ಸಂಚಾರಿ ನಿಯಮ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ
ಹಾಸನ

ಸಂಚಾರಿ ನಿಯಮ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ

February 7, 2019

ಬೇಲೂರು: ಕಾಲೇಜು ವಿದ್ಯಾರ್ಥಿ ಗಳು ವಾಹನ ಚಾಲನಾ ಪರವಾನಗಿ ಇಲ್ಲದೇ, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನಗಳನ್ನು ಬಳಸುವುದು ಅಪರಾಧ ಮತ್ತು ಅಪಾಯ ಕಾರಿಯಾಗಿದ್ದು, ವಿದ್ಯಾರ್ಥಿಗಳು ಸಂಚಾರಿ ನಿಯಮ ಪಾಲಿಸಬೇಕು ಎಂದು ಸರ್ಕಲ್ ಇನ್‍ಸ್ಪೆಕ್ಟರ್ ಲೋಕೇಶ್ ಹೇಳಿದರು.

ಪಟ್ಟಣದಲ್ಲಿ ಆರಕ್ಷಕ ಇಲಾಖೆ, ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ನಡೆದ ರಸ್ತೆ ಸುರಕ್ಷತಾ ಅರಿವಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವ ಜನಾಂಗವು ಉತ್ಸಾಹಭರಿತ ರಾಗಿ ವಾಹನ ಚಲಾವಣೆಯ ಮಾಡು ತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಜವಾ ಬ್ದಾರಿ ಹಾಗೂ ರಸ್ತೆಯಲ್ಲಿ ವಾಹನ ಚಲಾ ವಣೆಯ ನಿಯಮಗಳ ಪರಿಪಾಲನೆ ಯನ್ನು ಸಮರ್ಪಕವಾಗಿ ಮಾಡದೇ ತಮ್ಮ ಅಮೂಲ್ಯವಾದ ಜೀವವನ್ನು ಕಳೆದು ಕೊಳ್ಳುತ್ತಿರುವುದನ್ನು ಇಂದು ಸಮಾಜದಲ್ಲಿ ಕಾಣಬಹುದಾಗಿದೆ. ಪ್ರಸ್ತಕ ವರ್ಷದಲ್ಲಿ ಈಗಾಗಲೇ 12ಜನರು ತಾಲೂಕಿನಲ್ಲಿ ಬೈಕ್ ಅಪಘಾತವೊಂದರಲ್ಲಿಯೇ ಜೀವ ಕಳೆದು ಕೊಂಡಿದ್ದಾರೆ. ಇದನ್ನು ಎಲ್ಲರೂ ಅರಿತು ಕೊಳ್ಳಬೇಕು. ರಸ್ತೆ ಸುರಕ್ಷತೆ ಮತ್ತು ಚಾಲ ನೆಯ ನಿಯಮಗಳನ್ನು ಅರಿತು ಜಾಗೃತ ರಾಗಿ ವಾಹನ ಚಲಾಯಿಸಲು ಮುಂದಾಗ ಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳನ್ನು ಹೆಲ್ಮಟ್ ಧರಿಸದೇ, ಚಾಲನಾ ಪರವಾನಗಿ ಇಲ್ಲದೇ ಓಡಿಸುವುದು ಕಂಡುಬಂದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಪೋಷಕರನ್ನು ಕರೆಸಿ ತಿಳುವಳಿಕೆ ನೀಡ ಬೇಕಾಗುತ್ತದೆ. ಹಾಗೆಯೇ ವಾಹನಗಳನ್ನು ದಸ್ತಗಿರಿ ಮಾಡುವಂತಹ ಕ್ರಮವನ್ನು ಕೈಗೊಳ್ಳ ಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಲೇಜು ಪ್ರಾಂಶುಪಾಲ ಜಯರಾಂ ಜಾಗೃತಿ ಮೂಡಿಸುವಂತಹ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡು ತ್ತಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳು ಜಾಗೃತರಾಗಿ ತಮ್ಮ ಜೀವರಕ್ಷಣೆಗಾಗಿ ನಿಯಮಗಳನ್ನು ಪಾಲಿಸಲು ಮುಂದಾಗ ಬೇಕು. ಮಕ್ಕಳ ಭವಿಷ್ಯದ ಬಗ್ಗೆ ಪೋಷ ಕರು ಜಾಗೃತರಾಗಬೇಕು ಎಂದು ತಿಳಿಸಿದರು.
ಆರಕ್ಷಕ ಉಪಠಾಣಾಧಿಕಾರಿ ಜಗದೀಶ್ ಹೆಲ್ಮೆಟ್ ಬಳಕೆ ಮತ್ತು ಹೆಲ್ಮಟ್ ಬಳಕೆಯ ಲಾಭಗಳ ಕುರಿತು ವಿವರಣೆ ನೀಡಿದರು. ಶಿಕ್ಷಕರ ಸಂಘದ ರಾಜೇಗೌಡ, ಆರಕ್ಷಕ ಸಹಾಯಕ ಉಪಠಾಣಾಧಿಕಾರಿ ಪರಮೇಶ್, ಅಧೀಕ್ಷಕ ಶೇಷಾದ್ರಿ ಮತ್ತಿತರು ಹಾಜರಿದ್ದರು.

Translate »