ಅರಸೀಕೆರೆ: ವಿದ್ಯಾರ್ಥಿಗಳು ಮಾತೃ ಭಾಷೆ ಕನ್ನಡಕ್ಕೆ ಹೆಚ್ಚು ಒತ್ತು ನೀಡುವ ಜೊತೆಗೆ ವ್ಯವಹಾರಿಕವಾಗಿ ಇಂಗ್ಲಿಷ್ ಭಾಷೆ ಅನಿ ವಾರ್ಯತೆ ಅರಿತಾಗ ಮಾತ್ರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯಲು ಸಾಧ್ಯ ಎಂದು ಉಪನ್ಯಾಸಕ ನಯಾಜ್ ಆಹ್ಮದ್ ತಿಳಿಸಿದರು.
ನಗರದ ಮಾರುತಿ ನಗರ ಬಡಾವಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಡಾ.ವಿಷ್ಣು ಸೇನಾ ಸಮಿತಿ ಮತ್ತು ಭುವಿ ಸೇವಾ ಸಂಘದ ಸಂಯು ಕ್ತಾಶ್ರಯದಲ್ಲಿ 3 ಹಂತಗಳಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಉಚಿತ ಇಂಗ್ಲಿಷ್ ಗ್ರಾಮರ್ ತರಗತಿಯೊಂದಿಗೆ ವ್ಯಕ್ತಿ ವಿಕಸನ ಮತ್ತು ಸಾಮಾಜಿಕ ಜವಾಬ್ದಾರಿ ಕುರಿ ತಂತೆ ಉಪನ್ಯಾಸದಲ್ಲಿ ನೀಡುತ್ತಾ ಮಾತನಾಡಿದ ಅವರು, ಭಾರತವು ವಿವಿಧ ರಾಜ್ಯ ಮತ್ತು ಭಾಷೆಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡು ಭಾವೈಕ್ಯತೆಯಿಂದ ವಿಶ್ವಕ್ಕೆ ಮಾದರಿಯಾಗಿದೆ. ಕರ್ನಾಟಕವು ಇಂದು ಕನ್ನಡ ನಾಡು ನುಡಿ ಉಳಿವಿಗಾಗಿ ಅವಿರತ ಪ್ರಯತ್ನ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಭಾಷೆ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಪಡೆಯುವ ಹಕ್ಕನ್ನು ನಮ್ಮ ಸರ್ಕಾರಗಳು ನೀಡಿವೆ ಎಂದರು.
ಮಾತೃಭಾಷೆ ಕನ್ನಡ ಕಲಿಯುವ ಜೊತೆಗೆ ಪ್ರಮುಖ ಭಾಷೆಗಳ ಕಲಿಕೆಗೂ ವಿದ್ಯಾರ್ಥಿಗಳು ಮುಂದಾಗಬೇಕು. ಶಿಕ್ಷಣ ಆರಂಭದಲ್ಲಿ ಸ್ಥಳೀಯ ಭಾಷೆಗೆ ಒತ್ತು ನೀಡಿದರೂ ವ್ಯವಹಾರಿಕವಾಗಿ ಬೇರೆ ರಾಜ್ಯ ಹಾಗೂ ದೇಶಗಳಿಗೆ ಹೋದರೆ ಇಂಗ್ಲಿಷ್ ಅನಿವಾರ್ಯ. ಕಬ್ಬಿಣದ ಕಡಲೆಯಂ ತಿರುವ ಇಂಗ್ಲಿಷ್ ಭಾಷೆಯನ್ನು ಹೆಚ್ಚಾಗಿ ಅಧ್ಯ ಯನ ಮಾಡಬೇಕಾಗಿದೆ ಎಂದರು. ವಿದ್ಯಾರ್ಥಿ ಗಳು ಖಿನ್ನತೆ ಮತ್ತು ಹಿಂಜರಿಕೆ ಬದಿಗೊತ್ತಿ ಭಾಷಾ ಪ್ರವೀಣರಾಗುವುದರ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿದರು.
ನಗರಸಭಾ ಸದಸ್ಯೆ ಸುಜಾತ ರಮೆಶ್ ಮಾತ ನಾಡಿದರು. ಭುವಿ ಸೇವಾ ಸಂಘದ ಅಧ್ಯಕ್ಷ ನರೇಂದ್ರ, ಕರವೇ ಅಧ್ಯಕ್ಷ ಸಂತೋಷ್, ಮುಖಂಡರಾದ ರಿಜ್ವಾನ್, ಕೃಷ್ಣ, ಅಶೋಕ್, ರಮೇಶ್ ಇನ್ನಿತರರಿದ್ದರು.