ಅರಸೀಕೆರೆ: ಅಧಿಕಾರದ ಚುಕ್ಕಾಣಿ ಹಿಡಿಯಲಿದೆಯೇ ಕಾಂಗ್ರೆಸ್-ಬಿಜೆಪಿ ಮೈತ್ರಿ?
ಹಾಸನ

ಅರಸೀಕೆರೆ: ಅಧಿಕಾರದ ಚುಕ್ಕಾಣಿ ಹಿಡಿಯಲಿದೆಯೇ ಕಾಂಗ್ರೆಸ್-ಬಿಜೆಪಿ ಮೈತ್ರಿ?

September 3, 2018

ಅರಸೀಕೆರೆ: ಜೆಡಿಎಸ್ ಅತೃಪ್ತ ಟಿಕೆಟ್ ಆಕಾಂಕ್ಷಿಗಳು ಪಕ್ಷದ ವಿರುದ್ಧವೇ ಒಳಗೊಳಗೆ ಬಂಡಾಯ ಎದ್ದಿರುವ ಶಂಕೆ ಇದ್ದು, ಈ ಬಾರಿ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್, ಬಿಜೆಪಿ ಜೊತೆಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ ಎಂಬ ಊಹಾ ಪೋಹಗಳು ಚುನಾವಣೆ ನಂತರ ನಗರದಲ್ಲಿ ಹರಿದಾಡುತ್ತಿವೆ.

ಜೆಡಿಎಸ್‍ಗೆ ಹಿನ್ನಡೆ: ಒಂದು ವೇಳೆ ಊಹಾಪೋಹಗಳು ನಿಜವೇ ಆದಲ್ಲಿ ಬಹು ತೇಕ ಆಣೆ ಪ್ರಮಾಣ ಮಾಡಿ ಈ ಬಾರಿಯ ನಗರಸಭೆ ಚುನಾವಣೆಗೆ ನಿಮಗೆ ಟಿಕೆಟ್ ನೀಡುತ್ತೇವೆಂದು ಆಕಾಂಕ್ಷಿಗಳಿಗೆ ಆಸೆ ತೋರಿಸಿದ್ದ ಜೆಡಿಎಸ್‍ಗೆ ಹಿನ್ನಡೆಯಾಗು ವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿ ದ್ದಾರೆ ನಗರವಾಸಿಗಳು.

ಅತಂತ್ರ ಸ್ಥಿತಿ ನಿರ್ಮಾಣ: ಜೆಡಿಎಸ್‍ನಲ್ಲಿ ಇದ್ದೇವೆಂದು ಬಿಂಬಿಸಿಕೊಳ್ಳುತ್ತಾ ಅಭ್ಯರ್ಥಿ ಗಳೊಂದಿಗೆ ಗುರುತಿಸಿಕೊಂಡಿದ್ದ ಟಿಕೆಟ್ ವಂಚಿತರು, ಮತದಾನ ದಿನದ ಹಿಂದಿನ ರಾತ್ರಿ ಕಾಂಗ್ರೆಸ್ ಮತ್ತು ಬಿಜೆಪಿಯವ ರೊಂದಿಗೆ ಕೈ ಜೋಡಿಸುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ನಗರ ಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಮಾಡಲಾಗು ತ್ತುದೆ. ಎಂಬ ಮಾತುಗಳು ಪ್ರತಿಷ್ಠಿತ ವಾರ್ಡ್ ಗಳಲ್ಲಿ ಕೇಳಿ ಬರುತ್ತಿವೆ.

ಸರ್ವಾಧಿಕಾರ ಧೋರಣೆ: ಈ ಹಿಂದಿನ 5 ವರ್ಷಗಳ ನಗರಸಭೆ ಆಡಳಿತದಲ್ಲಿ ಸ್ಥಾಯಿ ಸಮಿತಿ ಕೇವಲ ಏಕ ವ್ಯಕ್ತಿಯ ಪಾಲಾಗು ತ್ತಿತ್ತು ವಿನಃ ಬೇರೊಬ್ಬ ಸದಸ್ಯರಿಗಾಗಲಿ ನೀಡದಿರುವುದು ಇಡೀ ಸದಸ್ಯರ ಬಗ್ಗೆ ನಂಬಿಕೆ ಇರಲಿಲ್ಲವೆ? ಎಂಬ ಚಿತ್ರಣ ಒಂದೆಡೆ ಯಾದರೆ, ತಾನೂ ಮತ್ತು ತನ್ನದೇ ಎಂಬ ಸರ್ವಾ ಧಿಕಾರ ಧೋರಣೆ ಸ್ಥಾಯಿ ಸಮಿತಿ ಯಲ್ಲಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಾರಿಯ ನಗರಸಭೆ ಚುನಾ ವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸಾಕಷ್ಟು ಕಡಿಮೆ ಅಂತರದಿಂದ ಅಥವಾ ಕಡಿಮೆ ಸಂಖ್ಯೆಯಲ್ಲಿ ಗೆದ್ದು ಬರಲಿದ್ದಾ ರೆಂಬುದನ್ನು ತಳ್ಳಿ ಹಾಕುವಂತಿಲ್ಲ ಎಂಬ ಮಾತುಗಳು ಇದೇ ಪಕ್ಷ ವಲಯದವ ರಿಂದಲೇ ವ್ಯಕ್ತವಾಗುತ್ತಿದೆ.

ಶಾಸಕರ ನಿಂದನೆ: ಸ್ಥಳಿಯ ಶಾಸಕ ಕೆ.ಎಂ.ಶಿವಲಿಂಗೇಗೌಡರು ಪಕ್ಷದ ಕಾರ್ಯಕರ್ತರನ್ನೇ ಹಲವು ಬಾರಿ ಜನರ ಸಮ್ಮುಖ ದಲ್ಲಿ ನಿಂದಿಸುವುದು, ಬೇರೊಬ್ಬರ ಮಾತುಗಳನ್ನು ನಂಬಿ ಹೀನಾಯ ವಾಗಿ ನಡೆಸಿ ಕೊಂಡಿ ರುವ ಪರಿಣಾಮ ನೋವುಂಡ ಅನೇಕರು ಈ ಚುನಾವಣೆ ಯಲ್ಲಿ ಪಕ್ಷದ ವಿರುದ್ಧವಾಗಿಯೇ ಕಾರ್ಯಾ ಚರಣೆ ನಡೆಸುತ್ತಾ, ಸದ್ದಿಲ್ಲದೆ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳೊಂದಿಗೆ ಕೈ ಜೊಡಿಸಿರುವು ದಾಗಿ ಗುಲ್ಲೆದ್ದಿದೆ.

ನಿಷ್ಠಾವಂತರ ಆಕ್ರೋಶ: ಅನೇಕ ಬಾರಿ ಇದೇ ನಗರಸಭೆ ಅಧ್ಯಕ್ಷ ಗಾದಿಯಿಂದ ವಂಚಿತರಾದ ಹಲವು ನಿಷ್ಠಾವಂತ ಜೆಡಿಎಸ್ ಸದಸ್ಯರು ಈ ಚುನಾವಣೆ ಮೂಲಕ ತಮ್ಮ ಎಲ್ಲಾ ಆಕ್ರೋಶ ತೀರಿಸಿ ಕೊಂಡಿರುವುದು ಕಂಡು ಬಂದಿದ್ದು, ಹಿಂದಿನ ಜೆಡಿಎಸ್ ನಗರಸಭೆ ಆಡಳಿತ ವೈಖರಿ ವಿರುದ್ಧ ಕಿಡಿಕಾರಿರುವುದರೊಂದಿಗೆ ಸೈಲೆಂಟ್ ಕಿಲ್ಲರ್‍ಗಳಂತೆ ಕೈ-ಕಮಲಗಳ ಪರ ಶಕ್ತಿ ಪ್ರದರ್ಶಿಸಿರುವುದು ಮಾತ್ರ ಈ ಬಾರಿ ಜೆಡಿಎಸ್‍ಗೆ ನುಂಗಲಾರದ ತುತ್ತಾಗಿರುವುದರಲ್ಲಿ ಎರಡು ಮಾತಿಲ್ಲ.

ಒಟ್ಟಿನಲ್ಲಿ ಯಾರು ಯಾವ ಆಡಳಿತ ಸಂದರ್ಭದಲ್ಲಿ ಏನು ತಪ್ಪು-ಒಪ್ಪುಗಳನ್ನು ಮಾಡಿದ್ದಾರೆ ಎಂಬುದನ್ನು ಆಯಾ ಪಕ್ಷಗಳ ಮುಖಂಡರು ಮುಂದಿನ ದಿನ ಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ಳು ವಂತೆ ಈ ಬಾರಿಯ ಅರಸೀಕೆರೆ ನಗರ ಸಭೆ ಚುನಾವಣೆ ಫಲಿತಾಂಶ ಹೊರ ಬೀಳಲಿದ್ದು, ನಾಳೆ(ಸೆ.3) ನಡೆಯುವ ಮತ ಎಣಿಕೆ ನಂತರ ಎಲ್ಲಾ ಅಭ್ಯರ್ಥಿಗಳ ಹಣೆಬರಹ ತಿಳಿಯಲಿದೆ.

Translate »