ಸಾಹಿತಿ ಶಿವವಿಶ್ವನಾಥ್ ವಿರುದ್ಧ ಎಬಿವಿಪಿ ಪ್ರತಿಭಟನೆ
ಹಾಸನ

ಸಾಹಿತಿ ಶಿವವಿಶ್ವನಾಥ್ ವಿರುದ್ಧ ಎಬಿವಿಪಿ ಪ್ರತಿಭಟನೆ

January 21, 2019

ಹಾಸನ: ಸೈನಿಕರ ವಿರುದ್ಧ ಸಾಹಿತಿ ಡಾ.ಶಿವ ವಿಶ್ವನಾಥ್ ಅವಹೇಳನಕಾರಿ ಹೇಳಿಕೆ ನೀಡಿ ಅಪಮಾನ ಮಾಡಿ ದ್ದಾರೆ ಎಂದು ಆರೋಪಿಸಿ ನಗರದಲ್ಲಿ ಭಾನುವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹೇಮಾವತಿ ಪ್ರತಿಮೆಯ ಮುಂಭಾಗ ಸಮಾವೇಶಗೊಂಡ ಕಾರ್ಯಕರ್ತರು ಸಾಹಿತಿ ಶಿವವಿಶ್ವನಾಥ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸೈನಿಕರು ನಿಸ್ವಾರ್ಥ ಮನೋಭಾವದೊಂದಿಗೆ ಗಡಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಯೋತ್ಪಾದಕರನ್ನು ಮಟ್ಟ ಹಾಕುತ್ತಿದ್ದಾರೆ. ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುತ್ತಿದ್ದಾರೆ. ಆದರೆ, ಸಾಹಿತಿ ಶಿವವಿಶ್ವನಾಥ್ ಅವರು ದೇಶ ಕಾಯುವ ಸೈನಿಕರಿಗೂ ಮತ್ತು ಭಯೋತ್ಪಾದಕರಿಗೂ ವ್ಯತ್ಯಾಸ ಗೊತ್ತಿಲ್ಲದೇ ಸೈನಿಕರನ್ನು ಅಪಮಾನಿಸಿದ್ದಾರೆ ಎಂದು ದೂರಿದರು.

ಶಿವವಿಶ್ವನಾಥನ್ ಇವರು ಸೈನಿಕರ ಮನೋಸ್ಥೈರ್ಯವನ್ನು ಕುಗ್ಗಿಸುವ ಹೇಳಿಕೆ ನೀಡಿದ್ದಾರೆ. ಅವರನ್ನು ತಕ್ಷಣವೇ ಬಂಧಿಸ ಬೇಕು. ಶಿವವಿಶ್ವನಾಥ್ ಅವರು ದೇಶದ ಜನತೆ ಹಾಗೂ ಸೈನಿಕರ ಬಳಿ ಕ್ಷಮೆಯಾಚಿಸಬೇಕು. ಇನ್ನು ಮುಂದೆ ಸೈನಿಕರ ವಿರುದ್ಧ ಯಾರೂ ಮಾತನಾಡಬಾರದು. ಇಂತಹ ಘಟನೆ ಮತ್ತೆ ಏನಾ ದರೂ ಮರುಕಳಿಸಿದರೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಅಭಿಲಾಷ್, ಸುಹಾಸ್, ದರ್ಶನ್, ದೀಪಕ್, ಸುನೀಲ್, ಅಮೃತ್, ಶರತ್, ಉಮೇಶ್ ಇತರರು ಪಾಲ್ಗೊಂಡಿದ್ದರು.

Translate »