ಹಾವು ಕಚ್ಚಿ ರೈತ ಮಹಿಳೆ ಸಾವು
ಚಾಮರಾಜನಗರ

ಹಾವು ಕಚ್ಚಿ ರೈತ ಮಹಿಳೆ ಸಾವು

June 14, 2018

ಚಾಮರಾಜನಗರ:  ಹಾವು ಕಚ್ಚಿದ ಪರಿಣಾಮ ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಮುರಟಿಪಾಳ್ಯ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೀರಣ್ಣ ಎಂಬುವರ ಪತ್ನಿ ಭಾಗ್ಯಲಕ್ಷ್ಮೀ (20) ಮೃತ ರೈತ ಮಹಿಳೆ.

ಘಟನೆಯ ವಿವರ: ಭಾಗ್ಯಲಕ್ಷ್ಮೀ ಅವರು ಬುಧವಾರ ಬೆಳಗಿನ ಜಾವ ಹಸುವಿಗೆ ಮೇವು ಹಾಕಲು ತೆರಳಿದ್ದಾರೆ. ಮೇಲಿನ ಗುಡ್ಡೆಗೆ ಕೈ ಹಾಕಿದಾಗ ಹಾವು ಕಚ್ಚಿದೆ. ಇದರಿಂದ ಗಾಯಗೊಂಡ ಭಾಗ್ಯಲಕ್ಷ್ಮೀ ಅವರನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಬೆಳಿಗ್ಗೆ 6.15ಕ್ಕೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿ ಆಗದೆ ಬೆಳಿಗ್ಗೆ 6.45ಕ್ಕೆ ಮೃತರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »