ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು ಆದೇಶ ಪತ್ರ ವಿತರಣೆ
ಹಾಸನ

ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು ಆದೇಶ ಪತ್ರ ವಿತರಣೆ

February 7, 2019

ರಾಮನಾಥಪುರ: ಕಾವೇರಿ ನದಿ ಪ್ರವಾಹದ ನೀರು ಆವರಿಸಿ ಮನೆಗಳು ಶಿಥಿಲವಾಗಿದ್ದ ಪ್ರಕರಣದಲ್ಲಿ ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳಲು ಆದೇಶಪತ್ರ ವಿತರಿಸಲಾಗುತ್ತಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿ ರುವ ಶ್ರೀ ರಾಮೇಶ್ವರ ದೇವಾಲಯ ಆವರಣದಲ್ಲಿ 44 ಪ್ರವಾಹ ಸಂತ್ರಸ್ತರಿಗೆ ಬಸವವಸತಿ ಯೋಜನೆಯಡಿ ಮನೆ ನಿರ್ಮಿಸಲು ಆದೇಶಪತ್ರ ವಿತರಿಸಿ ಅವರು ಮಾತನಾಡಿದರು.

ರಾಮನಾಥಪುರದಲ್ಲಿ ಶ್ರೀರಾಮೇಶ್ವರ ದೇವಾಲಯದ ಆಸುಪಾಸಿನಲ್ಲಿ ಆಗಸ್ಟ್ 2018ರಲ್ಲಿ ಹಿಂದೆಂದೂ ಕಾಣದ ಪ್ರವಾ ಹವು ಬಂದು ಆಸ್ತಿಪಾಸ್ತಿ ನಾಶವಾಗಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ. ಕಾವೇರಿ ನದಿಪ್ರವಾಹದ ನೀರು ಆವರಿಸಿ ಕೊಂಡು ಮನೆಗಳು ಶಿಥಿಲವಾಗಿರುವವ ರಿಗೆ ನೆರವಾಗುವ ದೃಷ್ಟಿಯಿಂದ ಮನೆ ನಿರ್ಮಿಸಿಕೊಳ್ಳಲು ಆದೇಶ ಪತ್ರವನ್ನು ವಿತರಿಸಲಾಗುತ್ತಿದೆ. ಮನೆಗಳನ್ನು ಕಳೆದು ಕೊಂಡವರಿಗೆ ಪರಿಹಾರದ ಹಣದ ಜತೆ ಯಲ್ಲಿಯೇ ಮನೆಗಳನ್ನು ನಿರ್ಮಿಸಿಕೊಳ್ಳಲು ಆದೇಶ ಪತ್ರಗಳನ್ನು ನೀಡಲು ನಿರ್ಧರಿಸಿ ದ್ದೆವು. ಆದರೆ, ಪರಿಹಾರದ ಹಣ ಮಂಜೂ ರಾಗದ ಕಾರಣ ಮನೆ ನಿರ್ಮಾಣಕ್ಕೆ ಆದೇಶ ಪತ್ರ ನೀಡುತ್ತಿದ್ದೇವೆ ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಮನೆ ಕಳೆದುಕೊಂಡ ಪ್ರತಿ ಕುಟುಂಬಕ್ಕೆ 20 ಸಾವಿರ ಮತ್ತು ಶೌಚಾಲಯ ನಿರ್ಮಾ ಣಕ್ಕೆ 12 ಸಾವಿರ ರೂ. ಶೀಘ್ರದಲ್ಲಿಯೇ ದೊರೆಯಲಿದ್ದು ಮನೆ ನಿರ್ಮಾಣಕ್ಕೆ ಮತ್ತಷ್ಟು ಸಹಾಯವಾಗಲಿದೆ ಎಂದರು.

ಶಾಸಕ ಎ.ಟಿ.ರಾಮಸ್ವಾಮಿ ಅವರು ಆರ್‍ಡಿಪಿಆರ್ ಯೋಜನೆಯಡಿ ಅತಿವೃಷ್ಟಿ ಯಿಂದಾಗಿ ಹಾಳಾಗಿದ್ದ ತಾಲೂಕಿನ ವಿವಿಧ ಗ್ರಾಮಗಳಾದ ಕೆ.ಅಬ್ಬೂರಿನಲ್ಲಿ 15 ಲಕ್ಷ ರೂ, ಹೆಗ್ಗತ್ತೂರಿನಲ್ಲಿ 15 ಲಕ್ಷ ರೂ, ಹಿಂದಲ ಹಳ್ಳಿಯಲ್ಲಿ 15 ಲಕ್ಷ ರೂ, ಯಡಿಯೂರಿ ನಲ್ಲಿ 20 ಲಕ್ಷ ರೂ, ನಿಲಕುಂದ ಗ್ರಾಮ ದಲ್ಲಿ 10 ಲಕ್ಷ ರೂ, ಕಲ್ಲೂರಿನಲ್ಲಿ 10 ಲಕ್ಷ ರೂ, ಎಬಿಎಂ ಹಳ್ಳಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ದಿವಾ ಕರ, ಮುಖಂಡ ಸಾದಿಕ್ ಸಾಬ್, ನಾಡ ಕಚೇರಿ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ, ಅಧಿಕಾರಿ ಗಳು ಮತ್ತು ಗ್ರಾಮಸ್ಥರು ಇದ್ದರು.

Translate »