ಪ್ರತಿಭಾವಂತ ಶಿಕ್ಷಕರಿಗೆ ಪ್ರೋತ್ಸಾಹ ನೀಡಲು ಸಲಹೆ
ಹಾಸನ

ಪ್ರತಿಭಾವಂತ ಶಿಕ್ಷಕರಿಗೆ ಪ್ರೋತ್ಸಾಹ ನೀಡಲು ಸಲಹೆ

February 7, 2019

ಅರಸೀಕೆರೆ: ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ವಿವಿಧ ಪ್ರತಿಭೆಗಳಿದ್ದು, ಆ ಪ್ರತಿಭೆ ಗಳನ್ನು ಪೋಷಿಸಿ ಬೆಳೆಸಬೇಕಾದ ಜವಾ ಬ್ದಾರಿ ಎಲ್ಲ ಶಿಕ್ಷಕರ ಸಂಘ ಸಂಸ್ಥೆಗಳಿಗೆ ಇರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‍ಕುಮಾರ್ ಸಲಹೆ ನೀಡಿದರು.

ಜನವರಿ 28 ಮತ್ತು 30 ರಂದು ಛತ್ತೀಸ್ ಗಡದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ 100 ಮೀ ಓಟದಲ್ಲಿ ಕಂಚಿನ ಪದಕ, ಮತ್ತು 200 ಮೀ, ಓಟ ದಲ್ಲಿ ಬೆಳ್ಳಿಪದಕ ಪಡೆದ ತಾಲೂಕಿನ ಗಂಡಸಿ ಕ್ಲಸ್ಟರ್‍ನ ಸಿ.ಆರ್.ಪಿ ಕಲಾವತಿ ಅವರಿಗೆ ಪಟ್ಟಣದಲ್ಲಿ ಏರ್ಪಡಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಕಲಾವತಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕ್ರೀಡೆ ನಮ್ಮನ್ನು ಸದಾ ಉಲ್ಲಾಸಭರಿತ ವಾಗಿಡುವುದಲ್ಲದೆ, ಆರೋಗ್ಯವನ್ನೂ ಕಾಪಾಡುತ್ತದೆ. ಶಿಕ್ಷಕರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಗಳನ್ನು ಬೆಳಕಿಗೆ ತರುವುದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರ ಈ ಪ್ರಯತ್ನ ಹಾಗೂ ಅಭ್ಯಾಸ ಮುಂದು ವರೆಸಿದಲ್ಲಿ ನಮ್ಮ ಇಲಾಖೆಯ ಸಹಕಾರ ಸದಾ ಇರುತ್ತದೆ. ಮುಂದಿನ ಸ್ವಾತಂತ್ರ್ಯೋ ತ್ಸವದ ದಿನದಂದು ತಮ್ಮನ್ನು ಜಿಲ್ಲಾಡಳಿತ ಗುರುತಿಸುವಂತೆ ಜಿಲ್ಲಾ ಉಪ ನಿರ್ದೇಶಕ ರಿಗೆ ಶಿಫಾರಸು ಮಾಡಲಾಗುವುದು ಎಂದರು.

ಕ್ರೀಡಾ ವಿಜೇತೆ ಕಲಾವತಿ ಮಾತನಾಡಿ, ನನ್ನ ಮಗ 10ನೇ ತರಗತಿ ವ್ಯಾಸಂಗ ಮಾಡು ತ್ತಿದ್ದಾನೆ. ಬಾಲ್‍ಬ್ಯಾಡ್ಮಿಂಟನ್‍ನಲ್ಲಿ ರಾಷ್ಟ್ರ ಪಟು ಆಗಿದ್ದಾನೆ. ನಾನೂ ಏನಾದರೂ ಸಾಧಿಸ ಬೇಕೆಂಬ ಛಲ ನನ್ನಲ್ಲಿ ಮೂಡಿತು. ಓಟದಲ್ಲಿ ಆಸಕ್ತಿ ಇತ್ತು. ಇದನ್ನೆ ಆಯ್ಕೆ ಮಾಡಿಕೊಂಡೆ. ಆದರೆ, ಅಭ್ಯಾಸ ಮಾಡಲು ಗಂಡಸಿಯಲ್ಲಿ ದೊಡ್ಡ ಆಟದ ಮೈದಾನವಿಲ್ಲ, ರಾಜ್ಯ ಹೆದ್ದಾರಿ ಬದಿಯಲ್ಲಿಯೇ ಓಡಿ ಅಭ್ಯಾಸ ಮಾಡಿದೆ, ಎಲ್ಲರ ಪ್ರೋತ್ಸಾಹ ನನ್ನ ಈ ಸಾಧನೆಗೆ ಕಾರಣ ವಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಪದಕ ತರುವ ಗುರಿ ಹೊಂದಿದ್ದೇನೆ. ನಿಮ್ಮಗಳ ಹಾರೈಕೆಯಲ್ಲಿ ಇದು ಸಾಧ್ಯವಾಗುತ್ತದೆ ಎಂಬ ಭರವಸೆ ಹೊಂದಿದ್ದೇನೆ ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಗಂಗಾಧರ ಸ್ವಾಮಿ, ಪ್ರಾಥಮಿಕÀ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಂ, ಕಾರ್ಯದರ್ಶಿ ಸದಾ ನಂದಮೂರ್ತಿ ಮಾತನಾಡಿದರು. ನಿರ್ದೇಶಕಿ ವೀಣಾ, ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್, ಮುಖ್ಯ ಶಿಕ್ಷಕ ಸೋಮಶೇಖರ್, ಸ್ಕೌಟ್ಸ್ ಕಾರ್ಯದರ್ಶಿ ಸುರೇಶ್ ಉಪಸ್ಥಿತರಿದ್ದರು.

Translate »