ಎಲ್ಲಾ ಗ್ರಾಮಗಳ ಸೇರ್ಪಡೆಗೆ ಸಿದ್ದರಾಮಯ್ಯರಿಗೆ ಮನವಿ
ಮೈಸೂರು

ಎಲ್ಲಾ ಗ್ರಾಮಗಳ ಸೇರ್ಪಡೆಗೆ ಸಿದ್ದರಾಮಯ್ಯರಿಗೆ ಮನವಿ

December 4, 2020

ಮೈಸೂರು, ಡಿ.3-ಮೈಸೂರು ಸಮೀಪದ ಬೀರಿಹುಂಡಿ ಪಂಚಾಯಿತಿಗೆ ಸೇರಿದ ಎಲ್ಲಾ ಗ್ರಾಮಗಳನ್ನು ಬೋಗಾದಿ ಪಟ್ಟಣ ಪಂಚಾ ಯಿತಿಗೆ ಸೇರಿಸಲು ಸರ್ಕಾರಕ್ಕೆ ಸಲಹೆ ನೀಡು ವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ ನೇತೃತ್ವದಲ್ಲಿ ಗುರುವಾರ ಮನವಿ ಸಲ್ಲಿಸಲಾಯಿತು.

ಹೊಸದಾಗಿ ರಚನೆ ಯಾಗಿರುವ ಬೋಗಾದಿ ಪಟ್ಟಣ ಪಂಚಾಯಿತಿಗೆ ಬೀರಿಹುಂಡಿ ಪಂಚಾಯಿತಿ ವ್ಯಾಪ್ತಿಗೆ ಬರುವ ಬಡಗಲಹುಂಡಿ, ಕೇರ್ಗಳ್ಳಿ, ಕೆ. ಸಾಲುಂಡಿ, ನಂಜರಾಜಯ್ಯ ನಹುಂಡಿ, ಮನ್ನಹುಂಡಿ ಗ್ರಾಮ ಗಳು ಸೇರ್ಪಡೆಯಾಗುತ್ತವೆ. ಉಳಿದಂತೆ ಬಲ್ಲಹಳ್ಳಿ, ಬೀರಿ ಹುಂಡಿ, ಕುಮಾರಬೀಡು, ಗೋಹಳ್ಳಿ ಗ್ರಾಮಗಳನ್ನು ಸಹ ಬೋಗಾದಿ ಪಟ್ಟಣ ಪಂಚಾ ಯಿತಿಗೆ ಸೇರಿಸುವಂತೆ ಸರ್ಕಾರಕ್ಕೆ ಸಲಹೆ ನೀಡುವಂತೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬೀರಿ ಹುಂಡಿ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಮುಖಂಡರು ಹಾಜರಿದ್ದರು.

Translate »