ಪರಿಹಾರ ನೀಡುವಂತೆ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಿಗೆ ಆದೇಶ
ಹಾಸನ

ಪರಿಹಾರ ನೀಡುವಂತೆ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಿಗೆ ಆದೇಶ

April 27, 2018

ಹಾಸನ: ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಎ.ಲೋಕೇಶ್‍ಕುಮಾರ್ ಹಾಗೂ ಮಹಿಳಾ ಸದಸ್ಯೆ ಬಿ.ಕೆ.ಶಾಂತಲಾ ಅವರನ್ನೊಳ ಗೊಂಡ ಪೀಠವು, ಮೈಸೂರು ನಗರದ ಕೆ.ಸಿ.ಶ್ರೀನಿವಾಸ ಮೂರ್ತಿ ಇವರು ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡ, ಹಾಸನ ಇವರ ವಿರುದ್ಧ ಸಲ್ಲಿಸಿದ್ದ ಪಿರ್ಯಾಧಿಗೆ ಸಂಬಂಧಿಸಿದಂತೆ ಎದುರುದಾರರು ಉಂಟುಮಾಡಿದ ಸೇವಾನ್ಯೂನತೆಗಾಗಿ 25,000 ರೂ. ಹಾಗೂ ಪಿರ್ಯಾದಿನ ಖರ್ಚು 5,000 ರೂ.ಗಳನ್ನು ಒಂದು ತಿಂಗಳೊಳಗಾಗಿ ಕೊಡುವಂತೆ ಆದೇಶಿಸಿದ್ದಾರೆ.

ಫಿರ್ಯಾದು ವಿವರ: ಕೆ.ಸಿ.ಶ್ರೀನಿವಾಸ ಮೂರ್ತಿ ಬ್ಯಾಂಕ್ ಆಫ್ ಬರೋಡದಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಸದರಿ ಬ್ಯಾಂಕಿಗೆ ಸಂಬಂಧಿಸಿದ ಚೆಕ್ ಪುಸ್ತಕ ವನ್ನು ಶ್ರೀನಿವಾಸ ಮೂರ್ತಿಯವರ ವಾಹನ ಚಾಲಕನಾದ ನಾಗೇಶ್ ಕಳ್ಳತನ ಮಾಡಿದ್ದ. ಈ ಸಂಬಂಧ ಸದರಿ ನಾಗೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನಂತರ ಎದುರುದಾರ ಬ್ಯಾಂಕಿಗೆ ನಿಗದಿತ ಶುಲ್ಕವನ್ನು ಪಾವತಿಸಿ ನಗದೀಕರಣ ತಡೆಹಿಡಿಯಲು ದಿನಾಂಕ 11.02.2015 ರಂದು ಮನವಿ ಪತ್ರವನ್ನು ಸಲ್ಲಿಸಿದ್ದರು. ಮುಂದುವರೆದು ಕರ್ನಾಟಕ ಬ್ಯಾಂಕಿನಿಂದ ಎದುರುದಾರರ ಬ್ಯಾಂಕ್‍ಗೆ ಬಂದಂತಹ ಚೆಕ್ ಸಂಖ್ಯೆ 14ಕ್ಕೆ ನಗದೀಕರಣ ತಡೆಹಿಡಿಯಲಾಗಿದೆ ಎಂಬ ಷರಾ/ಹಿಂಬರಹವನ್ನು ಬರೆಯದೇ ಖಾತೆಯಲ್ಲಿ ಹಣ ಇಲ್ಲ ಎಂಬ ಹಿಂಬರಹದೊಂದಿಗೆ 01.07.2015 ರಂದು ಚೆಕ್ಕನ್ನು ಹಿಂದಿರುಗಿಸಿದ್ದರು. ಈ ಕಾರಣದಿಂದ ಶ್ರೀನಿವಾಸ ಮೂರ್ತಿ ಇವರ ವಿರುದ್ದ ನೆಗೋಷಿಯಬಲ್ ಇನ್‍ಸ್ಟ್ರು ಮೆಂಟ್ ಕಾಯ್ದೆ ಅಡಿಯಲ್ಲಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಹೊಳೆನರಸೀಪುರದಲ್ಲಿ ರೂ. 8,00,000/- ಗಳ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಹೀಗೆ ತಮ್ಮದಲ್ಲದ ತಪ್ಪಿಗೆ ಹಾಗೂ ಎದುರುದಾರ ಬ್ಯಾಂಕ್‍ನವರು ನಿರ್ಲಕ್ಷ್ಯತನದಿಂದ ಈ ಎಲ್ಲ ಪ್ರಮಾದಗಳು ಉಂಟಾಗಿದ್ದು, ತಮಗೆ ಸೇವಾನ್ಯೂನತೆ ಉಂಟುಮಾಡಿರುತ್ತಾರೆಂದು ಆರೋಪಿಸಿ, ಎದುರುದಾರರಿಂದ ಉಂಟಾದ ಸೇವಾನ್ಯೂ ನತೆಗಾಗಿ ರೂ. 10,20,000/- ಗಳ ಪರಿಹಾರ ಕೊಡಿಸು ವಂತೆ ವೇದಿಕೆಯಲ್ಲಿ ಕೋರಿದ್ದರು.

ದಾಖಲಾತಿಗಳನ್ನು, ವಾದ-ವಿವಾದಗಳನ್ನು ಪರಿಶೀಲಿಸಿದ ಪೀಠವು, ಶ್ರೀನಿವಾಸ ಮೂರ್ತಿ ನಗದೀಕರಣ ತಡೆಹಿಡಿ ಯಲು ಎದುರುದಾರರಿಗೆ ಮನವಿ ಪತ್ರ ನೀಡಿದ್ದರೂ ಸಹ ಎದುರುದಾರರು ಚೆಕ್ಕಿನ ಹಿಂಭಾಗ ನಗದೀಕರಣ ತಡೆಹಿಡಿಯಲಾಗಿದೆ ಎಂಬ ಹಿಂಬರಹ ಬರೆಯದೇ ಎಂಬ ಹಿಂಬರಹ ಬರೆದು ಚೆಕ್ಕನ್ನು ಹಿಂದಿರಿಗಿಸಿರು ವುದು ದಾಖಲೆಗಳ ಮುಖಾಂತರ ಕಂಡುಬಂದಿರುತ್ತದೆ.

ಈ ರೀತಿ ಎದುರುದಾರರು ಪಿರ್ಯಾದುದಾರರಾದ ಶ್ರೀನಿವಾಸ ಮೂರ್ತಿಯವರಿಗೆ ಸೇವಾನ್ಯೂನತೆ ಎಸಗಿರುವುದು ಧೃಡಪಟ್ಟಿರುತ್ತದೆ. ಶ್ರೀನಿವಾಸಮೂರ್ತಿ ವಿರುದ್ಧ ದಾಖಲಾಗಿ ರುವ ಪ್ರಕರಣದ ವಿರುದ್ಧ ಹೋರಾಡಲು ಸಾಕಷ್ಟು ಅವಕಾಶ ಗಳಿರುತ್ತದೆ. ಆದ್ದರಿಂದ ಪಿರ್ಯಾದುದಾರರಾದ ಶ್ರೀನಿವಾಸ ಮೂರ್ತಿ ಎದುರುದಾರರಿಂದ ಅನುಭವಿಸಿದ ಸೇವಾ ನ್ಯೂನತೆಗಾಗಿ ರೂ. 25,000/- ಹಾಗೂ ಪಿರ್ಯಾದಿನ ಖರ್ಚೆಂದು ರೂ.5,000/- ಪರಿಹಾರ ಪಡೆಯಲು ಬಾಧ್ಯಸ್ಥರಾಗಿರುತ್ತಾರೆ ಹಾಗೂ ಸದರಿ ರೂ. 30,000/- ಪರಿಹಾರ ಮೊತ್ತವನ್ನು ಒಂದು ತಿಂಗಳೊಳಗೆ ಪಾವತಿ ಸುವಂತೆ, ತಪ್ಪಿದ್ದಲ್ಲಿ ಪೂರ್ತಿ ಹಣ ಸಂದಾಯವಾಗು ವವರೆಗೂ ಸಾಲಿಯಾನ ಶೇ. 6% ರಂತೆ ಬಡ್ಡಿ ಪಾವತಿಸ ಬೇಕೆಂದು ಎದುರುದಾರರಿಗೆ ಆದೇಶ ಹೊರಡಿಸಿದೆ.

Translate »