ಇಂದು ಹಾಸನ 5 ಸ್ಥಳೀಯ ಸಂಸ್ಥೆಗಳಿಗೆ ಮತದಾನ
ಹಾಸನ

ಇಂದು ಹಾಸನ 5 ಸ್ಥಳೀಯ ಸಂಸ್ಥೆಗಳಿಗೆ ಮತದಾನ

August 31, 2018

ಹಾಸನ: ತೀವ್ರ ಕುತೂಹಲ ಕೆರಳಿಸಿರುವ ಜಿಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನಾಳೆ(ಆ.31) ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಮುನ್ನ ದಿನವಾದ ಇಂದು ಮಸ್ಟರಿಂಗ್ ಕಾರ್ಯ ನಡೆಯಿತು. ಮತಗಟ್ಟೆಗಳಿಗೆ ಪೊಲೀಸ್ ಬಿಗಿ ಬಂದೋಬಸ್ತ್‍ನಲ್ಲಿ ಮತಯಂತ್ರ ರವಾನಿಸಲಾಯಿತು.

ನಗರದ ಸರ್ಕಾರಿ ಮಹಿಳಾ ಕಾಲೇಜು ಆವರಣ ದಿಂದ ನಿಗದಿಪಡಿಸಿದ್ದ ವಾಹನದಲ್ಲಿ ಚುನಾವಣಾ ಧಿಕಾರಿಗಳು ಮತಯಂತ್ರದೊಂದಿಗೆ ಬಿಗಿ ಭದ್ರತೆ ಯಲ್ಲಿ ಮತ ಕೇಂದ್ರಕ್ಕೆ ಪ್ರಯಾಣ ಬೆಳೆಸಿದರು.

ಮತಗಟ್ಟೆ, ಮತದಾರರ ವಿವರ: ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 135 ವಾರ್ಡ್‍ಗಳಲ್ಲಿ ಅಂತಿಮವಾಗಿ 486 ಅಭ್ಯ ರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲೆಯ 135 ವಾರ್ಡ್ ಗಳಲ್ಲಿ 274 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 107358 ಪುರುಷ, 108447 ಮಹಿಳಾ ಮತದಾ ರರು ಹಾಗೂ ಇತರೆ 7 ಸೇರಿದಂತೆ ಒಟ್ಟು 215812 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

ಹಾಸನ ನಗರಸಭೆ ವ್ಯಾಪ್ತಿಯಲ್ಲಿ 107275 ಮತ ದಾರರಿದ್ದು, 35 ವಾರ್ಡ್‍ಗಳಲ್ಲಿ 135 ಮತ ಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅರಸೀಕೆರೆ ನಗರ ಸಭೆ 31 ವಾರ್ಡ್‍ಗಳಲ್ಲಿ 50 ಮತಗಟ್ಟೆ ತೆರೆಯ ಲಾಗಿದ್ದು, 37462 ಮತದಾರರು ಮತ ಚಲಾಯಿ ಸಲಿದ್ದಾರೆ. ಚನ್ನರಾಯಪಟ್ಟಣ ಪುರಸಭೆ 23 ವಾರ್ಡ್‍ಗಳಲ್ಲಿ 33 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 29346 ಮತದಾರರು, ಹೊಳೆನರಸೀಪುರ ಪುರ ಸಭೆ 23 ವಾರ್ಡ್‍ಗಳಲ್ಲಿ 33 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 24973 ಮತದಾರರು ಮತದಾನ ಮಾಡಲಿದ್ದಾರೆ. ಸಕಲೇಶಪುರ ಪುರಸಭೆ 23 ವಾರ್ಡ್ ಗಳಲ್ಲಿ 23 ಮತಗಟ್ಟೆಗಳನ್ನು ತೆರೆಯಲಾಗಿದ್ದು, 16756 ಮತದಾರರು ಮತದಾನ ಮಾಡಲಿದ್ದಾರೆ.

ಗೆಲುವಿಗಾಗಿ ಕಸರತ್ತು: ಮತದಾನದ ಮುನ್ನ ದಿನವಾದ ಇಂದು ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತನ್ನು ಆರಂಭಿ ಸಿದ್ದು, ಮತದಾರರಿಗೆ ಹಣ, ಮದ್ಯ ಸೇರಿದಂತೆ ಉಡುಗೊರೆಯ ಮಹಾಪೂರವೇ ಹರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿರು ವಂತಹ ಕ್ಷೇತ್ರಗಳಲ್ಲಂತೂ ಅಭ್ಯರ್ಥಿಗಳು ಮತದಾ ರರಿಗೆ ಒಂದು ಮತಕ್ಕೆ 1,000, 2,000 ರೂ. ಮತ್ತು ಕೋಳಿ, ಮದ್ಯ ಮತ್ತು ಬೆಳ್ಳಿ ಪದಾರ್ಥಗಳನ್ನು ಹಂಚುವ ಮೂಲಕ ಮತದಾರರನ್ನು ಓಲೈಸುವ ಕೆಲಸ ಮಾಡುತಿದ್ದಾರೆ ಎಂದು ಪ್ರಜ್ಞಾವಂತ ಮತದಾರರು ಕಿಡಿಕಾರುತ್ತಿದ್ದಾರೆ.

Translate »