ಅಖಿಲ ಭಾರತ 16ನೇ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಮ್ಮೇಳನದ ಸಮಾರೋಪ
ಹಾಸನ

ಅಖಿಲ ಭಾರತ 16ನೇ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಮ್ಮೇಳನದ ಸಮಾರೋಪ

March 6, 2019

ತಾಂತ್ರಿಕ ದೋಷದಿಂದ ಗ್ರಾಹಕರ ಕೆಲಸ ವಿಳಂಬ: ಚಿತ್ರಸೇನಾ
ಶ್ರವಣಬೆಳಗೊಳ: ಗ್ರಾಮೀಣ ಪ್ರದೇಶಗಳಲ್ಲಿ ತಾಂತ್ರಿಕತೆ ತರುವ ಉದ್ದೇಶದಿಂದ ಸರ್ಕಾರವು ಅಂಚೆ ಇಲಾಖೆಗೆ ಆಧುನಿಕ ಯಂತ್ರೋಪಕರಣ ನೀಡಿದೆ. ಆದರೂ ಕೆಲವು ತಾಂತ್ರಿಕ ದೋಷ ಗಳಿರುವುದರಿಂದ ನೌಕರರು ಸಕಾಲಕ್ಕೆ ಗ್ರಾಹಕರ ಕೆಲಸಗಳನ್ನು ಪೂರೈಸಲು ಸಾಧ್ಯ ವಾಗುತ್ತಿಲ್ಲ ಎಂದು ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ನೂತನ ಅಧ್ಯಕ್ಷ ಎಂ.ಪಿ.ಚಿತ್ರಸೇನ ಹೇಳಿದರು.

ಇಲ್ಲಿನ ಚಾವುಂಡರಾಯ ಸಭಾಮಂಟಪ ದಲ್ಲಿ ಮಂಗಳವಾರ ಅಖಿಲ ಭಾರತ 16ನೇ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಮ್ಮೇಳನ ಹಾಗೂ ಅಂಚೆ ನೌಕರರ ಸಂಘದ 3ನೇ ವರ್ಗ ಮತ್ತು ಜಿ.ಡಿ.ಎಸ್ ನೌಕರರ 24ನೇ ಜಂಟಿ ವಲಯ ಸಮ್ಮೇ ಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಅಂಚೆ ಇಲಾಖೆಗೆ ಒದಗಿಸಿರುವ ಯಂತ್ರಗಳಲ್ಲಿರುವ ಅಂತ ರ್ಜಾಲ ಸೌಲಭ್ಯ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ ಕೊಡಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಗ್ರಾಮೀಣ ಭಾಗಗಳಲ್ಲಿ ಮಹಿಳಾ ನೌಕರರ ಸಂಖ್ಯೆ ಬೆರಳೆಣಿಕೆಯ ಷ್ಟಿತ್ತು. ಇಂದು ಶೇ. 50ಕ್ಕೂ ಹೆಚ್ಚಿನ ಸಂಖ್ಯೆ ಯಲ್ಲಿ ಮಹಿಳಾ ನೌಕರರಿದ್ದಾರೆ. ಮಹಿಳೆ ಯರು ಕಾರ್ಯನಿರ್ವಹಿಸುವ ಸ್ಥಳದಲ್ಲಿ ರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿ ಹಾರ ಪಡೆದುಕೊಳ್ಳಲು ತನ್ನದೇಯಾದ ಸಂಘಟನೆ ರೂಪಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ. 5 ಜನರನ್ನು ಮಹಿಳಾ ಸಂಚಾಲಕಿಯರನ್ನು ನೇಮಿ ಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಗುವುದು ಎಂದರು.
7ನೇ ವೇತನ ಜಾರಿಯಾದ ಬಳಿಕ ನೌಕರರಿಗೆ 3 ಪಟ್ಟು ವೇತನ ಹೆಚ್ಚಳವಾಗ ಲಿದೆ ಎಂಬುದು ಘೋಷಣೆಯಾಗೇ ಉಳಿದಿದ್ದು, ಸಮಿತಿ ನೀಡಿದ ಯೋಜ ನೆಯು ಪೂರ್ತಿ ಅನುಷ್ಠಾನಕ್ಕೆ ಬಾರದೆ ಕೇವಲ 1,500-2,000 ರೂ.ಮಾತ್ರ ಹೆಚ್ಚಳ ಮಾಡಲಾಗಿದೆ. ಈ ತಾರತಮ್ಯ ವನ್ನು ಸರಿಪಡಿಸಬೇಕಾಗಿ ನೌಕರರ ಸಮ್ಮೇ ಳನದಲ್ಲಿ ಸರ್ವಾನುಮತದಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು.

ಸಮ್ಮೇಳನ ಸಮಿತಿಯ ಉಪಾಧ್ಯಕ್ಷ ಎಸ್.ಎನ್À.ಅಶೋಕ್‍ಕುಮಾರ್ ಮಾತ ನಾಡಿ, ಕ್ಷೇತ್ರದಲ್ಲಿ ಯಾವುದೇ ನಿರ್ಣಯ ಗಳನ್ನು ಕೈಗೊಂಡರು ಮುಂದಿನ ದಿನಗಳಲ್ಲಿ ಯಶಸ್ವಿಯಾಗುತ್ತವೆ. ದೇಶದಲ್ಲಿ ಅಂಚೆ ಇಲಾಖೆಯು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದು ಇದರ ಶ್ರೇಯಸ್ಸು ನೌಕರರಿಗೆ ಸಲ್ಲುತ್ತದೆ. ನೌಕರರ ಬೇಡಿಕೆ ಗಳು ಈಡೇರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಂಚೆ ನೌಕರರ ಮಾಜಿ ಪ್ರಧಾನ ಕಾರ್ಯದರ್ಶಿ ಡಿ.ತ್ಯಾಗರಾಜನ್, ಗ್ರಾಮೀಣ ಅಂಚೆ ನೌಕ ರರ ಸಂಘದ ಪ್ರಧಾನ ಕಾರ್ಯದರ್ಶಿ ಕೇರಳದ ಪಿ.ಯು.ಮುರುಳಿಧರನ್, ಸಹಾ ಯಕ ಕಾರ್ಯದರ್ಶಿ ಬಿ.ಶಿವಕುಮಾರ್, ನಿರಂಜನ್‍ಮೂರ್ತಿ, ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ಸಿಬ್ಬಂದಿಗಳು ಇದ್ದರು.

Translate »