ನಂದಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು

ನಂದಿ ಪ್ರಶಸ್ತಿಗೆ ಅರ್ಜಿ ಆಹ್ವಾನ

April 28, 2018

ಮೈಸೂರು, ಏ.27-ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ(ರಿ) ವತಿಯಿಂದ 2017-18ನೇ ಸಾಲಿನ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ ಮೈಸೂರು ಜಿಲ್ಲೆಯ 14,16,18,20ರ ವಯೋಮಿತಿ ಇರುವ ಬಾಲಕ, ಬಾಲಕಿಯರು ಹಾಗೂ ಪುರುಷ ಮತ್ತು ಮಹಿಳೆಯರಿಗೆ `ನಂದಿ ಪ್ರಶಸ್ತಿ- ಹಾಗೂ ಕ್ರೀಡಾ ಪ್ರೋತ್ಸಾಹಕರಿಗೆ ಕ್ರೀಡಾ ಪ್ರೋತ್ಸಾಹಕ ಪ್ರಶಸ್ತಿಯನ್ನು ನೀಡಲಾಗುವುದು. ನಂದಿ ಪ್ರಶಸ್ತಿಗೆ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರಬೇಕು ಅಥವಾ Sಛಿhooಟ ಉಚಿmes ಈeಜeಡಿಚಿಣioಟಿ oಜಿ Iಟಿಜiಚಿ (S.ಈ.I)ವತಿಯಿಂದ ಆಯೋಜಿಸಿರುವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕರ್ನಾಟಿಕ ರಾಜ್ಯವನ್ನು ಪ್ರತಿನಿಧಿಸಿರಬೇಕು ಅಥವಾ ಮೈಸೂರು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿರಬೇಕು. ಅಥವಾ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರಬೇಕು. ಉತ್ತಮ ಸಾಧನೆ ಮಾಡಿರುವಂತಹ ಕ್ರೀಡಾಪಟುವನ್ನು ಗುರುತಿಸಿ ಎಲ್ಲಾ ವಯೋಮಿತಿ ವಿಭಾಗಗಳಿಗೂ ನಂದಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.

ಕ್ರೀಡಾಪಟುಗಳು ತಮ್ಮ ಸಾಧನೆಗೈದಿರುವ ಕ್ರೀಡಾ ಪ್ರಶಸ್ತಿ ಪತ್ರದ ಪ್ರತಿಯನ್ನು ಕ್ರೀಡಾ ವೈಯಕ್ತಿಕ ವಿವರವನ್ನು ಹಾಗೂ ತಮ್ಮ ವೈಯಕ್ತಿಕ ವಿವರವನ್ನು ಏಪ್ರಿಲ್ 30 ರೊಳಗೆ ಸಲ್ಲಿಸಬಹುದು. ಮಾಹಿತಿಗಾಗಿ 9006403777, 9731808006 ಸಂಪರ್ಕಿಸಿ.

Translate »