ಕಾಮಗೆರೆ: ಅಕ್ರಮವಾಗಿ ಮಾರಾಟ ಮಾಡಲು ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಹನೂರು ಪೆÇಲೀಸರು ಬಂಧಿಸಿ ಮದ್ಯ ವಶಪಡಿಸಿಕೊಂಡಿದ್ದಾರೆ.
ಕಾಮಗೆರೆ ಸಮೀಪದ ಕಣ್ಣೂರು ಗ್ರಾಮದ ಶಿವಮಲ್ಲೆಗೌಡ ಎಂಬುವರ ಮಗ ವೃಷಭೇಂದ್ರ (27) ಬಂಧಿತ ಆರೋಪಿ.
ಈತ ಹನೂರಿನ ಬಾರೊಂದರಲ್ಲಿ 2910 ರೂ. ಮೌಲ್ಯದ ಮದ್ಯ ಖರೀದಿಸಿ ಮಾರಾಟ ಮಾಡಲು ಗ್ರಾಮಕ್ಕೆ ತೆರಳುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಪಿಐ ಮೊಹೀತ್ ಸಹದೇವ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ 96 ಮದ್ಯದ ಪೌಚ್‍ಗಳು ಸಿಕ್ಕಿದ್ದು, ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಮುಖ್ಯ ಪೇದೆ ಸಿದ್ದೇಶ್, ರಾಮದಾಸ್, ಪ್ರದೀಪ್, ಚಂದ್ರಶೇಖರ್ ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು.