ಸಾಂತ್ವನ ಕೇಂದ್ರ ಸೇರಿದ ಮಗು ತೊರೆದಿದ್ದ ಬಾಣಂತಿ
ಹಾಸನ

ಸಾಂತ್ವನ ಕೇಂದ್ರ ಸೇರಿದ ಮಗು ತೊರೆದಿದ್ದ ಬಾಣಂತಿ

January 19, 2020

ರಾಮನಾಥಪುರ, ಜ.18-ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಹೆತ್ತ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದ ಘಟನೆ ರಾಮನಾಥಪುರ ಹೋಬಳಿ ಬಸವಾಪಟ್ಟಣ ದಿಂದ ವರದಿಯಾಗಿದ್ದು, ಸದ್ಯ ಬಾಣಂತಿ -ಮಗುವನ್ನು ಹಾಸನದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.

ರಾಮನಾಥಪುರ ಹೋಬಳಿಯ ಗ್ರಾಮ ವೊಂದರ ಮಹಿಳೆ ಶನಿವಾರ ರಾತ್ರಿ ಹೆರಿಗೆ ನೋವಿನಿಂದ ಬಸವಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ತಡರಾತ್ರಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಕೆಗೆ 10 ವರ್ಷದ ಗಂಡು ಮಗನಿದ್ದಾನೆ.

ಮಾನಸಿಕ ಅಸ್ವಸ್ಥೆ, ವಿಧವೆಯಾದ ಈಕೆ ಯನ್ನು ಹೆರಿಗೆ ನಂತರ ಯಾರೊಬ್ಬರೂ ಕರೆದೊಯ್ಯಲು ಬರಲಿಲ್ಲ. ಹೀಗಾಗಿ ಸೋಮ ವಾರ ಆಸ್ಪತ್ರೆ ಸಿಬ್ಬಂದಿಯೇ ಆಕೆಯನ್ನು ಊರಿಗೆ ಕರೆದೊಯ್ದಿದ್ದಾರೆ. ಆದರೆ ಆಕೆ ತನ್ನ ಮನೆ ತೋರದೆ ಆತಂಕ ವ್ಯಕ್ತಪಡಿಸಿದ್ದರಿಂದ ಸಿಬ್ಬಂದಿ ವಾಪಸ್ ಆಸ್ಪತ್ರೆಗೆ ಕರೆ ತಂದು ಉಪಚರಿ ಸುತ್ತಿದ್ದರು. ಆದರೆ ಬುಧವಾರ ಬೆಳಗಿನ ಜಾವ ಆಕೆ ವಾರ್ಡ್‍ನಲ್ಲೇ ಮಗು ಬಿಟ್ಟು ಕಿಟಕಿ ಗಾಜು ಒಡೆದು ಹಾರಿ ಪರಾರಿಯಾಗಿದ್ದರು.

ಘಟನೆ ಕುರಿತು ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಜೇಶ್ ಕೊಣನೂರು ಠಾಣೆ ಹಾಗೂ ಶಿಶುಪಾಲನಾ ಇಲಾಖೆಗೆ ವಿಷಯ ಮುಟ್ಟಿ ಸಿದರು. ಗುರುವಾರ ಬೆಳಿಗ್ಗೆ ಕೊಣನೂರು ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಆಕೆ ಸ್ವಲ್ಪ ಮಾನಸಿಕ ಅಸ್ವಸ್ಥಳಾಗಿದ್ದು, ಆಸ್ಪತ್ರೆಯಲ್ಲಿ ಚೆನ್ನಾಗಿ ಆರೈಕೆ ಮಾಡಲಾಗು ತ್ತಿತ್ತು. ಸಿಬ್ಬಂದಿ ಕಾವಲು ಕೂಡ ಹಾಕಲಾಗಿತ್ತು. ಬುಧವಾರ ಬೆಳಗಿನ ಜಾವ ಮಗು ಬಿಟ್ಟು ಪರಾರಿಯಾಗಿದ್ದಾಳೆ ಎಂದು ಡಾ.ರಾಜೇಶ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಬಾಣಂತಿ ಪ್ರತ್ಯಕ್ಷ: ಮಧ್ಯಾಹ್ನದ ವೇಳೆ ಬಸವಾಪಟ್ಟಣ ಹೊರ ಭಾಗದ ತೋಟ ವೊಂದರಲ್ಲಿದ್ದ ಬಾಣಂತಿಯನ್ನು ಕಂಡು ಸ್ಥಳೀಯರು ಆಸ್ಪತ್ರೆಗೆ ಸುದ್ದಿ ಮುಟ್ಟಿಸಿ ದ್ದಾರೆ. ಬಳಿಕ ಆಸ್ಪತ್ರೆ ಸಿಬ್ಬಂದಿ ಬಾಣಂತಿಯ ಜತೆ ಮಗುವನ್ನೂ ಕರೆ ತಂದು ಹಾಸನದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸೇರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾ ಧಿಕಾರಿ ಡಾ.ಸ್ವಾಮಿಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್, ಆಸ್ಪತ್ರೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

Translate »