ಪೇಜಾವರ ಶ್ರೀಗಳು ಮೊದಲು ಪೀಠ ತ್ಯಾಗ ಮಾಡಿ ನಂತರ ತನಿಖೆಗೆ ಒತ್ತಾಯಿಸಲಿ: ಎ.ಕೆ.ಸುಬ್ಬಯ್ಯ ಆಗ್ರಹ
ಕೊಡಗು

ಪೇಜಾವರ ಶ್ರೀಗಳು ಮೊದಲು ಪೀಠ ತ್ಯಾಗ ಮಾಡಿ ನಂತರ ತನಿಖೆಗೆ ಒತ್ತಾಯಿಸಲಿ: ಎ.ಕೆ.ಸುಬ್ಬಯ್ಯ ಆಗ್ರಹ

July 25, 2018

ಪೊನ್ನಂಪೇಟೆ:  ಉಡುಪಿಯ ಪೇಜಾವರ ಮಠದ ಪೇಜಾವರ ಶ್ರೀಗಳಿಗೆ ತಾರುಣ್ಯದಲ್ಲಿ ಸ್ತ್ರೀಸಂಗ ಇತ್ತೆಂದು ಅವರಿಗೆ ಪದ್ಮ ಎಂಬ ಮಗಳಿದ್ದಾಳೆಂಬ ಆರೋಪಗಳು ಇದೀಗ ಕೇಳಿ ಬರತೊಡಗಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳು ಮೊದಲು ಪೀಠ ತ್ಯಾಗ ಮಾಡಿ ನಂತರ ತನಿಖೆಗೆ ಒತ್ತಾಯಿ ಸಲಿ ಎಂದು ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಆರೋಪವನ್ನು ಅಲ್ಲಗಳೆದಿರುವ ಶ್ರೀಗಳು ಅರೋಪ ಸಾಬೀತಾದರೆ ಪೀಠ ತ್ಯಾಗ ಮಾಡುತ್ತೇನೆಂದು ಹೇಳಿದ್ದಾರೆ. ಇದು ಯತಿ ವರ್ಯ ಪರಂಪರೆಗೆ ಶೋಭೆ ತರುವ ಮಾತಲ್ಲ.

ನೈತಿಕತೆಯ ಪ್ರತಿಬಿಂಬವೇ ಆಗಿರಬೇಕಾದ ಪೇಜಾವರ ಶ್ರೀಗಳು ತಮ್ಮ ಮೇಲಿನ ಆರೋಪದ ಹಿನ್ನೆಲೆಯಲ್ಲಿ ಮೊದಲು ಪೀಠ ತ್ಯಾಗ ಮಾಡಿ ನಂತರ ಈ ಕುರಿತ ಸಮಗ್ರ ತನಿಖೆಗೆ ಒತ್ತಾಯಿಸಬೇಕಿತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

‘ಆರೋಪ ಸಾಬೀತಾದರೆ ರಾಜೀ ನಾಮೆ ನೀಡುತ್ತೇನೆ’ ಎಂದು ಹೇಳುವ ನೀತಿ ಭ್ರಷ್ಟ ರಾಜಕಾರಣಿಗಳನ್ನು ಪೇಜಾ ವರ ಶ್ರೀಗಳು ಇಲ್ಲಿ ಅನುಕರಣೆ ಮಾಡಿ ರುವುದು ಅವರಿಗೆ ಶೋಭೆ ತರುವ ವಿಚಾರ ವಲ್ಲ. ಶ್ರೀಗಳಿಗೆ ತಾರುಣ್ಯದಲ್ಲಿ ಸ್ತ್ರೀಸಂಗ ಇತ್ತೆಂದು ಅವರಿಗೆ ಪದ್ಮ ಎಂಬ ಮಗಳು ಸಹ ಇದ್ದಾಳೆಂದು ಕೇಳಿ ಬಂದಿರುವ ಆರೋಪ ಅಸ್ಪಷ್ಟವಾದುದ್ದೇನಲ್ಲ. ಇದು ಮೇಲ್ನೋಟಕ್ಕೆ ಸತ್ಯದಂತೆ ಗೋಚರಿಸುತ್ತಿದೆ. ‘ಬೆಂಕಿ ಇಲ್ಲದೆ ಹೊಗೆ ಏಳುವುದಿಲ್ಲ’ ಎಂಬ ಮಾತಿಗೆ ಶ್ರೀಗಳು ಏನೆನ್ನುತ್ತಾರೆ ಎಂದು ಪ್ರಶ್ನಿಸಿರುವ ಎ.ಕೆ.ಸುಬ್ಬಯ್ಯ ಅವರು, ಇಂಥ ಪರಿಸ್ಥಿತಿಯಲ್ಲಿ ತಮ್ಮ ಮೇಲಿನ ಆರೋಪ ಸುಳ್ಳೆಂದು ಶ್ರೀಗಳೇ ಸಾಬೀತು ಮಾಡಬೇಕಾದಿತು ಎಂದು ಹೇಳಿದ್ದಾರೆ.

Translate »