ಇಂದು ಮಾದಪ್ಪನ ಸನ್ನಿಧಿಗೆ ಸಿಎಂ ಕುಮಾರಸ್ವಾಮಿ ಭೇಟಿ
ಚಾಮರಾಜನಗರ

ಇಂದು ಮಾದಪ್ಪನ ಸನ್ನಿಧಿಗೆ ಸಿಎಂ ಕುಮಾರಸ್ವಾಮಿ ಭೇಟಿ

November 30, 2018
  • ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಜಿಲ್ಲಾ ಪ್ರವಾಸ
  • ಬಡಗಲಮೋಳೆ, ಕೊಂಬುಡಿಕ್ಕಿ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಗಮನ ಸೆಳೆದಿದ್ದ ಹೆಚ್‍ಡಿಕೆ

ಚಾಮರಾಜನಗರ: ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇದೇ ಮೊದಲ ಬಾರಿಗೆ ನಾಳೆ(ನ.30) ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸಲಿದ್ದು, ಮೊದಲು ಮಾದ ಪ್ಪನ ದರ್ಶನ ಪಡೆಯಲಿದ್ದಾರೆ. ನಂತರ ಬೆಟ್ಟ ದಲ್ಲಿ ಶ್ರೀ ಮಲೆಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಜೇನುಮಲೆ ವಸತಿಗೃಹ ಮತ್ತು ಮಳಿಗೆಗಳನ್ನು ಉದ್ಘಾ ಟಿಸುವರು. ನಂತರ ಅಧಿಕಾರಿಗಳೊಂದಿಗೆ ಚರ್ಚಿಸುವರು. ತದನಂತರ ಶ್ರೀ ಸುತ್ತೂರು ಮಠದಿಂದ ನಿರ್ಮಿಸಿರುವ ಅತಿಥಿಗೃಹ ವನ್ನು ಉದ್ಘಾಟಿಸಲಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ 2018-19ನೇ ಸಾಲಿನ ಪ್ರಥಮ ಸಭೆ ಯನ್ನು ನಡೆಸುವರು.

ಹೆಲಿಕಾಪ್ಟರ್ ಮೂಲಕ ಬೆಳಿಗ್ಗೆ 10.50ಕ್ಕೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಮುಖ್ಯ ಮಂತ್ರಿಗಳು ಮಧ್ಯಾಹ್ನ 3.30ರವರೆಗೂ ಒಟ್ಟು 5 ಗಂಟೆಗಳ ಕಾಲ ಬೆಟ್ಟದಲ್ಲಿರುವರು. ಈ ವೇಳೆ ಬೆಟ್ಟದಲ್ಲಿ ಆಯೋಜಿಸಿರುವ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿ ಕಾರಿ ಬಿ.ಪಿ. ಚನ್ನಬಸವೇಶ ತಿಳಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಈ ಹಿಂದೆ ಮೊದಲ ಬಾರಿ ಮುಖ್ಯಮಂತ್ರಿಯಾಗಿ ದ್ದಾಗ ಜಿಲ್ಲೆಗೆ ಮೂರು ಬಾರಿ ಭೇಟಿ ನೀಡಿ ದ್ದರು. ಇದಲ್ಲದೇ ಚಾಮರಾಜನಗರ ತಾಲೂ ಕಿನ ಬಡಗಲಮೋಳೆ ಮತ್ತು ಮಹದೇಶ್ವರ ಬೆಟ್ಟದ ಬಳಿಯ ಕೊಂಬುಡಿಕ್ಕಿ ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು.

ಮುಖ್ಯಮಂತ್ರಿಗಳು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಲು ಹಿಂಜರಿಯುತ್ತಿದ್ದ ಸಂದ ರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮೂರು ಬಾರಿಗೆ ಜಿಲ್ಲೆಗೆ ಭೇಟಿ ನೀಡಿ ಇತಿಹಾಸ ನಿರ್ಮಿಸಿದ್ದರು. ಈ ವೇಳೆ ಚಾಮರಾಜೇ ಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ಅಂದು ರಾತ್ರಿ ತಾಲೂಕಿನ ಬಡ ಗಲ ಮೋಳೆ ಗ್ರಾಮದಲ್ಲಿ ವಾಸ್ತವ್ಯ ಹೂಡಿ ದ್ದರು. ಬಳಿಕ ಜಿಲ್ಲೆಯಲ್ಲಿ ನಡೆದ ಎರಡು ಕಾರ್ಯಕ್ರಮಗಳಿಗೆ ಭೇಟಿ ನೀಡಿದ್ದರು.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಅಧಿ ಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಹೆಚ್‍ಡಿಕೆ ಭೇಟಿ ನೀಡು ತ್ತಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಜಿಲ್ಲೆ ಹಾಗೂ ಮಾದಪ್ಪನ ಸನ್ನಿಧಿಯ ಅಭಿವೃದ್ಧಿಗೆ ಏನಾದರೂ ಯೋಜನೆ ಘೋಷಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

ಮುಖ್ಯಮಂತ್ರಿಗಳ ಪ್ರವಾಸದ ವಿವರ:

  • ಬೆಳಿಗ್ಗೆ 10.50ಕ್ಕೆ ಹೆಲಿಕಾಪ್ಟರ್‍ನಲ್ಲಿ ಮಹದೇಶ್ವರ ಬೆಟ್ಟಕ್ಕೆ
  • 11.15ಕ್ಕೆ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ
  •  11.30ಕ್ಕೆ ಜೇನುಮಲೆ ವಸತಿಗೃಹ 2 ಮಳಿಗೆಗಳ ಉದ್ಘಾಟನೆ.
  •  11.45ಕ್ಕೆ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ
  •  ಮಧ್ಯಾಹ್ನ 12ಕ್ಕೆ ಸುತ್ತೂರು ಮಠದ ಅತಿಥಿಗೃಹ ಉದ್ಘಾಟನೆ
  •  2.30ಕ್ಕೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ 2018-19ನೇ
    ಸಾಲಿನ ಪ್ರಥಮ ಸಭೆ
  •  3.30ಕ್ಕೆ ಬೆಂಗಳೂರಿನತ್ತ ಪ್ರಯಾಣ

Translate »