ವ್ಯಕ್ತಿಯ ಅನುಮಾನಾಸ್ಪದ ಸಾವು
ಹಾಸನ

ವ್ಯಕ್ತಿಯ ಅನುಮಾನಾಸ್ಪದ ಸಾವು

April 27, 2018

ಹಾಸನ: ಖಾಸಗಿ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಂಜಿನಿಯರ್ ವಿಜಯಕುಮಾರ್ (54) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ನಗರದ ಹೌಸಿಂಗ್‍ಬೋರ್ಡ್‍ನಲ್ಲಿ ವಾಸವಾಗಿರುವ ವಿಜಯಕುಮಾರ್ ಅವರು ವಿದ್ಯಾನಗರದ ಗೌರಿಕೊಪ್ಪಲಿನ ಸರಕಾರಿ ಪ್ರೌಢಶಾಲೆಯ ಬಳಿ ಮುಖ್ಯರಸ್ತೆಯ ಬದಿ ಚರಂಡಿಯೊಂದರಲ್ಲಿ ಮೃತ ದೇಹ ದೊರೆತಿದೆ. ಚರಂಡಿ ಒಳಗೆ ಗಲೀಜು ಇದ್ದು, ಮುಖ ಒಳಗೆ ಮಾಡಿಕೊಂಡು ಬಿದ್ದಂತೆ ಕಾಣ ಸಿದೆ. ರಾತ್ರಿ ಕಂಠಪೂರ್ತಿ ಕುಡಿದು ಹೋಗುವಾಗ ಬಿದ್ದಿರಬಹುದೇ, ಇಲ್ಲವೇ ಇತರರೊಂದಿಗೆ ಜಗಳ ನಡೆದು ಯಾರಾದರೂ ತಳ್ಳಿರಬಹುದೇ, ಯಾವ ರೀತಿ ಸಾವನ್ನಪ್ಪಿರಬಹುದು ಎಂಬುದು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ. ಮೃತ ವಿಜಯಕುಮಾರ್ ಸಹೋದರ ಹೇಳುವಂತೆ ಹಿಂದೆಯೇ ತನ್ನ ಹೆಂಡತಿಯೊಂದಿಗೆ ವಿಚ್ಛೇದನ ಕೂಡ ಆಗಿತ್ತು. ಈತನಿಗೆ ಒಬ್ಬಳು ಮಗಳು ಕೂಡ ಇದ್ದಾಳೆ. ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುವ ಈತನು ನಂತರದಲ್ಲಿ ಮಾನಸಿಕ ಅಸ್ವಸ್ಥರಾಗಿ ದ್ದರು. ಮದ್ಯಪಾನ ಮಾಡಿ ಹೋಗುವಾಗ ಚರಂಡಿಯಲ್ಲಿ ರಾತ್ರಿ ಬಿದ್ದಿರಬಹುದು ಎಂದು ಅನುಮಾನಿಸಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದರು.

Translate »