ಶುದ್ಧ ನೀರಿನ ಘಟಕಗಳಿಗೆ ಶಾಸಕ ಹೆಚ್.ವಿಶ್ವನಾಥ್ ಮರುಚಾಲನೆ
ಮೈಸೂರು

ಶುದ್ಧ ನೀರಿನ ಘಟಕಗಳಿಗೆ ಶಾಸಕ ಹೆಚ್.ವಿಶ್ವನಾಥ್ ಮರುಚಾಲನೆ

December 2, 2018

ಹುಣಸೂರು: ನಗರದದ್ಯಾಂತ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ಬಾರದೆ ನೆನೆಗುದಿಗೆ ಬಿದ್ದಿದ್ದ ಶುದ್ಧ ನೀರಿನ ಘಟಕಗಳಿಗೆ ಇಂದು ಶಾಸಕ ಹೆಚ್.ವಿಶ್ವನಾಥ್ ಮರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹಿಂದೆ ಕುಡಿಯುವ ನೀರಿನ ಘಟಕ ಗಳನ್ನು ನಿರ್ಮಿಸುವಾಗ ಕೊಳವೆ ಬಾವಿ ಕೊರೆದು ನೀರಿನ ಸಂಪನ್ಮೂಲವನ್ನು ಮಾಡಿ ಕೊಂಡು ನಂತರ ಘಟಕವನ್ನು ನಿರ್ಮಿಸಬೇಕಿತ್ತು. ಅದರೆ ಕೇವಲ ದಾಖಲೆಗಳಿಗಾಗಿ ನಗರದ ವಿವಿಧ ಕಡೆಗಳಲ್ಲಿ ತಲಾ 8.25 ಲಕ್ಷ ರೂ. ವೆಚ್ಚದಲ್ಲಿ 8 ಘಟಕಗಳನ್ನು 66 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದರೂ ಜನರಿಗೆ ಶುದ್ಧ ನೀರು ಒದಗಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ನಗರದ ಶಬ್ಬಿರ್ ನಗರ, ಮುಸ್ಲಿಂ ಬ್ಲಾಕ್, ರಂಗನಾಥ ಬಡಾವಣೆ, ಕಲ್ಕುಣಿಕೆ ಸರ್ಕಲ್, ಸದಾಶಿವನ ಕೊಪ್ಪಲ್, ದಾವಣಿ ಬೀದಿ, ಚಿಕ್ಕ ಹುಣಸೂರು, ಮಾರುತಿ ಬಡಾವಣೆ ಸೇರಿದಂತೆ 8 ಕಡೆಗಳಲ್ಲಿ ಘಟಕಗಳನ್ನು ನಿರ್ಮಿಸ ಲಾಗಿತ್ತು. ಅದರೆ ಜನರಿಗೆ ಮಾತ್ರ ಕುಡಿಯಲು ನೀರಿಲ್ಲ.

ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶವೂ ವ್ಯಕ್ತವಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಗಾದರೂ ಸರಿ ಜನರಿಗೆ ಶುದ್ಧ ನೀರು ನೀಡಲೇಬೇಕು ಎಂಬ ಉದ್ದೇಶದಿಂದ ತಾತ್ಕಲಿಕವಾಗಿ ನಗರಸಭೆ ನೀರು ಸರಬರಾಜು ವ್ಯೆವಸ್ಥೆಯಿಂದ ನೀರನ್ನು ಒದಗಿಸಿ ಜನರಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಮುಂದೆ ಘಟಕಗಳ ಪಕ್ಕದಲ್ಲೇ ಬೋರ್‍ವೇಲ್ ಕೊರೆದು ಘಟಕಗಳಿಗೆ ನೀರಿನ ಮೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು. ನಗರಸಭೆ ಸಹಾಯಕ ಕಾರ್ಯಪಾಲ ಅಭಿಯಂತರೆ ಅನುಪಮಾ ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಹೆಚ್.ವೈ.ಮಹದೇವು, ಸದಸ್ಯರಾದ ಸುನಿತಾ ಜಯರಾಮೆಗೌಡ, ಹೆಚ್.ಪಿ.ಸತೀಶ, ನಸ್ರುಲ್ಲಾ, ಶಿವಕುಮಾರ, ನರಸಯ್ಯ, ಶಿವರಾಜು, ಪಜಲುಲ್ಲಾ, ಸರ್ದಾರ್, ಸತೀಶ್ ಪಾಪಣ್ಣ, ಹೆಚ್.ಟಿ.ಬಾಬು, ಪೌರಾಯುಕ್ತ ಶಿವಪ್ಪನಾಯಕ ಉಪಸ್ಥಿತರಿದ್ದರು.

Translate »