ತಾಯಿ, ಮಗಳ ಕೊಂದವನಿಗೆ ಜೀವಾವಧಿ ಶಿಕ್ಷೆ
ಹಾಸನ

ತಾಯಿ, ಮಗಳ ಕೊಂದವನಿಗೆ ಜೀವಾವಧಿ ಶಿಕ್ಷೆ

April 27, 2018

ಹಾಸನ: ತಾಯಿ ಮತ್ತು ಮಗಳನ್ನು ಕೊಲೆ ಮಾಡಿದ ಆರೋಪಿಗೆ ಹಾಸನದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬಿ.ಡಿ.ಸಂದೀಪ ಶಿಕ್ಷೆಗೊಳಗಾದ ಅಪರಾಧಿ. 2014ರ ಡಿ.17ರಂದು ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕು, ಬೇಸೂರು ಗ್ರಾಮದ ಹೆಚ್.ಕೆ.ಶಿವಕುಮಾರ್ ಪತ್ನಿ ಲೋಕೇಶ್ವರಿ ಮತ್ತು ಅವರ ಮಗಳು ಶುಭಾಳನ್ನು ಕೊಲೆ ಮಾಡಿ ಗುರುತು ಸಿಗ ದಂತೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದ.

ಅಂದು ಶಿವಕುಮಾರ್ ಮನೆಗೆ ಬಂದು ಕಳವು ಮಾಡಿದ್ದ ಚಿನ್ನದ ಉಂಗುರ ಗಳನ್ನು ಕೊಡುವಂತೆ ಲೋಕೇಶ್ವರಿಗೆ ಆಗಾಗ್ಗೆ ಒತ್ತಾಯ ಮಾಡುತ್ತಿದ್ದ. ಉಂಗುರ ಕೊಡುವ ವಿಚಾರದಲ್ಲಿ ಆಕೆಯೊಂದಿಗೆ ಜಗಳವಾಡಿ, ಕುಡುಗೋಲಿನಿಂದ ಕುತ್ತಿಗೆಗೆ, ಹಣೆಗೆ ಹೊಡೆದು ಗಾಯಗೊಳಿಸಿ ಕೆಳಗೆ ಬೀಳಿಸಿ, ರುಬ್ಬವ ಕಲ್ಲಿನಿಂದ ತಲೆಯ ಹಿಂಭಾಗಕ್ಕೆ ಜಜ್ಜಿ ಕೊಲೆ ಮಾಡಿ ಆಕೆಯ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ತೆಗೆದುಕೊಂಡು ಕೊಲೆ ಮರೆ ಮಾಚಲು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಲೋಕೇಶ್ವರಿ ಮಗಳು ಒಂದೂ ವರೆ ವರ್ಷದ ಶುಭಾಳನ್ನು ಅಡುಗೆ ಮನೆಯಲ್ಲಿಯೇ ಬಿಟ್ಟು ಬಾಗಿಲು ಮುಚ್ಚಿ ಚಿಲಕ ಹಾಕಿ ಹೋಗಿದ್ದು, ಶುಭಾಗೆ ಬೆಂಕಿ ತಗುಲಿ ಮೃತ ಪಡಲು ಸಹ ಆರೋಪಿ ಕಾರಣ ನಾಗಿದ್ದ. ಈತನ ವಿರುದ್ಧ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು. ಹಾಸನದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಚಂದ್ರಶೇಖರ್ ಮರಗೂರು ರವರು ಆರೋಪಿಯ ಮೇಲಿರುವ ದೋಷಾ ರೋಪಣೆ ಸಾಬೀತಾಗಿದೆ ಎಂದು ತೀರ್ಮಾ ನಿಸಿ ಸಂದೀಪನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಕೃಷ್ಣ ಜಿ. ದೇಶಭಂಡಾರಿ ವಾದ ಮಂಡಿಸಿದ್ದರು.

Translate »