ಹಿರೀಕಾಟಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ
ಚಾಮರಾಜನಗರ

ಹಿರೀಕಾಟಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

December 11, 2018

ಬೇಗೂರು:  ಹಿಂದುಳಿದ, ದಲಿತ ಹಾಗೂ ಮಹಿಳೆಯ ರಲ್ಲಿ ಸಮಾನತೆ ಸೋದರತೆ ಮತ್ತು ಸ್ವಾತಂತ್ರ್ಯ ಎಂಬ ತ್ರಿರತ್ನಗಳಿಗೆ ತನ್ನ ಜೀವನವನ್ನೆ ಮುಡಿಪಾಗಿಟ್ಟಿದ್ದ ಮಹಾ ಚೇತನ ಡಾ. ಬಿ. ಆರ್ ಅಂಬೇಡ್ಕರ್ ಎಂದು ವಕೀಲ ಎಂ.ಶಿವು ಅಭಿಪ್ರಾಯಪಟ್ಟರು.

ಅವರು ಬೇಗೂರು ಸಮೀಪದ ಹಿರೀಕಾಟಿ ಗ್ರಾಮದಲ್ಲಿ ನಡೆದ 62 ನೇ ಪರಿನಿರ್ವಾಣ ದಿನದಲ್ಲಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಇಡೀ ವಿಶ್ವದ ಜ್ಞಾನದ ಸಂಕೇತವಾಗಿರುವ ಮಹಾ ಚೇತನ. ಇಂದು ಕೇವಲ ಭಾರತೀಯರಿಗೆ ಮಾತ್ರ ಸೀಮಿತವಾಗದೇ ಇಡೀ ವಿಶ್ವದಲ್ಲಿ ಅವರನ್ನು ಸ್ಮರಿಸಲಾಗುತ್ತಿದೆ. ಅವರು ವ್ಯಾಸಂಗ ಮಾಡಿದ ಅಮೇರಿಕಾ ಮತ್ತು ಲಂಡನ್ ದೇಶಗಳಲ್ಲಿ ಅವರನ್ನು ಇಂದು ಗುರ್ತಿಸಲಾಗುತ್ತಿದೆ ಎಂದರು. ವಿಶ್ವದ ಧರ್ಮಗಳಲ್ಲಿ ಮನುಷ್ಯತ್ವಕ್ಕೆ ಹತ್ತಿರ ವಿರುವ ಧರ್ಮ ಬೌಧ್ದ ಧರ್ಮವಾದ್ದ ರಿಂದ ಅವರ ಕೊನೆಯ ದಿನಗಳಲ್ಲಿ ಬೌಧ್ದ ಧರ್ಮಕ್ಕೆ ಮತಾಂತರ ವಾದರು. ಅವರ ಹಾಕಿಕೊಟ್ಟ ಜೀವನ ಮಾರ್ಗ ಮತ್ತು ಸಿದ್ದಾಂತ ಗಳನ್ನು ನಾವು ಪಾಲಿಸಿದಾಗ ಮಾತ್ರ ನಾವು ಅವರಿಗೆ ಗೌರವ ಕೊಟ್ಟಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜೈ ಭೀಮ್ ಗೆಳೆಯರ ಬಳಗದ ಪದಾಧಿಕಾರಿಗಳಾದ ಅನಿಲ್, ಅರುಣ, ಯೋಗಿಶ್, ರಂಗಪ್ಪ, ಆದರ್ಶ, ಮಂಜು, ನಂದೀಶ, ವಿಷಕಂಠ, ಸಿದ್ದರಾಜು ಪುಟ್ಟು, ನವೀನ, ಅಶೋಕ, ರಮೇಶ, ಕುಮಾರ, ನಾಗರಾಜು, ವಿಜ, ಕಿಟು. ಪ್ರಸನ್ನ, ಸಂಜಯ್ ಮತ್ತು ಗ್ರಾಮದ ಮುಖಂಡರಾದ ದೇವಣ್ಣ, ರೇವಣ್ಣ, ಚಿನ್ನಯ್ಯ, ನೀಲಕಂಠ, ನಾಗಣ್ಣ, ಶ್ರೀರಾಮ, ಸಂಪತ್ತು, ಸುರೇಶ, ಶಿವಪ್ಪ, ನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬೇಗೂರು ಸಮೀಪದ ಹಿರೀಕಾಟಿ ಗ್ರಾಮದಲ್ಲಿ ಡಾ. ಬಿ. ಆರ್.ಅಂಬೇ ಡ್ಕರ್ ರವರ ಭಾವಚಿತ್ರವನ್ನು ಮೊಂಬತ್ತಿ ಹಚ್ಚಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

Translate »