ಮೈಸೂರಲ್ಲಿ ಸಂಚಾರ ಪೊಲೀಸರಿಂದ ರಕ್ತದಾನ ಶಿಬಿರ
ಮೈಸೂರು

ಮೈಸೂರಲ್ಲಿ ಸಂಚಾರ ಪೊಲೀಸರಿಂದ ರಕ್ತದಾನ ಶಿಬಿರ

April 28, 2018

ಮೈಸೂರು, ಏ. 27(ಆರ್‍ಕೆ)- 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಇಂದು ದೇವರಾಜ ಸಂಚಾರ ಠಾಣೆ ಪೊಲೀಸರಿಂದ ರಕ್ತ ದಾನ ಶಿಬಿರ ಏರ್ಪಡಿಸಲಾಗಿತ್ತು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಮಹಾನಿಂಗ ಎನ್. ನಂದಗಾವಿ ಅವರು ರಕ್ತದಾನ ಶಿಬಿರವನ್ನು ಉದ್ಘಾ ಟಿಸಿದರು. ಜೀವಧಾರಾ ನಿಧಿ ಸಂಸ್ಥೆಯ ಡಾ. ವಚನ ಮತ್ತು ಸಿಬ್ಬಂದಿ ಸಂಚಾರ ಪೊಲೀಸರು ಮತ್ತು ಸಾರ್ವಜನಿಕರಿಂದ ರಕ್ತ ಸಂಗ್ರಹ ಮಾಡಿದರು.

ದೇವರಾಜ ಸಂಚಾರ ಠಾಣೆ ಇನ್ಸ್ ಪೆಕ್ಟರ್ ಚಂದ್ರಶೇಖರ್ ಹಾಗೂ ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಅದೇ ರೀತಿ ಕೆ.ಆರ್. ಸಂಚಾರ ಠಾಣೆ ಪೊಲೀಸರು ಸಪ್ತಾಹದ ಅಂಗವಾಗಿ ಹೆಲ್ಮೆಟ್ ಧರಿಸಿ ಬೈಕ್ ರ್ಯಾಲಿ ನಡೆಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಫೋಟೋ: ಪೋಲ್ 400

Translate »