಸಾಮಗ್ರಿ ಗಳನ್ನು ವಿತರಿಸಿ ಮಾತನಾಡುತ್ತಾ, ವಿದ್ಯೆ ಗಿಂತ ಮಿಗಿಲಾದ ಆಸ್ತಿ ಈ ಸಮಾಜದಲ್ಲಿ ಬೇರೊಂದಿಲ್ಲ. ಏಕೆಂದರೆ ವಿದ್ಯೆಯನ್ನು ಯಾರೂ ಕೂಡ ಹಣ ಕೊಟ್ಟು ಕೊಂಡು ಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಸತತ ಅಭ್ಯಾಸ, ಏಕಾಗ್ರತೆ, ಪರಿಶ್ರಮದಿಂದ ಮಾತ್ರ ಸಾಧ್ಯ. ವಿದ್ಯೆಯನ್ನು ಕಲಿತು, ಜ್ಞಾನ ವನ್ನು ಸಂಪಾದಿಸಿ, ಬದುಕನ್ನು ಕಟ್ಟಿಕೊಳ್ಳ ಬಹುದು ಎಂದು ತಿಳಿಸಿದರು.

ಗುಡ್‍ಶೆಫರ್ಡ್ ಮಹಿಳಾ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ವೈ.ಎಸ್.ನಾಗಶ್ರೀ ಮಾತನಾಡಿದರು.

ಸಾದನಹಳ್ಳಿ ಸಪ್ತರ್ಷಿ ಗುರುಕುಲ ಆಶ್ರ ಮದ ಪೀಠಾಧ್ಯಕ್ಷ ಶ್ರೀ ಅಭಿನವ ರಾಮಾ ನುಜಾಚಾರ್ಯರು ಮಾತನಾಡಿ, ‘ಯುವ ಕರು ಜ್ಞಾನವನ್ನು ಬೆಳೆಸಿಕೊಳ್ಳುವುದರ ಜೊತೆಗೆ ದೇಶಪ್ರೇಮವನ್ನೂ ಬೆಳೆಸಿಕೊಳ್ಳ ಬೇಕು. ದೇಶ ಸುಭದ್ರವಿದ್ದಾಗ ಮಾತ್ರ ನಾವು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಆಶಿಸಿದರು.

ವೇದಿಕೆಯಲ್ಲಿ ಯುವ ವಕೀಲ ಎಸ್.ಪಿ. ಮಂಜುನಾಥ್, ಮಹಾರಾಣಿ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕಿ ಶ್ರೀಮತಿ ಚೇತನ, ಸಮರ್ಪಣಾ ಟ್ರಸ್ಟ್ ಖಜಾಂಚಿ ಹಾಗೂ ಶಾರದಾವಿಲಾಸ ಕಾಲೇಜಿನ ಕನ್ನಡ ಉಪ ನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಸಮಾಜ ಸೇವಕ ಜಿ.ಪಿ.ಹರೀಶ್, ಟ್ರಸ್ಟ್‍ನ ಸದಸ್ಯೆ ಶ್ರೀಮತಿ ಜಯಶ್ರೀ ನಾಗಭೂಷಣ್, ಕು.ಶಕ್ತಿ ಇತರರು ಉಪಸ್ಥಿತರಿದ್ದರು.

Translate »