`ಪ್ರಧಾನಮಂತ್ರಿ ಆವಾಸ್’ಗೆ ಆಲಗೂಡು ಬಡಾವಣೆ ಆಯ್ಕೆ
ಮೈಸೂರು

`ಪ್ರಧಾನಮಂತ್ರಿ ಆವಾಸ್’ಗೆ ಆಲಗೂಡು ಬಡಾವಣೆ ಆಯ್ಕೆ

December 2, 2018

ತಿ.ನರಸೀಪುರ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ ಆಲಗೂಡು ಬಡಾವಣೆ ಆಯ್ಕೆಯಾಗಿದ್ದು, ಪ.ಜಾತಿ, ಪಂಗಡ ಹಾಗೂ ಸಾಮಾನ್ಯ ಸಮುದಾಯವರಿಗೂ ನಿಗದಿತ ನಿವೇಶನದಲ್ಲಿ ಸೂರು ಕಟ್ಟಿಕೊಡಲಾಗುವುದು ಎಂದು ವರುಣಾ ಶಾಸಕ ಡಾ.ಎಸ್. ಯತೀಂದ್ರ ತಿಳಿಸಿದರು.

ಪಟ್ಟಣದ ಆಲಗೂಡು ಬಡಾವಣೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಆಯ್ಕೆಗೊಂಡಿ ರುವ ಹಿನ್ನೆಲೆಯಲ್ಲಿ ಅಧಿ ಕಾರಿಗಳೊಂದಿಗೆ ಭೇಟಿ ನೀಡಿ, ಫಲಾನು ಭವಿಗಳ ಆಯ್ಕೆ ಸಂಬಂಧ ಮುಖಂಡ ರೊಂದಿಗೆ ಚರ್ಚೆ ನಡೆಸಿದರು.

ನಿಗದಿತ ನಿವೇಶನಗಳಿರುವ ಫಲಾನುಭವಿ ಗಳ ಪಟ್ಟಿಯನ್ನು ತಯಾರಿಸಿಕೊಟ್ಟರೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಕಾರ್ಮಿಕ ಇಲಾಖೆಯಿಂದಲೂ ಹಲವು ಯೋಜನೆಗಳು ಲಭ್ಯವಿದ್ದು, ಇಂದಿರಾ ಕಾಲೋನಿ ಹಾಗೂ ವಿನಾಯಕ ಕಾಲೋನಿಯಲ್ಲಿ ಕನಿಷ್ಠ 100 ಮಂದಿ ನೋಂದಾಯಿತ ಗುರುತಿನ ಚೀಟಿಯುಳ್ಳ ನಿವಾಸಿಗಳಿದ್ದರೆ ಆಯಾಯ ವಾರ್ಡ್‍ಗಳ ಪುರಸಭಾ ಸದಸ್ಯರು ಗಮನಹರಿಸಿ, ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲು ಕಾರ್ಯೋನ್ಮುಖರಾಗ ಬೇಕು ಎಂದು ನಿರ್ದೇಶನ ನೀಡಿದರು.

ಖಾತೆಗಳಿಗೆ ಕಂದಾಯ ಆದಾಲತ್: ಆಲಗೂಡಿನ ಬಹುತೇಕ ನಿವಾಸಿಗಳು ವಾಸ ವಿರುವ ನಿವೇಶನಗಳಿಗೆ ಖಾತೆ ಮಾಡಿಸಿ ಕೊಂಡಿಲ್ಲವೆಂದು ಮುಖಂಡರು ಗಮನ ಸೆಳೆದ ಹಿನ್ನೆಲೆಯಲ್ಲಿ ಆಲಗೂಡು ಬಡಾವಣೆ ಯಲ್ಲಿ ಖುದ್ಧಾಗಿ ಹಾಜರಿದ್ದು, ಕಂದಾಯ ಆದಾಲತ್ ನಡೆಸುವ ಮೂಲಕ ನಿವಾಸಿಗಳಿಗೆ ಖಾತೆ ಮಾಡಿಕೊಡಬೇಕೆಂದು ಸ್ಥಳದಲ್ಲೇ ಹಾಜರಿದ್ದ ಪುರಸಭಾ ಮುಖ್ಯಾಧಿಕಾರಿ ಅಶೋಕ್‍ಗೆ ಶಾಸಕರು ಸೂಚನೆ ನೀಡಿದರು.

ಪುರಸಭೆ ಸದಸ್ಯರಾದ ಎಸ್.ಮದನ್ ರಾಜ್, ಟಿ.ಎಂ.ನಂಜುಂಡಸ್ವಾಮಿ, ಎನ್. ಸೋಮಣ್ಣ, ನಾಮ ನಿರ್ದೇಶನ ಸದಸ್ಯ ರಾದ ನಾಗರಾಜು, ಬಿ.ಮರಯ್ಯ, ಮಾಜಿ ಸದಸ್ಯ ರಾಘವೇಂದ್ರ, ವರುಣಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಜಿಲ್ಲಾ ಕಾಂಗ್ರೆಸ್‍ನ ಮಾಧ್ಯಮ ಸಂಚಾಲಕ ಸಂತೃಪ್ತಿ ಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ ಡಿ.ಆರ್.ಮೂರ್ತಿ, ಗ್ರಾಪಂ ಮಾಜಿ ಸದಸ್ಯ ಹೇಮಂತ್‍ಕುಮಾರ್, ಕೊಳಚೆ ನಿರ್ಮೂಲನಾ ಮಂಡಳಿ ಎಇಇ ಮಹದೇವು, ಪುರಸಭೆ ಯೋಜನಾಧಿಕಾರಿ ಕೆಂಪರಾಜು, ಆರೋ ಗ್ಯಾಧಿಕಾರಿ ಚೇತನ್‍ಕುಮಾರ್, ಕಂದಾ ಯಾಧಿಕಾರಿ ಪುಟ್ಟಸ್ವಾಮಿ, ಸಮುದಾಯ ಸಂಘಟಕ ಮಹದೇವು ಇನ್ನಿತರರಿದ್ದರು.

Translate »