ಅಂಗನವಾಡಿ ಸೂರು, ಸಮಸ್ಯೆಗಳು ನೂರು!
ಚಾಮರಾಜನಗರ

ಅಂಗನವಾಡಿ ಸೂರು, ಸಮಸ್ಯೆಗಳು ನೂರು!

November 30, 2018

ಗುಂಡ್ಲುಪೇಟೆ: ದೂರದಿಂದ ನೋಡಿದರೆ ಯಾವುದೊ ಸಣ್ಣ ಮನೆ. ಅದರ ಮುಂದೆ ಒಂದು ಬೋರ್ಡ್. ಅದನ್ನು ಸೂಕ್ತ ವಾಗಿ ಗಮನಿಸಿದರೆ ಇದು ನಮ್ಮ ಪುಟ್ಟ ಕಂದಮ್ಮಗಳು ಕಲಿಯುತ್ತಿರುವ ಅಂಗನ ವಾಡಿ ಕೇಂದ್ರ ಎಂಬುದು ಗೊತ್ತಾಗುತ್ತದೆ.

ಇಲ್ಲಿ ಯಾವುದೇ ಮೂಲ ಸೌಕರ್ಯ ಗಳಿಲ್ಲ. ಕೊಟ್ಟಿಗೆಯಂತಹ ಒಂದು ಅಂಕ ಣದ ನೆಲವನ್ನು ತೊಪ್ಪೆಯಲ್ಲಿ ಸಾರಿಸಿ ಅದರ ಮೇಲೆ ಚಾಪೆಯಿಟ್ಟು ಮಕ್ಕಳಿಗೆ ಪಾಠ ಹೇಳಿ ಕೊಡಲಾಗುತ್ತಿದೆ.

ಇದು ಯಾವುದೇ ಪುಟ್ಟ ಗ್ರಾಮದ ಅಂಗನ ವಾಡಿ ಕೇಂದ್ರದ ಕಥೆಯಲ್ಲ. ಪಟ್ಟಣದ ನಾಯಕರ ಬೀದಿಯಲ್ಲಿರುವ ಅಂಗನವಾ ಡಿಯ ದುಸ್ಥಿತಿ. ಇದರ ಸಮೀಪಕ್ಕೆ ಹೋದರೆ ಇಲ್ಲಿ ನಮ್ಮ ಮಕ್ಕಳು ಕಲಿಯುತ್ತಿದ್ದಾರಾ ಎಂದು ಬೇಸರ ಪಟ್ಟುಕೊಳ್ಳುವಷ್ಟು ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕು ವಷ್ಟು ಆಕ್ರೋಶ ಬರುತ್ತದೆ.

ಹೌದು. ಇದು ಪಟ್ಟಣದಲ್ಲಿರುವ ನಾಯಕರ ಬೀದಿಯ ಅಂಗನವಾಡಿ ಕೇಂದ್ರದ ಕಥೆ. ಈ ಕೇಂದ್ರವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕಾರಣ ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಆದರೂ, ಪುಟ್ಟ ಮಕ್ಕಳು ಇಲ್ಲಿ ಪಾಠ ಕಲಿಯುವ ಅನಿವಾರ್ಯತೆ ಉಂಟಾಗಿದೆ.

12ನೇ ವಾರ್ಡಿಗೆ ಸೇರಿದ ನಾಯಕರ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದ ಕೇಂದ್ರದ ಕೊಠಡಿಯು ಶಿಥಿಲಾವಸ್ಥೆಗೆ ಬಂದಿದ್ದ ರಿಂದ ಕಳೆದ ವರ್ಷ ಬಾಡಿಗೆ ಕಟ್ಟಡ ವೊಂದಕ್ಕೆ ಸ್ಥಳಾಂತರಿಸಲಾಗಿದೆ. ಈ ಕಟ್ಟ ಡವೂ ಶಿಥಿಲವಾಗಿದೆ. ಸಗಣಿಯಿಂದ ಸಾರಿಸಿದ ನೆಲದ ಮೇಲೆ ಮಕ್ಕಳು ಕೂರಬೇ ಕಾಗಿದೆ. ಕೊಠಡಿಯ ಒಂದು ಮೂಲೆ ಯಲ್ಲಿ ಅಡುಗೆ ಮಾಡಿದರೆ

ಇನ್ನೊಂದು ಮೂಲೆಯಲ್ಲಿ ಸಾಮಗ್ರಿಗಳು ಹಾಗೂ ಮಕ್ಕಳ ಕಲಿಕೆಗೆ ಅಗತ್ಯವಾದ ಪರಿಕರ ಗಳನ್ನು ಸಂಗ್ರಹಿಸಲಾಗಿದೆ.
ಛಾವಣಿಗೆ ಹಾಕಿರುವ ಕಲ್ನಾರು ಶೀಟು ಗಳು ಒಡೆದು ಮಳೆಗಾಲದಲ್ಲಿ ನೀರು ಒಳಗೆ ಸುರಿಯುತ್ತಿದ್ದು ಬೇಸಿಗೆಯಲ್ಲಿ ಬಿಸಿಲಿಗೆ ಕಾದು ಬೇಗೆಯಲ್ಲಿ ಮಕ್ಕಳು ಬೇಯುವಂತೆ ಮಾಡಿದೆ. ಅಂಗನವಾಡಿ ಕೇಂದ್ರದ ಮಕ್ಕ ಳಿಗೆ ಶೌಚಾಲಯ ವ್ಯವಸ್ಥೆಯಿಲ್ಲ. ಇದರಿಂದ ಮಕ್ಕಳು ಬೀದಿಯಲ್ಲಿಯೇ ನಿಂತು ಮೂತ್ರ ವಿಸರ್ಜನೆ ಮಾಡಬೇಕು. ಇಲ್ಲವೇ ಪಾಲ ಕರು ತಮ್ಮ ಮನೆಗೆ ಕರೆದೊಯ್ಯಬೇಕಾ ಗಿದೆ. ಈ ಸ್ಥಳದಲ್ಲಿ ಮಧ್ಯಾಹ್ನ ಊಟ ಮಾಡಲು ಸ್ಥಳಾವಕಾಶವಿಲ್ಲದೆ ಗರ್ಭಿಣಿ ಯರಿಗೆ ನೀಡುವ ಊಟವನ್ನು ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ. ಇಲ್ಲಿನ ಅನೈರ್ಮಲ್ಯ ವಾತಾವರಣದಿಂದ ಮಕ್ಕಳು ಆಗಾಗ ಅನಾರೋಗ್ಯಕ್ಕೊಳಗಾಗುತ್ತಿದ್ದಾರೆ ಎಂದು ಮಕ್ಕಳ ಪೋಷಕರು ಬೇಸರ ವ್ಯಕ್ತಪಡಿಸಿದರು.

ಅಂಗನವಾಡಿಯಲ್ಲಿ 12ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕಲಿಯುತ್ತಿದ್ದು, ಮಕ್ಕಳಿಗೆ ಪೌಷ್ಟಿಕ ಆಹಾರ, ಕಲಿಕೆಗೆ ಅಗತ್ಯವಾದ ಪರಿಸರವಿಲ್ಲದ ದನದ ಕೊಟ್ಟಿಗೆಯಂತ ಕೊಠಡಿಯಲ್ಲಿ ಅಂಗನವಾಡಿ ನಡೆಸ ಲಾಗುತ್ತಿದೆ. ಇನ್ನಾದರೂ ಸಂಬಂಧಪ ಟ್ಟವರು ಅಂಗನವಾಡಿ ಕೇಂದ್ರಕ್ಕೆ ಉತ್ತಮ ಕಟ್ಟಡ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಮಕ್ಕಳ ಪೋಷಕರಾದ ಮಂಜುಳಾ, ಶೃತಿ, ಶಿಲ್ಪ, ಗೌರಮ್ಮ ಮತ್ತು ಪದ್ಮ ಒತ್ತಾಯಿಸಿದ್ದಾರೆ.

ಅಂಗನವಾಡಿ ಕೇಂದ್ರದ ಹಳೆಯ ಕಟ್ಟಡ ಶಿಥಿಲವಾಗಿದ್ದರಿಂದ ಬೇರೆ ಉತ್ತಮ ಕಟ್ಟಡಕ್ಕೆ ಹುಡುಕಾಟ ನಡೆಸಲಾಗುತ್ತಿದೆ. ಪುರಸಭೆಯು ನಿವೇಶನ ನೀಡಿದರೆ ನೂತನ ಕಟ್ಟಡ ನಿರ್ಮಾಣ ಮಾಡಲಾಗುವುದು. ಅಲ್ಲಿಯವರೆಗೆ ಉತ್ತಮ ಕಟ್ಟಡ ದೊರಕಿದರೆ ಸ್ಥಳಾಂತರಿಸಲಾಗುವುದು. ಸದ್ಯದಲ್ಲೇ ಬೇರೆ ಕಟ್ಟಡವನ್ನು ಬಾಡಿಗೆಗೆ ಪಡೆಯಲು ಚಿಂತಿಸಲಾಗಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗುವುದು.- ಜಯಶೀಲನ್, ಸಿಡಿಪಿಒ, ಗುಂಡ್ಲುಪೇಟೆ

Translate »