ಮೈಸೂರಲ್ಲಿ ಪೊಲೀಸರ ರೂಟ್ ಮಾರ್ಚ್, ಫುಟ್ ಪೆಟ್ರೋಲಿಂಗ್
ಮೈಸೂರು

ಮೈಸೂರಲ್ಲಿ ಪೊಲೀಸರ ರೂಟ್ ಮಾರ್ಚ್, ಫುಟ್ ಪೆಟ್ರೋಲಿಂಗ್

April 28, 2018

ಮೈಸೂರು: ನಿಮ್ಮೊಂದಿಗೆ ನಾವಿ ದ್ದೇವೆ. ನಿರ್ಭೀತಿಯಿಂದ ಮತ ಚಲಾಯಿಸಿ ಎಂಬ ಅಭಯ ಸೂಚಕವಾಗಿ ಪೊಲೀಸರು ಮೈಸೂರಲ್ಲಿ ರೂಟ್ ಮಾರ್ಚ್ ಮತ್ತು ಪೆಟ್ರೋಲಿಂಗ್ ನಡೆಸುತ್ತಿದ್ದಾರೆ.

ಏ.12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಮುಕ್ತ ಹಾಗೂ ನಿರ್ಭೀತಿಯಿಂದ ಮತದಾನ ಮಾಡಲು ಅಭಯ ನೀಡುವ ಸಲುವಾಗಿ ಹಾಗೂ ಸಮಾಜ ಘಾತುಕ ಶಕ್ತಿಗಳಿಗೆ ಎಚ್ಚರಿಕೆ ನೀಡಲು ಕೇಂದ್ರ ಅರೆ ಮೀಸಲು ಪಡೆ ಸಿಬ್ಬಂದಿ ಗುರುವಾರದಿಂದ ಮೈಸೂರಿನ ವಿವಿಧ ಬಡಾವಣೆ ಗಳಲ್ಲಿ ರೂಟ್ ಮಾರ್ಚ್ ನಡೆಸುತ್ತಿದೆ. ಗಡಿ ಭದ್ರತಾ ಪಡೆ (BSF) ಸಹಸ್ತ್ರ ಸೀಮಾ ಬಲ (SSB), ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ITBP) ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಕ್ಷಿಪ್ರ ಕಾರ್ಯ ಪಡೆ (RAF)ಯ ಶಸ್ತ್ರ ಸಜ್ಜಿತ ಸಿಬ್ಬಂದಿ ಗುರುವಾರ ಮಂಡಿ ಮೊಹಲ್ಲಾದ ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಸಿ ನಾಗರಿಕ ರಿಗೆ ಅಭಯ ನೀಡಿದರು. ಇಂದು ಎನ್‍ಆರ್ ಮೊಹಲ್ಲಾದಲ್ಲಿ ಕಾರ್ಯಾ ಚರಣೆ ಪಡೆ ಪೊಲೀಸರು, ನಾಳೆಯಿಂದ ಮೈಸೂರಿನ ಇತರ ಬಡಾವಣೆಗಳಲ್ಲೂ ಪಥ ಸಂಚಲನ ನಡೆಸಲಿದ್ದಾರೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.

ಫುಟ್ ಪೆಟ್ರೋಲಿಂಗ್: ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ಮಾಡಿದರೆ. ಬಡಾವಣೆಯ ಸಣ್ಣಪುಟ್ಟ ರಸ್ತೆ ಗಳು, ಗಲ್ಲಿಗಳ ಜನರಿಗೂ ನಿಮ್ಮ ರಕ್ಷಣೆಗೆ ನಾವಿದ್ದೇವೆ ಅಭಯ ಸಂದೇಶ ಸಾರಲು ಪೊಲೀಸರು ಫುಟ್ ಪೆಟ್ರೋ ಲಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಎನ್‍ಆರ್ ಮೊಹಲ್ಲಾ, ಮಂಡಿ ಮೊಹಲ್ಲಾ, ಶಾಂತಿ ನಗರ, ಗೌಸಿಯಾನಗರ, ಬೀಡಿ ಕಾಲೋನಿ, ಗಾಯತ್ರಿ ಪುರಂ ಸೇರಿದಂತೆ ವಿವಿಧ ಬಡಾವಣೆಗಳ ಸಣ್ಣ ರಸ್ತೆ ಗಳಲ್ಲೂ ಇಂದಿನಿಂದ 10 ದಿನಗಳ ಕಾಲ ಫುಟ್ ಪೆಟ್ರೋಲಿಂಗ್ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರಿಗೆ ವಿಶ್ವಾಸ ಮೂಡಿಸುವ ಜತೆಗೆ ಆಗಂತುಕರು, ಸಮಾಜಘಾತುಕರು, ಅಶಾಂತಿ ಸೃಷ್ಠಿಸುವವರಿಗೂ ನಿಮ್ಮ ಆಟ ನಡೆಯುವು ದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನೂ ಸಹ ರವಾನಿಸಲಾಗು ವುದು ಎಂದು ಡಾ.ವಿಷ್ಣುವರ್ಧನ್ ತಿಳಿಸಿದರು.

Translate »