ಅಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಎಸಿ ಸೂಚನೆ
ಹಾಸನ

ಅಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಎಸಿ ಸೂಚನೆ

May 10, 2019

ಅರಸೀಕೆರೆ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಓಗಳು ಆಯಾ ಗ್ರಾಮಗಳಲ್ಲೇ ವಾಸ್ತವ್ಯ ಹೂಡುವುದರ ಮೂಲಕ ಬರಪೀಡಿತ ಪ್ರದೇಶಗಳ ಕುಡಿಯುವ ನೀರು ಮತ್ತು ಇನ್ನಿತರೇ ಸಮಸ್ಯೆಗಳ ಮಾಹಿತಿಯನ್ನು ಮೇಲಧಿಕಾರಿಗಳಿಗೆ ರವಾನಿಬೇಕು ಎಂದು ಹಾಸನ ಜಿಲ್ಲಾ ಉಪ ವಿಭಾಗಾಧಿಕಾರಿ ಡಾ.ನಾಗರಾಜು ಸೂಚನೆ ನೀಡಿದರು.

ನಗರದ ತಾಲೂಕು ಕಚೇರಿಯಲ್ಲಿ ಗುರುವಾರ ನಡೆದ ತಾಲೂಕಿನ 5 ಹೋಬಳಿಗಳ ಶಿರಸ್ತೆದಾರ್, ರಾಜಸ್ವ, ಪಿಡಿಓ ಸೇರಿದಂತೆ ವಿವಿಧ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕುಡಿಯುವ ನೀರು ಸಮಸ್ಯೆ ಇಲ್ಲದಿದ್ದರೂ ಸದಾ ಜಾಗೃತರಾಗಿರು ವಂತೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಲೂಕಿನ ಕಣಕಟ್ಟೆ ಹೋಬಳಿಯಲ್ಲಿ ಮೇವಿನ ಕೊರತೆ ಇದೆ ಎಂದು ಮಾಹಿತಿ ಲಭ್ಯವಾಗಿದ್ದು, ಮೇವಿನ ಬ್ಯಾಂಕ್ ತೆರೆ ಯಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾಪನೆಯನ್ನು ಕಳುಹಿಸಲಾಗಿದೆ. ಕುಡಿ ಯುವ ನೀರು ಸರಬರಾಜು ಮಾಡಲು ಜಿಲ್ಲಾಡಳಿತಕ್ಕೆ ಯಾವುದೇ ಹಣ ತೊಂದರೆ ಇರುವುದಿಲ್ಲ. ಗ್ರಾಮ ಲೆಕ್ಕಾಧಿ ಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಮೂಲಗಳಿಂದ ಸರಬರಾಜು ಮಾಡುತ್ತಿರುವ ಕುಡಿಯುವ ನೀರಿನ ವೆಚ್ಚಗಳ ಬಗ್ಗೆ ಆಯಾ ದಿನಗಳಂದೇ ಸೂಕ್ತ ದಾಖಲೆಗಳ ಮೂಲಕ ಮೇಲಧಿ ಕಾರಿಗಳಿಗೆ ಮಾಹಿತಿ ನೀಡುವುದರ ಮೂಲಕ ಹಣ ಬಿಡುಗಡೆ ಮಾಡಿಸಿಕೊ ಳ್ಳಬೇಕು ಎಂದರು.

ತಾಲೂಕಿನ ಹಲವು ಕಡೆ ಬಾಡಿಗೆ ಆಧಾರ ಮೇಲೆ ಬೋರ್‍ವೇಲ್‍ಗಳನ್ನು ಮಾಸಿಕ 20 ಸಾವಿರಕ್ಕೆ ರೂ.ಗಳಿಗೆ ಪಡೆಯಲಾಗಿದೆ. ಪರ್ಯಾಯವಾಗಿ ಕುಡಿಯುವ ನೀರು ಸರಬರಾಜಿಗೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಹಿಂಜರಿ ಯಬಾರದು ಎಂದು ತಿಳಿಸಿದರು.
ತಾಲೂಕಿನ ಜಾವಗಲ್, ಬಾಣಾವರ, ಗಂಡಸಿ, ಕಣಕಟ್ಟೆ ಹೋಬಳಿ ಕೇಂದ್ರಗಳಲ್ಲಿ ಸಾಕಷ್ಟು ಜನಸಂಖ್ಯೆಯೊಂದಿಗೆ ಗೃಹ ನಿರ್ಮಾಣ ಹೆಚ್ಚುತ್ತಿವೆ. ಈ ಬೆಳವಣಿಗೆಗ ಳಿಂದ ಕಸ ವಿಲೇವಾರಿ ಮತ್ತು ತ್ಯಾಜ್ಯ ವಸ್ತುಗಳ ಸಂಗ್ರಹಣೆಗಾಗಿ ಸೂಕ್ತ ಸರ್ಕಾರಿ ಸ್ಥಳಗಳನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಡಿಓಗಳು ಕಾಯ್ದಿರಿಸ ಬೇಕಾಗಿದೆ ಎಂದರು.
ತಾಲೂಕಿನಲ್ಲಿ ಕುಡಿಯುವ ನೀರು ಸಮಸ್ಯೆ ತಾಂಡವಾಡುತ್ತಿದ್ದು, ಜಾನು ವಾರುಗಳಿಗೆ ಮೇವಿನ ಸಮಸ್ಯೆಯನ್ನು ನೀಗಿಸಲು ನೋಡಲ್ ಅಧಿಕಾರಿಗಳ ತಂಡವನ್ನು ಈಗಾಗಲೇ ರಚಿಸಲಾಗಿದೆ. ಈ ತಂಡದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ, ಪಿಡಿಓಗಳು, ಕಂದಾಯ ಇಲಾಖೆ ಅಧಿ ಕಾರಿಗಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಮಾಹಿತಿ ಸಂಗ್ರಹಿಸಲಿದ್ದಾರೆ. ತುರ್ತು ಪರಿಸ್ಥಿತಿ ಮಾದರಿಯಲ್ಲಿ ನಿಗಾ ವಹಿಸಲು ಜಿಲ್ಲಾಧಿಕಾರಿಗಳು ಈಗಾಗಲೇ ಅಧಿಕಾರಿ ಗಳಿಗೆ ನಿರ್ದೇಶನ ನೀಡಿದ್ದಾರೆ ಎಂದರು.

ಸಭೆಯಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್, ಉಪ ತಹಸೀಲ್ದಾರ್ ಫÀಲಾಕ್ಷಯ್ಯ, ನಗರಸಭೆ ಪೌರಾಯುಕ್ತ ಚಲಪತಿ, ಶಿರಸ್ತೆದಾರ್ ಪುಟ್ಟಪ್ಪ, ಕಸಬಾ ಹೊಬಳಿ ರಾಜಸ್ವ ಮಂಜುನಾಥ್, ಗಂಡಸಿ ಹೋಬಳಿ ರಾಜಸ್ವ ಉಮೆಶ್, ಅರಣ್ಯ ಇಲಾಖೆಯ ಆರ್‍ಎಫ್‍ಓ ದಯಾನಂದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರ ಶಿವಮೂರ್ತಿ, ಬಿಆರ್‍ಸಿ ಗಂಗಾಧರ್ ಸ್ವಾಮಿ ಸೇರಿದಂತೆ ಇನ್ನಿತರೇ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಹಾಯವಾಣಿ ಸ್ಥಾಪನೆ
ತಾಲೂಕಿನ 5 ಹೋಬಳಿಗಳಿಗೆ ಕುಡಿಯುವ ನೀರು ಸರಬರಾಜಿಗಾಗಿ ವಿವಿಧೆಡೆ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಅರಸೀಕೆರೆ ನಗರದ ತಾಲೂಕು ಕಚೇರಿಯಲ್ಲಿ ದೂ.ಸಂಖ್ಯೆ 08174 232271, ತಾಲೂಕು ಪಂಚಾಯಿತಿಯ ದೂ.ಸಂಖ್ಯೆ 08174 232274, ನಗರಸಭೆ ದೂ.ಸಂಖ್ಯೆ 08174 234849, ನೋಡಲ್ ಅಧಿಕಾರಿ ಶಿವನಂಜಪ್ಪ ಮೊ. 9448919658, ಬಾಣಾವರ ಹೋಬಳಿ ನೋಡಲ್ ಅಧಿಕಾರಿ ಮೋಹನ್‍ಕುಮಾರ್ ಮೊ. 9448741124, ಗಂಡಸಿ ಹೋಬಳಿಯ ನೋಡಲ್ ಅಧಿಕಾರಿ ಶಿವಕುಮರ್ ಮೊ. 9632745241, ಕಣಕಟ್ಟೆ ಹೋಬಳಿ ನೋಡಲ್ ಅಧಿಕಾರಿ ಹೆಚ್.ಎಸ್.ಹರಿಶ್ ಮೊ. 8277931725 ಮತ್ತು ಜಾವಗಲ್ ಹೊಬಳಿ ನೋಡಲ್ ಅಧಿಕಾರಿ ಸಚಿನ್ ಮೊ. 9480823035 ಮೂಲಕ ಸಂಪರ್ಕಿಸಲು ಸಾರ್ವಜನಿಕರಲ್ಲಿ ಉಪ ವಿಭಾಗಾಧಿಕಾರಿಗಳನ್ನು ಕೋರಿದರು.

Translate »