ಸಾಮಾಜಿಕ ನ್ಯಾಯದಡಿ ಅರಸೀಕೆರೆ ನಗರಸಭೆ ಮೀಸಲಾತಿ ಪಟ್ಟಿ
ಹಾಸನ

ಸಾಮಾಜಿಕ ನ್ಯಾಯದಡಿ ಅರಸೀಕೆರೆ ನಗರಸಭೆ ಮೀಸಲಾತಿ ಪಟ್ಟಿ

August 7, 2018

ಅರಸೀಕೆರೆ: ನಗರಸಭೆ ಚುನಾ ವಣೆಯಲ್ಲಿ ನಿಗದಿಯಾಗಿರುವ ಮೀಸ ಲಾತಿಯು ಸರ್ವ ಜನಾಂಗಕ್ಕೂ ಸಾಮಾಜಿಕ ನ್ಯಾಯ ದೊರಕುವ ನಿಟ್ಟಿನಲ್ಲಿ ಸಿದ್ ಪಡಿಸಲಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.

ನಗರದ ಮಾರುತಿನಗರದ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಮತ್ತು ಚುನಾಚಣಾ ಆಯೋಗ ಅಧಿಕೃತ ಮೀಸಲಾತಿ ಪಟ್ಟಿಯನ್ನು ಘೋಷಣೆ ಮಾಡಿದ ನಂತರ ನಗರದಲ್ಲಿ ಇಲ್ಲ ಸಲ್ಲದ ಚರ್ಚೆ ಗಳು ನಡೆಯುತ್ತಿವೆ. ಈ ಚರ್ಚೆಗಳು ಅನಾವಶ್ಯಕವಾಗಿದ್ದು, ಚುನಾವಣೆ ಕಡೆ ಮಾತ್ರ ಆಕಾಂಕ್ಷಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಯೋಚಿಸಬೇಕು. ಪುರಸಭೆಯಾಗಿದ್ದ ಇಲ್ಲಿನ ಆಡಳಿತವನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಿ ರುವ ಹೆಗ್ಗಳಿಕೆ ನಮ್ಮದಾಗಿದ್ದು, ಮಿಸಲಾತಿ ಬಗ್ಗೆ ಯಾವುದೇ ಚರ್ಚೆ ಮತ್ತು ಗೊಂದಲ ಬೇಡ ಎಂದು ಸಲಹೆ ನೀಡಿದರು.

ನಗರದಲ್ಲಿ ಈಗಾಗಲೇ ಘೋಷಣೆ ಯಾಗಿರುವ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ 3 ಸ್ಥಾನಗಳು, ಪರಿಶಿಷ್ಟ ಜಾತಿ ಮಹಿಳಾ ಸ್ಥಾನಕ್ಕೆ 2, ಪರಿಶಿಷ್ಟ ಪಂಗಡ-1, ಹಿಂದುಳಿದ ವರ್ಗ(ಎ)-4, ಹಿಂದು ಳಿದ ವರ್ಗ(ಎ) ಮಹಿಳೆ-3, ಹಿಂದುಳಿದ ವರ್ಗ(ಬಿ), ಹಿಂದುಳಿದ ವರ್ಗ(ಬಿ) ಮಹಿಳೆ ತಲಾ 1 ಸ್ಥಾನ, ಸಾಮಾನ್ಯ ವರ್ಗ ಹಾಗೂ ಸಾಮಾನ್ಯ ವರ್ಗ ಮಹಿಳೆಗೆ ತಲಾ 8 ಸ್ಥಾನ ಘೋಷಣೆಯಾಗಿದೆ. ನಗರದ ಎಲ್ಲಾ ವಾರ್ಡ್‍ಗಳಿಂದ `ಬಿ’ ಫಾರಂಗಾಗಿ ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳು ಒತ್ತಡ ಹೇರುತ್ತಿದ್ದಾರೆ. ಆದರೆ ಆಯಾ ವಾರ್ಡ್ಗಳ ಕಾರ್ಯಕರ್ತರು, ಮತದಾರರು ಮತ್ತು ಅಭಿಮಾನಿಗಳ ಅಭಿಪ್ರಾಯವನ್ನು ಪಡೆಯುವುದರ ಮೂಲಕ ಪಕ್ಷದ ಸಮಿತಿ ಯಲ್ಲಿ ಒಮ್ಮತದಿಂದ ಅರ್ಹ ಅಭ್ಯರ್ಥಿಗೆ `ಬಿ’ ಫಾರಂ ನೀಡಲಾಗುವುದು. ಈ ಜವಾಬ್ದಾರಿಯನ್ನು ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಬಿಳಿ ಚೌಡಯ್ಯ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಬಾಬುಗೆ ನೀಡಲಾಗಿದೆ ಎಂದು ಹೇಳಿದರು.

ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಿಳಿಚೌಡಯ್ಯ ಮಾತನಾಡಿ, ಕ್ಷೇತ್ರದಲ್ಲಿ ಹತ್ತು ವರ್ಷಗಳಲ್ಲಿ ಶಾಸಕ ಕೆ.ಎಂ.ಶಿವ ಲಿಂಗೇಗೌಡರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮತದಾರರು ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಅದರಂತೆ ನಗರದ ಲ್ಲಿಯೂ ಕೂಡ ಅನೇಕ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಕಾರಣ ಈ ಬಾರಿಯಾ ನಗರಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಲಭಿಸುವ ವಿಶ್ವಾಸವಿದೆ ಎಂದರು. ನಗರ ಸಭೆ ಅಧ್ಯಕ್ಷ ಸಮೀವುಲ್ಲಾ ಮಾತನಾಡಿದರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಬಾಬು, ನಗರಸಭೆ ಉಪಾಧ್ಯಕ್ಷ ಪಾರ್ಥಸಾರಥಿ ಇನ್ನಿತರದ್ದರು.

Translate »