ಬೇಲೂರಿನ ಬರ ನಿವಾರಣೆಗೆ ‘ಜಲಧಾರೆ’ ಯೋಜನೆ  450 ಕೋಟಿ ವೆಚ್ಚ ಮೀಸಲು, ಹಲವು ನೀರಾವರಿ ಯೋಜನೆ ಅನುಷ್ಠಾನ
ಹಾಸನ

ಬೇಲೂರಿನ ಬರ ನಿವಾರಣೆಗೆ ‘ಜಲಧಾರೆ’ ಯೋಜನೆ 450 ಕೋಟಿ ವೆಚ್ಚ ಮೀಸಲು, ಹಲವು ನೀರಾವರಿ ಯೋಜನೆ ಅನುಷ್ಠಾನ

January 21, 2019

ಬೇಲೂರು: ಬೇಲೂರು ತಾಲೂಕಿನ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಬರ ಪರಿಸ್ಥಿತಿ ಯನ್ನು ನಿಭಾಯಿಸುವ ಹಿನ್ನೆಲೆಯಲ್ಲಿ ‘ಜಲಧಾರೆ’ ಮಹತ್ವಾಕಾಂಕ್ಷೆಯ ಯೋಜನೆ ಯನ್ನು ಜಾರಿಗೊಳಿಸಲಾಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಪಟ್ಟಣಕ್ಕೆ ಸಮೀಪದ ಕಟ್ಟೆ ಸೋಮನಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಡಿ ರಸ್ತೆಗೆ ಡಾಂಬರ್ ಹಾಕುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನಲ್ಲಿ 450 ಕೋಟಿ ರೂ ವೆಚ್ಚದಡಿ ಜಲಧಾರೆ ಯೋಜನೆ ಜಾರಿಗೊಳಿಸಲಾಗು ತ್ತಿದೆ. ಇದರಿಂದ ಹಲವು ನೀರಾವರಿ ಯೋಜನೆ ಕೈಗೆತ್ತಿಕೊಂಡು ತಾಲೂಕಿನ ಬರದ ಬವಣೆ ನೀಗಿಸಲಾಗುವುದು ಎಂದು ಹೇಳಿದರು.

ಇದೊಂದು ಬೃಹತ್ ಯೋಜನೆಯಾ ಗಿದ್ದು, ಇದರ ಸಮರ್ಪಕ ಪ್ರಗತಿಗೆ ಉತ್ಸು ಕತೆ ಹೊಂದಿದ್ದೇನೆ. ಹಳೇಬೀಡು ಸಮೀಪ ಕಟ್ಟೆಸೋಮನಹಳ್ಳಿ ಗ್ರಾಮಕ್ಕೆ ಕಾವೇರಿ ನಿಗಮದಿಂದ ಸಂಸದ ಎಚ್.ಡಿ. ದೇವೇ ಗೌಡರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಿದ್ದಾಪುರದ ಮುಖ್ಯ ರಸ್ತೆಯಿಂದ ಬಾಳಲೋಚನಸ್ವಾಮಿ ಮಠ ದವರೆಗೆ ಉತ್ತಮ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಪಂಡಿತನಹಳ್ಳಿ ರಸ್ತೆ ಕೆಲಸಕ್ಕೆ 1.10 ಕೋಟಿ ರೂ. ರಾಜಗೆರೆ ರಸ್ತೆಗೆ 20 ಲಕ್ಷ ರೂ., ಭಂಡಾರಿಕಟ್ಟೆ ರಸ್ತೆಗೆ 15 ಲಕ್ಷ ರೂ., ಗಿರಿಕಲ್ಲಳ್ಳಿ ರಸ್ತೆಗೆ 20 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
ಕಟ್ಟೆಸೋಮನಹಳ್ಳಿ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸುವುದರ ಜತೆಗೆ ಇಲ್ಲಿನ ಪರಿಶಿಷ್ಟಜಾತಿ ವರ್ಗ ದವರು ಗುಡಿಸಲು ಮುಕ್ತವಾಸಿಗಳಾಗ ಬೇಕೆಂಬ ಉದ್ದೇಶದಿಂದ ಮನೆ ನಿರ್ಮಿಸಿ ಕೊಡಲಾಗುವುದು. ಗ್ರಾಮಾಂತರ ಪ್ರದೇಶ ವಲ್ಲದೆ ಬೇಲೂರು ಪಟ್ಟಣದ ಅಭಿವೃ ದ್ಧಿಗೂ ಗಮನ ಹರಿಸಲಾಗಿದೆ. ಪತ್ರಿಕೆ ಯಲ್ಲಿ ಪ್ರಕಟಗೊಂಡ ವರದಿಯಾಗಲಿ, ರಾಜಕೀಯ ಹೇಳಿಕೆಗಳು ಇಲ್ಲಿ ಮುಖ್ಯ ವಲ್ಲ ಈಗಾಗಲೇ ಯಗಚಿ ಏತ ನೀರಾ ವರಿಯಿಂದ ಅಡಗೂರು ಮತ್ತು ಪಂಡಿತ ನಹಳ್ಳಿ ಕೆರೆಗಳಿಗೆ ನೀರು ಹರಿದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹಳೇಬೀಡು ಕೆರೆಗೆ ರಣಘಟ್ಟದಿಂದ ನೀರು ತರುವ ಆಸಕ್ತಿ ಹೊಂದಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಹೆಚ್.ಡಿ.ರೇವಣ್ಣ ಅವರ ಸಹಕಾರವಿದೆ. ಮುಖಂಡ ಪ್ರಜ್ವಲ್ ರೇವಣ್ಣ ಮುಂದಿನ ಲೋಕಸಭೆ ಅಭ್ಯರ್ಥಿಯಾಗಿರುವುದರಿಂದ ರಣಘಟ್ಟದ ನೀರು ಹಳೇಬೀಡು ಕೆರೆಗೆ ತರುವ ಕೆಲಸ ಸುಲಭವಾಗಲಿದೆ. ಜಲ ಧಾರೆ ಯೋಜನೆ ಮೂಲಕ 450 ಕೋಟಿ ರೂ. ವೆಚ್ಚದಲ್ಲಿ ಹಲವು ನೀರಾವರಿ ಯೋಜನೆ ಕೈಗೆತ್ತಿಕೊಂಡು ತಾಲೂಕಿನ ಬರದ ಬವಣೆ ನೀಗಿಸಲಾಗುವುದು ಎಂದರು.

ತಾಪಂ ಮಾಜಿ ಅಧ್ಯಕ್ಷ ಹರೀಶ್ ಮಾತ ನಾಡಿ, ಶಾಸಕ ಲಿಂಗೇಶ್ ಅವರು ಕ್ಷೇತ್ರ ಅಭಿವೃದ್ಧಿಗಾಗಿ ವಿಶೇಷ ಗಮನ ಹರಿಸಿದ್ದಾರೆ ಎಂದರು. ಈ ವೇಳೆ ಜೆಡಿಎಸ್ ಹೋಬಳಿ ಅಧ್ಯಕ್ಷ ಪ್ರೇಮಣ್ಣ, ಗ್ರಾಪಂ ಸದಸ್ಯ ಶಿವ ಕುಮಾರ್, ಮುಖಂಡರಾದ ರಾಜಶೇಖರ್, ಬಸವಲಿಂಗಪ್ಪ, ಜಯಣ್ಣ, ಶಿವಲಿಂಗಪ್ಪ, ಸೋಮಣ್ಣ, ಚಂದ್ರಶೇಖರ್ ಹಾಗೂ ಸ್ತ್ರಿಶಕ್ತಿ ಸಂಘ, ಕಾವೇರಿ ನಿಗಮದ ಇಂಜಿ ನಿಯರ್ ಬಾಲಕೃಷ್ಣ, ಗುತ್ತಿಗೆದಾರ ಶಾಮಣ್ಣ, ರಮೇಶ್, ವಿರೂಪಾಕ್ಷಪ್ಪ ಹಾಜರಿದ್ದರು.

Translate »