ತಲೆ ಹರಟೆ ಬೇಡ, ಕೇಳಿದ್ದಕ್ಕಷ್ಟೇ ಉತ್ತರ ನೀಡಿ: ಐಎಎಸ್ ಅಧಿಕಾರಿಗೆ ಸಚಿವ ಡಿಕೆಶಿ ತಾಕೀತು
ಮೈಸೂರು

ತಲೆ ಹರಟೆ ಬೇಡ, ಕೇಳಿದ್ದಕ್ಕಷ್ಟೇ ಉತ್ತರ ನೀಡಿ: ಐಎಎಸ್ ಅಧಿಕಾರಿಗೆ ಸಚಿವ ಡಿಕೆಶಿ ತಾಕೀತು

June 12, 2018

ಬೆಂಗಳೂರು: ತಲೆ ಹರಟೆ ಬೇಡ, ಕೇಳಿದ್ದಕ್ಕಷ್ಟೇ ಉತ್ತರ ನೀಡಿ ಎಂದು ಐಎಎಸ್ ಅಧಿಕಾರಿಯೊಬ್ಬ ರನ್ನು ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಚರ್ಚೆ ಸಂದರ್ಭದಲ್ಲಿ ಈ ಪ್ರಸಂಗ ನಡೆದಿದೆ. ಸಭೆ ಪ್ರಾರಂಭವಾಗುವ ಸಂದರ್ಭದಲ್ಲಿ ತಮ್ಮ ಪರಿಚಯ ಮಾಡಿ ಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಒಬ್ಬ ಅಧಿಕಾರಿ ತನ್ನ ಸರದಿ ಬಂದ ಸಂದರ್ಭ ದಲ್ಲಿ ತಾನು ನಿರ್ವಹಿಸುತ್ತಿರುವ ಇಲಾಖೆಯ ಹೊಣೆಗಾರಿಕೆಯನ್ನು ಪರಿಚಯಿಸಿದ್ದಲ್ಲದೆ, ತನ್ನ ರಾಜಕೀಯ ನಂಟು ಹಾಗೂ ಪ್ರಭಾವವನ್ನು ಸಚಿವರ ಮುಂದೆ ಬಿಡಿಸಿಡಲು ಮುಂದಾದರು. ಇದರಿಂದ ಸಿಟ್ಟಾದ ಸಚಿವರು, ಕೇಳಿದ್ದಕ್ಕಷ್ಟೇ ಉತ್ತರ ಕೊಡಿ. ನಿಮ್ಮ ಪೂರ್ವ ಇತಿಹಾಸ ಮತ್ತು ಅಧಿಕ ಪ್ರಸಂಗತನ ಇಲ್ಲಿ ಬೇಡ ಎಂದಾಗ ಒಂದು ಕ್ಷಣ ಸಭೆಯಲ್ಲಿದ್ದ ಅಧಿಕಾರಿಗಳು ತಳಮಳಗೊಂಡು ಗಪ್‍ಚಿಪ್ ಆದರು. ವೈಯಕ್ತಿಕ ಮಾಹಿತಿ ನೀಡಲು ಹೋದ ಅಧಿಕಾರಿ ಪೆಚ್ಚು ಮೋರೆ ಹಾಕಿಕೊಂಡು ಸುಮ್ಮನೆ ಕುಳಿತರು ಎಂದು ತಿಳಿದುಬಂದಿದೆ.

Translate »