ರಾಯರ ಆರಾಧನಾ ಮಹೋತ್ಸವದ ಸಂಭ್ರಮ
ಹಾಸನ

ರಾಯರ ಆರಾಧನಾ ಮಹೋತ್ಸವದ ಸಂಭ್ರಮ

August 29, 2018

ಬೇಲೂರು:  ಪಟ್ಟಣದ ಕೋಟೆ ಶ್ರೀ ಉತ್ತರಾಧಿಮಠದಲ್ಲಿ ಗುರುಸಾರ್ವಭೌಮ ರಾಘವೇಂದ್ರಸ್ವಾಮಿ ಅವರ 347ನೇ ಆರಾಧನಾ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು.

ಪ್ರತಿ ವರ್ಷದಂತೆ ಶ್ರೀಮಠದಲ್ಲಿ ಅನುಕ್ರಮವಾಗಿ ಪೂರ್ವಾರಾಧನೆ, ಮಧ್ಯಾರಾಧನೆ ನಂತರ ಉತ್ತರಾರಾಧನೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸೋಮವಾರದಿಂದ ಪೂಜಾ ವಿಧಿವಿಧಾನಗಳು ಆರಂಭಗೊಂಡಿದ್ದು, ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯ, ಫಲಾಮೃತ ಅಭಿಷೇಕ, ಪುಷ್ಪಾಲಂಕಾರ, ಮಧ್ಯಾಹ್ನ 12 ರಿಂದ ಪಂಡಿತರಿಂದ ಪ್ರವಚನ ಕಾರ್ಯಕ್ರಮ, ನೈವೇದ್ಯ, ಹಸ್ತೋದಕ, ಸಂಜೆ ತಾರತಮ್ಯೋಕ್ತ, ಭಜನೆ, ಭಕ್ತಿಗೀತೆ, ಸ್ವಸ್ತಿವಾಚನ, ರಥೋತ್ಸವ, ಡೋಲೋತ್ಸವ ಮತ್ತು ಮಹಾಮಂಗಳಾರತಿ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಶ್ರೀ ರಾಘವೇಂದ್ರಸ್ವಾಮಿ ಅವರ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಉತ್ತರಾದಿಮಠವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಭೂಲೋಕದ ಕಲ್ಪವೃಕ್ಷ ಎಂದೇ ಹೆಸರಾಗಿರುವ ರಾಘವೇಂದ್ರಸ್ವಾಮಿ ಅವರ ಬೃಂದಾವನವನ್ನು ಬಗೆಬಗೆ ಹೂಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಭಕ್ತರು ಮಠಕ್ಕೆ ಬೇಟಿ ನೀಡಿ ರಾಯರ ದರ್ಶನವನ್ನು ಪಡೆದರು.

ಕೋಟೆ ಶ್ರೀ ಚೆನ್ನಕೇಶವಸ್ವಾಮಿ ದೇಗುಲದ ಪಕ್ಕದಲ್ಲಿರುವ ಶ್ರೀ ಯತಿರಾಜಮಠದ ವೈಷ್ಣವಗೋಷ್ಠಿಯಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ಉತ್ತರಾದಿಮಠದ ವ್ಯವಸ್ಥಾಪಕ ಬಿ.ಎನ್.ಸುಧೀಂದ್ರ ಮಾತನಾಡಿ, ಕಲಿಯುಗದ ವರದೈವ ಶ್ರೀ ರಾಘವೇಂದ್ರ ಸ್ವಾಮಿಯ ಗುರುಸಾರ್ವಭೌಮರ 347ನೇ ಆರಾಧನಾ ಮಹೋತ್ಸವ 3 ದಿಗಳ ಕಾಲ ನಡೆಯಲಿದ್ದು ಪೂರ್ವಾರಾಧನೆ, ಮಧ್ಯಾ ರಾಧನೆ ಹಾಗೂ ಉತ್ತರರಾಧನೆಯನ್ನು ನಡೆಸಲಾಗುತ್ತದೆ. ಭಕ್ತರ ಕಲ್ಪವೃಕ್ಷ ಕಾಮಧೇನು ಎಂದು ಹೆಸರಾಗಿರುವ ರಾಘವೇಂದ್ರಸ್ವಾಮಿ ಗಳಿಗೆ ಎಲ್ಲಾ ಜಾತಿ, ಧರ್ಮ ಜನಾಂಗದವರು ಬೇಧ-ಭಾವವಿಲ್ಲದೆ ಶರಣಾಗಿ ತಮ್ಮ ಬೇಡಿಕೆಗಳನ್ನು ಮುಂದಿಡುತ್ತಾರೆ. ಬುಧವಾರ ಸಂಜೆ 4 ಗಂಟೆಗೆ ಪಟ್ಟಣದ ರಾಜಬೀದಿಯಲ್ಲಿ ಶ್ರೀ ಪ್ರಹ್ಲಾದರಾಯರ ಉತ್ಸವವನ್ನು ನಡೆಸಲಾ ಗುತ್ತಿದ್ದು, ಭಕ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

Translate »