ವಿಕಲಚೇತನರಿಗೆ ಮೀಸಲಿರಿಸಿರುವ ಹಣ ವೆಚ್ಚ ಮಾಡಲು ಎಡಿಸಿ ಸೂಚನೆ
ಹಾಸನ

ವಿಕಲಚೇತನರಿಗೆ ಮೀಸಲಿರಿಸಿರುವ ಹಣ ವೆಚ್ಚ ಮಾಡಲು ಎಡಿಸಿ ಸೂಚನೆ

December 28, 2018

ಹಾಸನ: ವಿವಿಧ ಇಲಾಖೆ ಗಳಡಿಯಲ್ಲಿ ವಿಕಲಚೇತನರಿಗೆ ಮೀಸಲಿರಿ ಸಿರುವ ಶೇ.5ರ ಹಣವನ್ನು ಜನವರಿ ಅಂತ್ಯದೊಳಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡು ವಂತೆ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ನಡೆದ ವಿಕಲಚೇತನರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಗವಿಕಲತೆ ಶೀಘ್ರ ಪತ್ತೆ ಹಚ್ಚುವಿಕೆ ಕೇಂದ್ರದ ಕಾರ್ಯ ನಿರ್ವಹಣೆ ಬಗ್ಗೆ ಮಾತ ನಾಡುತ್ತಾ, ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸ ಕರು ಇದರ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ಜನರು ಇದರ ಪ್ರಯೋಜನ ಪಡೆ ಯುವಂತೆ ಕ್ರಮವಹಿಸಲು ತಿಳಿಸಿದರು.

ವಿಕಲಚೇತನರ ಮಾಸಾಶನ ಪಡೆ ಯುತ್ತಿರುವ ಅನರ್ಹ ಫಲಾನುಭವಿ ಗಳನ್ನು ಗುರುತಿಸಿ ಮಾಸಾಶನ ರದ್ದುಪಡಿ ಸುವಂತೆ ಹಾಗೂ ಮಾಸಾಶನ ಪಡೆಯು ತ್ತಿರುವ ವಿಕಲಚೇತನ ಫಲಾನುಭವಿಗಳ ಪಟ್ಟಿಯ ಪರಿಶೀಲನೆಗೆ ಒಳಪಡಿಸಲು ಎಲ್ಲಾ ತಹಶೀಲ್ದಾರರು ಜಿಲ್ಲಾ ಅಂಗವಿಕ ಲರ ಕಲ್ಯಾಣಾಧಿಕಾರಿಗಳಿಗೆ ಪರಿಶೀಲನೆಗೆ ಕಳುಹಿಸಿಕೊಡಲು ಸೂಚಿಸಿದರು.

ಸರ್ಕಾರಿ ನೌಕರಿಯಲ್ಲಿರುವವರು ಅವರ ತಂದೆ, ತಾಯಿಗೆ ವೃದ್ದಾಪ್ಯ ವೇತನ ಸೌಲಭ್ಯ ಮಾಡಿಸಿದ್ದಾರೆ ಎಂದು ದೂರುಗಳು ಕೇಳಿ ಬರುತ್ತಿವೆ. ಅಧಿಕಾರಿಗಳು ಪರಿಶೀಲಿಸಿ ಕ್ರಮವಹಿಸುವಂತೆ ಸೂಚಿಸಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ದಲ್ಲಿ ವಿಕಲಚೇತನರಿಗೋಸ್ಕರ ರ್ಯಾಂಪ್ ಅಳವಡಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರಲ್ಲದೆ, ಎಲ್ಲಾ ಸರ್ಕಾರಿ ಕಚೇರಿ ಗಳಲ್ಲಿ ಅಡೆತಡೆ ರಹಿತ ವಾತಾವರಣ ನಿರ್ಮಿಸಿರುವ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಅರ್ಹ ವಿಕಲಚೇತನರಿಗೆ ಲೈಸೆನ್ಸ್ ನೀಡಿರುವ ಕುರಿತು ಚರ್ಚಿಸಲಾಗಿ ಆದ್ಯತೆ ಮೇರೆಗೆ ಪರಿಗಣಿಸಲಾಗುವುದೆಂದು ಆರ್.ಟಿ.ಓ ಅಧಿಕಾರಿ ತಿಳಿಸಿದರು.

ಪರಿಶಿಷ್ಟ ಜಾತಿ/ಪಂಗಡ, ಅಲ್ಪಸಂಖ್ಯಾತರ, ಡಿ.ದೇವರಾಜು ಅರಸು ನಿಗಮಗಳ ವತಿ ಯಿಂದ ಸಾಲ ಸೌಲಭ್ಯಗಳ ಪ್ರಗತಿ ಪರಿಶೀಲಿಸಿ ದರು. ಸದರಿ ಸಭೆಯಲ್ಲಿ ಚರ್ಚಿಸಿದ ವಿಷಯ ಗಳ ಕುರಿತು 2019ರ ಜನವರಿ ಮಾಹೆ ಯಲ್ಲಿ ಮತ್ತೊಮ್ಮೆ ಪ್ರಗತಿ ಪರಿಶೀಲಿಸ ಲಾಗುವುದೆಂದು ಎಡಿಸಿ ತಿಳಿಸಿದರು.
ಸಭೆಯಲ್ಲಿ ಐ.ಎ.ಎಸ್ ಪ್ರೊಬೆಷನರಿ ಅಧಿಕಾರಿ ಪ್ರಿಯಾಂಕ, ಜಿಲ್ಲಾ ಪಂಚಾ ಯಿತಿಯ ಉಪ ಕಾರ್ಯದರ್ಶಿ ಹೆಚ್.ವಿ. ನಾಗರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಂಕರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎ.ಟಿ. ಮಲ್ಲೇಶ್ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗವಿಕಲರ ಸಂಘ ಸಂಸ್ಥೆ ಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Translate »