ಮೇಕೆದಾಟು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜಯ ಕರ್ನಾಟಕ ಪ್ರತಿಭಟನೆ
ಹಾಸನ

ಮೇಕೆದಾಟು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜಯ ಕರ್ನಾಟಕ ಪ್ರತಿಭಟನೆ

December 28, 2018

ಹಾಸನ: ಮಹತ್ವಾಕಾಂಕ್ಷೆಯ ಮೇಕೆದಾಟು ಮತ್ತು ಮಹದಾಯಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಜಿಲ್ಲಾ ಘಟಕದಿಂದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಮೇಕೆದಾಟು ಯೋಜನೆಗೆ ಕಳೆದ ನಾಲ್ಕೈದು ವರ್ಷಗಳಿಂದ ವಿವಾದಗಳು ಎದುರಾಗಿದ್ದು, ಅಂದಿನಿಂದಲೂ ತಮಿಳು ನಾಡು ಸರ್ಕಾರ ಇದÀನ್ನು ವಿರೋಧಿಸು ತ್ತಲೇ ಬಂದಿದೆ. ಸುಮಾರು 5,900 ಕೋಟಿ ವೆಚ್ಚದ ಈ ಬೃಹತ್ ಯೋಜನೆಗೆ ರಾಜ್ಯ ಸರ್ಕಾರ ಹÀಂತ ಹಂತವಾಗಿ ಅಡೆ ತಡೆಗಳನ್ನು ನಿವಾರಿಸಿಕೊಂಡು ಇದೀಗ ಕೇಂದ್ರ ಜಲ ಆಯೋಗದ ಅನುಮತಿ ಯನ್ನು ಸಹ ಪಡೆದಿದೆ. ವಿಸ್ತøತ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಗೆ ತಮಿಳು ನಾಡು ಸರ್ಕಾರ ತಕರಾರು ಮಾಡು ತ್ತಿರುವುದು ಸಮಂಜಸವಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ಕಾವೇರಿ ನದಿ ನೀರು ಸರಾಸರಿಯಾಗಿ ಸುಮಾರು 50 ರಿಂದ 60 ಟಿ.ಎಂ.ಸಿ ಹೆಚ್ಚು ವರಿ ನೀರು ವ್ಯರ್ಥವಾಗಿ ಬಂಗಾಳಕೊಲ್ಲಿ ಸಮುದ್ರವನ್ನು ಸೇರುತ್ತಿದೆ.

ವ್ಯರ್ಥವಾಗುತ್ತಿ ರುವ ನೀರನ್ನು ಸಂಗ್ರಹಿಸಿ ವಿದ್ಯುತ್ ಉತ್ಪಾದನೆ, ಬೆಂಗಳೂರು ಮಹಾನಗರ ಹಾಗೂ ಸುತ್ತಮುತ್ತಲಿನ ತಾಲೂಕು, ಗ್ರಾಮ ಗಳಿಗೆ ಕುಡಿಯುವ ನೀರನ್ನು ಪೂರೈಸಲು ಮತ್ತು ತಮಿಳುನಾಡು ರಾಜ್ಯಕ್ಕೆ ಕಾವೇರಿ ನ್ಯಾಯಾಧೀಕರಣದ 2007ರ ಅಂತಿಮ ಆದೇಶದ ಪ್ರಕಾರ ಬಿಡುಗಡೆಗೊಳಿಸ ಬೇಕಾದ ನೀರಿನ ಹರಿವನ್ನು ನಿಯಂತ್ರಣ ಗೊಳಿಸಲು ಮೇಕೆದಾಟುವಿನ ಬಳಿ `ಸಮ ತೋಲನಾ ಜಲಾಶಯ’ (ಕುಡಿಯುವ ನೀರಿನ) ಯೋಜನೆಯನ್ನು ಕೈಗೊಳ್ಳಲು ಕÀರ್ನಾಟಕ ರಾಜ್ಯಕ್ಕೆ ಕಾವೇರಿ ನ್ಯಾಯಾಧೀಕರಣದ 2007ರÀ ಅಂತಿಮ ತೀರ್ಪಿನ ವರದಿಯ ಕ್ಲಾಸ್ 12ರ ಪ್ರಕಾರ ಅವಕಾಶವಿದ್ದು, ರಾಜ್ಯದ ಹಿತದೃಷ್ಟಿಯಿಂದ ಈ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಕಾರ್ಯ ಪ್ರವೃತ್ತವಾಗಿ ರುವುದು ಸಂತೋಷದಾಯಕ ವಿಷಯ ವಾಗಿದೆ ಎಂದು ಹೇಳಿದರು.

ಯೋಜನೆ ಕುಡಿಯುವ ನೀರಿಗಾಗಿ ಮಾತ್ರ. ತಡೆಹಿಡಿದ ನೀರನ್ನು ಒಂದು ಎಕರೆ ಕೃಷಿ ಭೂಮಿಗೂ ಬಳಸುವುದಿಲ್ಲ. ವಿದ್ಯುತ್ ಉತ್ಪಾದನೆ ನಂತರದ ನೀರು ತಮಿಳುನಾಡಿಗೆ ಹರಿದು ಹೋಗಲಿದೆ. ಅಣೆಕÀಟ್ಟಿನ ತಳಭಾಗವೆಲ್ಲವೂ ತಮಿಳು ನಾಡಿಗೆ ಸೇರುವುದರಿಂದ ನಾವು ಕೃಷಿ ಮಾಡುವುದಾದರೂ ಹೇಗೆ? ಎಂಬುದೇ ನಮ್ಮ ಪ್ರಶ್ನೆಯಾಗಿದ್ದು, ಅನುಷ್ಠಾನದಿಂದ ಇಲ್ಲಿನ 4996 ಹೆಕ್ಟೇರ್ ಭೂಮಿ ಮುಳು ಗಡೆಯಾಗಲಿದೆ. ಮುಳುಗಡೆಯಾಗುವ ಭೂಮಿ ಕರ್ನಾಟಕ ಭಾಗದ್ದು ಎಂಬು ದನ್ನು ಸುಪ್ರೀಂಕೋರ್ಟ್‍ನಲ್ಲಿ ನಮ್ಮ ರಾಜ್ಯದ ಪರ ವಕೀಲರು ಸೂಕ್ತರೀತಿಯಲ್ಲಿ ವಕಾ ಲತ್ತು ವಹಿಸಿ, ಈ ಯೋಜನೆಗೆ ಕೋರ್ಟ್ ಮಧ್ಯಂತರ ತಡೆ ನೀಡದಂತೆ ನೋಡಿ ಕೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.

ಉತ್ತರ ಕನ್ನಡದ ಜನತೆಯ ಕುಡಿ ಯುವ ನೀರಿನ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಕಳಸಾ-ಬಂಡೂರಿ ನಾಲಾ ಯೋಜನೆಗೆ ಕರ್ನಾಟಕ ಚಾಲನೆ ನೀಡಲು ಮುಂದಾಗಿದೆ. ಆದರೆ ನೆರೆ ರಾಜ್ಯ ಗೋವಾ ಸರ್ಕಾರ ಇದಕ್ಕೆ ಅಡ್ಡಿ ಉಂಟು ಮಾಡುವುದು ಸರಿಯಲ್ಲ. ನ್ಯಾಯಾಧೀಕರಣವು ಕುಡಿಯುವ ನೀರಿ ಗಾಗಿ ನೀಡಿರುವ 5.4 ಟಿ.ಎಂ.ಸಿ ನೀರು ಯಾವುದಕ್ಕೂ ಸಾಕಾಗುವುದಿಲ್ಲ. ಈ ನೀರನ್ನು ಹಿಡಿದಿಟ್ಟುಕೊಳ್ಳಲು ಇಲ್ಲಿ ಅಣೆÉ ಕಟ್ಟು ನಿರ್ಮಾಣವಾಗಬೇಕು ಎಂದರು.

ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕಾನೂನಾ ತ್ಮಕವಾಗಿ ಎಲ್ಲವನ್ನು ಭದ್ರಪಡಿಸಿಕೊಂಡು ನೀರಾವರಿ ಯೋಜನೆಗಳಿಗೆ ಬೇಕಾದ ಕ್ರಮಗಳನ್ನು ಕೈಗೊಂಡರೆ ನಮ್ಮ ಬೆಂಬಲ ಸದಾ ಇರುತ್ತದೆ. ಇದು ನಾಡಿನ ಆರೂವರೆ ಕೋಟಿ ಮಂದಿಯ ಒಕ್ಕೊರಲ ಧ್ವನಿಯಾಗಿ ರುತ್ತದೆ ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಯಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ಮಣಿಕಂಠ, ಪ್ರಧಾನ ಕಾರ್ಯದರ್ಶಿ ಜಗದೀಶ್ ಚೌಡ ವಳ್ಳಿ, ಗೌರವಾಧ್ಯಕ್ಷ ಕೆ.ಆರ್. ರಘು, ತಾಲೂಕು ಅಧ್ಯಕ್ಷ ಹೆಚ್.ಎನ್. ಮೋಹನ್, ಚೇತನ್ ಇತರರು ಪಾಲ್ಗೊಂಡಿದ್ದರು.

Translate »