ಇಂದು ಮೈಸೂರಿಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ
ಮೈಸೂರು

ಇಂದು ಮೈಸೂರಿಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ

August 24, 2018

ಮೈಸೂರು: ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯರೂ ಆದ ಅಸಾದುದ್ದೀನ್ ಓವೈಸಿ ಆ.24(ನಾಳೆ) ಮೈಸೂರಿಗೆ ಆಗಮಿಸಲಿದ್ದಾರೆ. ಮೈಸೂರು ಮಹಾನಗರ ಪಾಲಿಕೆಗೆ ಆ.31ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಅಸಾದುದ್ದೀನ್ ಓವೈಸಿ ಅವರು ಮೈಸೂರಿಗೆ ನಾಳೆ ಆಗಮಿಸುತ್ತಿದ್ದು, ಬನ್ನಿಮಂಟಪ ವಾರ್ಡ್ ನಂ.8ರಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದು, ಬೆಂಗಳೂರು-ಮೈಸೂರು ರಸ್ತೆಯ ಟಿಪ್ಪು ಮಸೀದಿ ಹತ್ತಿರ ಬನ್ನಿಮಂಟಪದ ಹುಡ್ಕೊ ಮುಖ್ಯ ರಸ್ತೆಯಲ್ಲಿ ರಾತ್ರಿ 7 ಗಂಟೆ ನಂತರ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

Translate »