ಅರಸೀಕೆರೆ: ಭಾರತೀಯ ವಾಯು ಸೈನ್ಯದ ವಿಂಗ್ ಕಮಾಂಡರ್ ಅಭಿನಂದನ್ ಎಲ್ಲರಿಗೂ ಸ್ಫೂರ್ತಿಯಾಗಿ ದ್ದಾರೆ ಎಂದು ಜೈನ್ ಸಮುದಾಯದ ಗುರುಗಳಾದ ರವೀಂದ್ರಮುನಿ ಹೇಳಿದರು.
ನಗರದ ಪೇಟೆ ಬೀದಿಯಲ್ಲಿರುವ ಜೈನ್ ಸ್ಥಾನಿಕ್‍ನಲ್ಲಿ ಸಮಾಜದಿಂದ ನಡೆದ ಅಭಿ ನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಹಿಂಸವಾದಿ ಜೈನ ಧರ್ಮದಲ್ಲಿ ಹುಟ್ಟಿ ಬೆಳೆÀದ ಅಭಿನಂದನ್ ಇಂದು ಎಲ್ಲರಿಗೂ ಮಾದರಿಯಾಗಿ ಭಾರತಾಂಬೆÉಯ ಹೆಮ್ಮೆಯ ಪುತ್ರರಾಗಿದ್ದಾರೆ ಎಂದು ತಿಳಿಸಿದರು.
ಗುರುಗಳಾದ ರಮಣೀಕ ಮುನಿ ಮಾತ ನಾಡಿ, ಇಂದಿನ ದಿನಗಳಲ್ಲಿ ಧಾರ್ಮಿಕ ಜೀವನದಲ್ಲಿ ಎಲ್ಲರೂ ಆಸಕ್ತಿ ತೋರಿಸದೇ ಬೋಗದ ಜೀವನದ ಕಡೆ ಗಮನ ಹರಿಸು ತ್ತಿದ್ದಾರೆ. ಆ ಭ್ರಮೆಯಿಂದ ಹೊರ ಬಂದು ದೇಶದ ವಾಸ್ತವಾಂಶವನ್ನು ಅರಿಯ ಬೇಕು. ಬೋಗ ಎಂಬುದು ಜೀವನದಲ್ಲಿ ಕ್ಷಣಿಕವಾಗಿದ್ದು, ಧಾರ್ಮಿಕತೆಯೇ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತದೆ ಎಂಬುದನ್ನು ಅರಿಯಬೇಕು ಎಂದು ತಿಳಿಸಿದರು.
ಜೈನ್ ಸಂಘದ ಉಪಾಧ್ಯಕ್ಷ ಚೇತನ್ ಜೈನ್ ಮಾತನಾಡಿ, ಅಭಿನಂದನ್ ಇಂದು ವಿಶ್ವಕ್ಕೆ ಅಭಿನಂದನಾರ್ಹರಾಗಿದ್ದಾರೆ. ಅವರ ದಿಟ್ಟತನ, ಶೌರ್ಯ ಎಲ್ಲರಿಗೂ ಸ್ಫೂರ್ತಿಯಾಗಿದೆ. ತನು, ಮನ ಮತ್ತು ಧನಗಳಿಂದ ತನ್ನನ್ನು ತಾನು ಅರ್ಪಿಸಿ ಕೊಂಡಿರುವ ಜೈನ ಸಮುದಾಯದಲ್ಲಿ ಅವರು ಗುರುತಿಸಿಕೊಂಡಿರುವುದು ನಮಗೆಲ್ಲ ಹೆಮ್ಮೆಯಾಗಿದೆ ಎಂದರು.
ಈ ವೇಳೆ ಅಧ್ಯಕ್ಷ ಮಹಾವೀರ್ ಬೋಹರ್, ಚೇತನ್ ಬೋಹರ್ ಮಾತ ನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಮೋಹನ್ ಲಾಲ್ ಬೋಹರ್, ಜಯಂತ್‍ಲಾಲ್, ಮೋಹನ್ ಲಾಲ್, ಸುನೀಲ್‍ಜೈನ್, ಜಿತೇಂದ್ರ, ನರೇಶ್, ವಿನೋದ್, ವರುಣಾ, ಅಮೀತ್ ಜೈನ್, ಅಮರ್‍ಜೀತ್ ಇದ್ದರು.