ರಸ್ತೆ ಡಾಂಬರೀಕರಣಕ್ಕೆ ಬೆಟ್ಟಸೋಗೆ ಗ್ರಾಮಸ್ಥರ ಒತ್ತಾಯ
ಹಾಸನ

ರಸ್ತೆ ಡಾಂಬರೀಕರಣಕ್ಕೆ ಬೆಟ್ಟಸೋಗೆ ಗ್ರಾಮಸ್ಥರ ಒತ್ತಾಯ

January 21, 2019

ರಾಮನಾಥಪುರ: ಸಮೀಪದ ಬಸವನಹಳ್ಳಿಕೊಪ್ಪಲು ಗ್ರಾಮದಿಂದ ಬೆಟ್ಟಸೋಗೆ ಗ್ರಾಮದವರೆಗೆ ರಸ್ತೆಗೆ ಡಾಂಬರೀಕರಣ ಮಾಡಿಸುವಂತೆ ಶಾಸಕ ಡಾ.ರಾಮಸ್ವಾಮಿಯವರಲ್ಲಿ ಬೆಟ್ಟಸೋಗೆ ಗ್ರಾಮಸ್ಥರು ಒತ್ತಾಯಿಸಿದರು.

ರಾಮನಾಥಪುರ ಪ್ರವಾಸಿ ಮಂದಿರ ದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಬೆಟ್ಟಸೋಗೆ ಗ್ರಾಮಸ್ಥರು ಶುದ್ಧ ಕುಡಿಯವ ನೀರು, ಬಸವನಹಳ್ಳಿಕೊಪ್ಪಲು ಗ್ರಾಮ ದಿಂದ ಬೆಟ್ಟಸೋಗೆ ಗ್ರಾಮದವರೆಗೆÀ ಕಟ್ಟೆ ಪುರ ಎಡದಂಡೆ ನಾಲೆಯ ರಸ್ತೆಗೆ ಡಾಂಬರೀಕರಣ ಮಾಡಿಸಿಕೊಡುವಂತೆ ಗ್ರಾಮಸ್ಥರ ಪರವಾಗಿ ಬಿ.ಪಿ. ವೀರೇಶ್ ಮನವಿ ಸಲ್ಲಿಸಿ ಮಾತನಾಡಿದರು.

ರಾಮನಾಥಪುರ ಹೋಬಳಿ ಬಸವನ ಹಳ್ಳಿಕೊಪ್ಪಲು ಗ್ರಾಮದಿಂದ ಬೆಟ್ಟಸೋಗೆ ಗ್ರಾಮದವರೆಗೆ ಕಟ್ಟೆಪುರ ಎಡದಂಡೆ ನಾಲೆಯ ಮೇಲೆ ಈಗಾಗಲೇ ನಡೆಯುತ್ತಿ ರುವ ಡಾಂಬರೀಕರಣವು ಕೇರಳಾಪುರದ ಹತ್ತಿರದಿಂದ ನಾಲೆಯ ಬಸವನಹಳ್ಳಿ, ಬಸವನ ಹಳ್ಳಿ ಕೊಪ್ಪಲು ಗ್ರಾಮದ ಎಡದಂಡೆ ನಾಲೆಯ ಏರಿವರೆಗೆ 2 ಕಿ.ಮೀ ದೂರ ಡಾಂಬರೀಕರಣ ಮಾಡಲಾಗಿದೆ. ಅದರೆ ಉಳಿದಿರುವ ಸುಮಾರು 3 ಕಿಮೀ. ಡಾಂಬರೀ ಕರಣ ಮಾಡಿಸಬೇಕು ಎಂದರು.

ಬೆಟ್ಟಸೋಗೆ ಮತ್ತು ಬಸವನಹಳ್ಳಿ ಗ್ರಾಮಸ್ಥರು ಮುಖ್ಯರಸ್ತೆ ಕಾಳೇನಹಳ್ಳಿ ಮಾರ್ಗ ಕೇರಳಾಪುರಕ್ಕೆ ತೆರಳಲು 10 ರಿಂದ 12 ಕಿ.ಮೀ ದೂರ ಸುತ್ತಿ-ಬಳಸಿ ಕೊಂಡು ಸಾಗಬೇಕಾಗಿದೆ. ಕೇರಳಾಪುರಕ್ಕೆ ಹತ್ತಿರವಿರುವ ಬೆಟ್ಟಸೋಗೆ, ಬಸವನಹಳ್ಳಿ, ಬಸವನಹಳ್ಳಿ ಕೊಪ್ಪಲು ಗ್ರಾಮದಿಂದ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಕೇರಳಾ ಪುರಕ್ಕೆ ಸಾಗುವುದು ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಅರ್ಥಿಕ ವ್ಯವಹಾರ ಗಳಿಗೆ ತೆರಳುವವರಿಗೆ ತೊಂದರೆಯಾಗು ತ್ತಿದೆ ಎಂದು ಮನವರಿಕೆ ಮಾಡಿದರು.

ಶಾಸಕರ ಭರವಸೆ: ಬೆಟ್ಟಸೋಗೆ ಗ್ರಾಮ ದಲ್ಲಿರುವ ಶ್ರೀ ಮಲ್ಲೇಶ್ವರಸ್ವಾಮಿ ದೇವ ಸ್ಥಾನದ ಸಮಿತಿಯವರೆಗೆ ಈಗಾಗಲೇ ಈ ಹಿಂದೆ ದೇವಸ್ಥಾನದ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ 5 ಲಕ್ಷ ರೂ. ನೀಡಲಾಗಿದೆ. ಅಲ್ಲದೆ ಉಳಿದಿರುವ ಸಮುದಾಯದ ಕಾಮ ಗಾರಿಗೆ ಮತ್ತೆ 5 ಲಕ್ಷ ರೂ. ನೀಡಲಾಗಿದೆ. ಶ್ರೀಘವೇ ಕಾಮಗಾರಿ ಗುಣಮಟ್ಟದಲ್ಲಿ ಮಾಡಿಸುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.

ತಾಪಂ ಮಾಜಿ ಅಧ್ಯಕ್ಷ ಕೇರಳಾಪುರ ಸಂತೋಷಗೌಡ, ಬೆಟ್ಟಸೋಗೆ ಗ್ರಾಮದ ಶ್ರೀ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಸಮಿತಿ ಅಧ್ಯಕ್ಷ ಬಿ.ಪಿ.ವೀರೇಶ್, ಖಜಾಂಚಿ ಶಿವಮೂರ್ತಿ, ಯ.ಮಲ್ಲಯ್ಯ, ಗ್ರಾಪಂ ಸದಸ್ಯ ಕರೀಗೌಡ, ಮಾಜಿ ಸದಸ್ಯ ಜಯಕುಮಾರ್, ಮುಖಂಡರಾದ ಯೋಗೇಶ್, ಪ್ರಭುದೇವ್, ಬಿ.ಎಸ್. ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

Translate »