ಶಾಸಕ ಪ್ರೀತಮ್ ಜೆ.ಗೌಡ, ಬೆಂಬಲಿಗರ ವಿರುದ್ಧ ದೂರು ದಾಖಲು
ಹಾಸನ

ಶಾಸಕ ಪ್ರೀತಮ್ ಜೆ.ಗೌಡ, ಬೆಂಬಲಿಗರ ವಿರುದ್ಧ ದೂರು ದಾಖಲು

August 31, 2018

ಹಾಸನ: -ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಹಿನ್ನೆಲೆ ಹಾಸನ ವಿಧಾನ ಸಭಾಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ಸೇರಿದಂತೆ 20 ಮಂದಿ ಬೆಂಬಲಿ ಗರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಹಾಸನ ನಗರ ಠಾಣೆ ಸಹಾಯಕ ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ಸತ್ಯನಾರಾಯಣ ನೀಡಿ ರುವ ದೂರಿನ ಮೇರೆಗೆ ಎಫ್‍ಐಆರ್ ಹಾಕಲಾಗಿದ್ದು, ಸ್ಥಳೀಯ ಚುನಾವಣೆ ಹಿನ್ನೆಲೆ ಅಕ್ರಮ ಮದ್ಯ ಹಂಚು ತ್ತಿರುವವರನ್ನು ವಶಕ್ಕೆ ಪಡೆದಿದ್ದರಿಂದ ತಡರಾತ್ರಿ ಪೆÇಲೀಸ್ ಠಾಣೆಗೆ ನುಗ್ಗಿ ಶಾಸಕ ಪ್ರೀತಮ್ ಜೆ.ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿ ಬೆಂಬಲಿ ಗರನ್ನು ಕರೆದೊಯ್ದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ವಿವರ: ಬುಧವಾರ ರಾತ್ರಿ 8ನೇ ವಾರ್ಡ್‍ನ ಅಭ್ಯರ್ಥಿ ವೇಣುಗೋಪಾಲ್ ಅಕ್ರಮ ಮದ್ಯ ಹಂಚು ತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆ ಸಿದ ನಗರ ಠಾಣೆ ಪೆÇಲೀಸರು, ವೇಣುಗೋಪಾಲ್ ಸೇರಿ ಮೂವರನ್ನ ವಶಕ್ಕೆ ಪಡೆದು ಠಾಣೆಗೆ ಕರೆ ತಂದಿ ದ್ದರು. ವಿಷಯ ತಿಳಿದು ತಡರಾತ್ರಿ ಪೆÇಲೀಸ್ ಠಾಣೆಗೆ ಆಗಮಿಸಿದ ಶಾಸಕ ಪ್ರೀತಮ್ ಜೆ.ಗೌಡ ತಮ್ಮ ಅಭ್ಯರ್ಥಿ, ಬೆಂಬಲಿಗರನ್ನು ಬಿಡು ಗಡೆ ಮಾಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ಪ್ರಕರಣ ದಾಖಲಿಸಿದ್ದು, ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದರೂ ಕೇಳದ ಶಾಸಕ ಮತ್ತು ಬೆಂಬಲಿಗರು ಪೆÇಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಆರೋಪಿಗಳನ್ನು ಠಾಣೆಯಿಂದ ಕರೆದೊಯ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಪ್ರೀತಮ್ ಜೆ.ಗೌಡ, ಅಭ್ಯರ್ಥಿ ವೇಣುಗೋಪಾಲ್ ಸೇರಿದಂತೆ 20 ಮಂದಿ ಬೆಂಗಲಿಗರ ವಿರುದ್ಧ 143, 353, 225ರಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Translate »