ಸಂಕಷ್ಟದಲಿರುವ ಪ್ರವಾಹ ಪೀಡಿತ ಪ್ರದೇಶದವರಿಗೆ ನೆರವಾಗಿ: ಬಿಜೆಪಿ ವಿರುದ್ಧ ಸಚಿವ ಹೆಚ್.ಡಿ. ರೇವಣ್ಣ ಆಕ್ರೋಶ
ಹಾಸನ

ಸಂಕಷ್ಟದಲಿರುವ ಪ್ರವಾಹ ಪೀಡಿತ ಪ್ರದೇಶದವರಿಗೆ ನೆರವಾಗಿ: ಬಿಜೆಪಿ ವಿರುದ್ಧ ಸಚಿವ ಹೆಚ್.ಡಿ. ರೇವಣ್ಣ ಆಕ್ರೋಶ

August 29, 2018

ಹಾಸನ:  ಬಾರಿ ಮಳೆಯಿಂದ ಪ್ರವಾಹ ಪೀಡಿತರಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಅದನ್ನು ಬಿಟ್ಟು ಕೇವಲ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಪ್ರವಾಹದಿಂದ ಹಾಸನ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಂದಾಜು 2 ಸಾವಿರ ಕೋಟಿ ರೂ.ಗಳ ಮನೆ, ಆಸ್ತಿ ಇತರೆ ನಷ್ಟವಾಗಿದೆ. ಬಹುತೇಕ ರಸ್ತೆಗಳು ಹಾಳಾಗಿದೆ. ಅಂದಾಜು 450 ಕೋಟಿ ರೂ. ಕೊಡಗಿನ ರಸ್ತೆ ಇಲ್ಲ. ಜಿಪಂ, ಗ್ರಾಪಂ ರಸ್ತೆಗಳು ಕಾಣೆಯಾಗಿವೆ. ಹಾಸನ ಜಿಲ್ಲೆಯಲ್ಲಿಯೇ 300 ಕೋಟಿ ರೂ. ರಸ್ತೆ ಹಾಳಾಗಿದೆ. ಬಿಸಿಲೆ, ಸೋಮವಾರ ಪೇಟೆ ರಸ್ತೆ ಸಿದ್ದಪಡಿಸಲು 200 ಕೋಟಿಗೂ ಹೆಚ್ಚು ಹಣದ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಮುಖಂಡರು ಟೀಕೆ ಟಿಪ್ಪಣಿ ಮಾಡುತ್ತಿರುವುದು ಸರಿಯಲ್ಲ. ಬದಲಿಗೆ ಸಂತ್ರಸ್ತರಿಗೆ ನೆರವಾಗಿ ಎಂದರು.

ರಾಜ್ಯದ ನಾಲ್ವರು ಬಿಜೆಪಿ ಮುಖಂಡರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ರಾಜ್ಯದ ನೆರೆ ಸಂತ್ರಸ್ತರ ವಿಚಾರ ದಲ್ಲಿ ಪ್ರಧಾನಿ ಬಳಿ ಮಾತನಾಡಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಸಬೇಕು ಎಂದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಲೆನಾಡು ಭಾಗದಲ್ಲಿ ನಿರ್ಮಿಸುವ ಮರದ ಬ್ರಿಡ್ಜ್ ಮಾದರಿಯ 900 ಬ್ರಿಡ್ಜ್ ನಿರ್ಮಾಣಕ್ಕೆ 100 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈಗಾಗಲೇ ಕೊಡಗಿನಲ್ಲಿ ಕಾಮಗಾರಿ ಪ್ರಾರಂಭವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 39 ಸಾವಿರ ಕೋಟಿ ಸಾಲ ಮನ್ನಾಕ್ಕೆ ಆದೇಶಿಸಲಾಗಿದೆ. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ರೈತರ ಸಾಲ ಮನ್ನಾವಾಗುತ್ತಿರುವ ಜಿಲ್ಲೆ ಬೆಳಗಾವಿ ಆಗಿದೆ. ಜೆಡಿಎಸ್ ಮೂರು ಜಿಲ್ಲೆಗೆ ಸೀಮಿತ ಎನ್ನುವವರಿಗೆ ರೈತರ ಸಾಲ ಮನ್ನಾ ಮೂರು ಜಿಲ್ಲೆಗೆ ಮೀಸಲಾಗಿದೆಯಾ? ಎಂದು ಪ್ರಶ್ನಿಸಿದರು.

ಬೆಳಗಾಂ, ಬೀದರ್, ಬಾಗಲಕೋಟೆ ಭಾಗದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳ 2,000 ಕೋಟಿ ಹಾಗೂ 28 ಜಿಲ್ಲಾ ಬ್ಯಾಂಕ್‍ಗಳ 10,500 ಕೋಟಿ ಸಾಲ ಮನ್ನಾವಾಗುತ್ತಿದೆ. ಕಳೆದ 10 ವರ್ಷದಿಂದ ಸ್ವಂತ ಕಟ್ಟಡಗಳಿಲ್ಲದ 108 ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 600 ಕೋಟಿ ರೂ. ಹಾಗೂ ಪ್ರಾಥಮಿಕ ಶಿಕ್ಷಣಕ್ಕೆ 450 ಕೋಟಿ ರೂ. ಮೀಸಲಿಟ್ಟಿದೆ. 5,500 ಶಿಕ್ಷಕರ ನೇಮ ಕಾತಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಸರ್ಕಾರಿ ಇಂಜಿನಿಯ ರಿಂಗ್ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣ ಕಾಲೇಜು ಗಳ ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.

ಕಬ್ಬು ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಮುಂದಾ ಗಿದೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಡೈರಿ ವಿಭಾಗದಲ್ಲಿ ಇಸ್ರೇಲ್ ಮಾದರಿಯಲ್ಲಿ ಯೋಜನೆ ಸಿದ್ದ ಪಡಿಸಲಾಗಿದೆ. ಆದರೂ, ಸರ್ಕಾರ ಇನ್ನು ಟೇಕಾಫ್ ಆಗಿಲ್ಲ ಎಂದು ದೂರುವವರಿಗೆ ಏನಂತ ಕರೆಯ ಬೇಕು? ಎಂದು ವ್ಯಂಗ್ಯವಾಡಿದರು.

ಮಾಜಿ ಪ್ರಧಾನಿ ಹಾಲಿ ಸಂಸದ ಹೆಚ್.ಡಿ. ದೇವೇಗೌಡ ಅವರ ಬೆಂಬಲದಿಂದ ಇಂದು ನಾಯಕ ಜನಾಂಗದ ಮುಖಂಡರು ರಾಜಕೀಯ ಕ್ಷೇತ್ರದಲ್ಲಿ ಇದ್ದಾರೆ. ಮಾಜಿ ಪ್ರಧಾನಿ ದಿವಂಗತ ಚಂದ್ರಶೇಖರ್ ಅವರ ಮೇಲೆ ಒತ್ತಡ ತಂದು ನಾಯಕ ಸಮುದಾಯ ವನ್ನು ಎಸ್‍ಟಿ ಮೀಸಲಾತಿಗೆ ಸೇರಿಸದಿದ್ದರೆ ಇಂದು ಆ ನಾಯಕರು ಲೋಕಸಭಾ ಸದಸ್ಯರು, ಶಾಸಕರಾಗಲು ಸಾಧ್ಯವಾಗುತ್ತಿರಲಿಲ್ಲ. ಇಂತಹವರು ರಾಜ್ಯ ಸರ್ಕಾರ ಟೇಕಾಫ್ ಆಗಿಲ್ಲವೆಂದು ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಪರೋಕ್ಷವಾಗಿ ಶಾಸಕ ಶ್ರೀರಾಮುಲು ಅವರನ್ನು ಟೀಕಿಸಿದರು.

ಸಣ್ಣ ಪುಟ್ಟ ವ್ಯತ್ಯಾಸಗಳೇನೆ ಇರಲಿ ದೇಶದ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಕಾರ್ಯವನ್ನು ನಾವು ಸ್ವಾಗತಿಸಬೇಕು. ರಕ್ಷಣಾ ಸಚಿವ ರಾಗಿ ಕೊಡಗಿಗೆ ಆಗಮಿಸಿ, ಅವರ ವ್ಯಾಪ್ತಿಯಲ್ಲಿ ತಮ್ಮ ರಾಜ್ಯಸಭಾ ಅನುದಾನದಲ್ಲಿ 7 ಕೋಟಿ ಕೊಡುಗೆ ನೀಡಿ ಹೋಗಿದ್ದಾರೆ. ಆದರೆ, ನಮ್ಮ ರಾಜ್ಯದಿಂದ ಕೇಂದ್ರದ ಸಚಿವರಾದವರು ಆ ಕಡೆ ಸುಳಿದಿಲ್ಲ ಎಂದು ಕಿಡಿಕಾರಿ ದರು. ಇದೇ ತಿಂಗಳು 31 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ 2 ನಗರಸಭೆ ಹಾಗೂ 3 ಪುರಸಭೆಗಳಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ರೇವಣ್ಣ ಮತ ದಾರರಲ್ಲಿ ಮನವಿ ಮಾಡಿದರು.

Translate »