ಮೊದಲ ಹಂತದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಡಿ.8ರಿಂದ ಪ್ರಕ್ರಿಯೆ ಪ್ರಾರಂಭ
ಮೈಸೂರು

ಮೊದಲ ಹಂತದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಡಿ.8ರಿಂದ ಪ್ರಕ್ರಿಯೆ ಪ್ರಾರಂಭ

December 5, 2018

ಬೆಂಗಳೂರು:  ಮೊದಲ ಹಂತ ದಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ 50 ಸಾವಿರ ರೂಪಾಯಿವರೆಗಿನ ಕೃಷಿ ಸಾಲ ಮನ್ನಾ ಮಾಡುವುದಾಗಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ಸರ್ಕಾ ರಕ್ಕೆ ಆರ್ಥಿಕ ಕೊರತೆ ಇಲ್ಲ. ಸಾಲ ಮನ್ನಾಕ್ಕಾಗಿ 6,500 ಕೋಟಿ ರೂ. ಮೀಸಲಿಟ್ಟಿ ದ್ದೇವೆ. ರಾಷ್ಟ್ರೀಯ ಬ್ಯಾಂಕುಗಳಲ್ಲಿನ 17 ಲಕ್ಷ ರೈತರ 50 ಸಾವಿರದವರೆಗಿನ ಸಾಲ ಮನ್ನಾ ಮೊದಲ ಹಂತದಲ್ಲಿ ಆಗಲಿದೆ ಎಂದರು. ಡಿಸೆಂಬರ್ 8 ರಿಂದ ಸಾಲ ಮನ್ನಾ ಪ್ರಕ್ರಿಯೆ ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಪ್ರಾರಂಭವಾಗ ಲಿದೆ. ಸಹಕಾರಿ ಬ್ಯಾಂಕ್‍ಗಳಿಗೆ ನ. 30 ರವರೆಗಿನ 1,300 ಕೋಟಿ ರೂ. ಹಣ ಬಿಡುಗಡೆ ಆಗಿದೆ. ಡಿಸೆಂಬರ್‍ನಲ್ಲಿ ಇನ್ನೂ 1,200 ಕೋಟಿ ರೂ. ಬಿಡುಗಡೆ ಮಾಡಲು ತಯಾರಾಗಿದ್ದೇವೆ. ಸರ್ಕಾರಕ್ಕೆ 2 ಲಕ್ಷದ 20 ಸಾವಿರ ರೈತರು ಮಾಹಿತಿ ನೀಡಿದ್ದಾರೆ.

ನಾವು ರೈತರಿಗೆ ಕಮಿಟ್ ಮಾಡಿ ಕೊಂಡಿದ್ದೇವೆ. ಕೇಂದ್ರ ಕೊಡಲಿ, ಬಿಡಲಿ ನಾವು ಸಾಲಮನ್ನಾ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು. ಮೊದಲ ಹಂತವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 17 ಲಕ್ಷರೈತರ 50 ಸಾವಿರದವರೆಗಿನ ಸಾಲ ಮನ್ನಾಗೆ ಈಗಾಗಲೇ ಅಧಿಕಾರಿಗಳಿಗೂ ಆದೇಶಿಸಿ ದ್ದೇನೆ. ಜನವರಿಯಲ್ಲಿ ಮೊದಲ ಹಂತ ದಲ್ಲಿ 50 ಸಾವಿರ ಸಾಲಮನ್ನಾ ಆಗಲಿದೆ ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ: ಇದೇ ವೇಳೆ ರಾಜ್ಯ ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ರಾಷ್ಟ್ರೀಕೃತ ಬ್ಯಾಂಕ್‍ಗಳು ಕೇಂದ್ರದ ಅಡಿಯಲ್ಲಿ ಬರುತ್ತವೆ. ಬಿಜೆಪಿಯವರು ಸಾಲಮನ್ನಾಕ್ಕೆ ನಾವು ಇನ್ನು ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ, ಯಡಿಯೂರಪ್ಪನವರು ಕೇಂದ್ರದ ಬಳಿ ಕೇಳಬೇಕು. ಮೊದಲು ಅಲ್ಲಿ ಕೇಳುವುದನ್ನು ಬಿಟ್ಟು ನನ್ನ ಬಳಿ ಕೇಳುತ್ತಿದ್ದಾರೆ. ಅಧಿವೇಶನದಲ್ಲಿ ಈ ಎಲ್ಲ ವಿಚಾರ ಚರ್ಚಿಸಲು ಸಿದ್ಧವಾಗಿದ್ದೇನೆ ಎಂದರು.
ಕಿವಿಗೊಡದ ಕೇಂದ್ರ: ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲ ಮನ್ನಾದಲ್ಲಿ ಶೇ. 50ರಷ್ಟನ್ನು ಕೇಂದ್ರ ನೀಡಬೇಕೆಂದು ಕೇಳಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಎರಡು ಭಾರಿ ಭೇಟಿ ನೀಡಿದಾಗಲೂ ಶೇ. 50ರಷ್ಟು ಸಾಲದ ಹೊರೆ ಹೊರುವಂತೆ ಮನವಿ ಮಾಡಿದ್ದೇವೆ. ಹೀಗಿದ್ದರೂ ನಾವು ಕೇಂದ್ರಕ್ಕೆ ಅಂಟಿಕೊಂಡು ನಿಂತಿಲ್ಲ. ಬ್ಯಾಂಕುಗಳ ಜತೆ ನಿರಂತರ ಸಭೆ ನಡೆಯುತ್ತಿದೆ. ಸರ್ಕಾರ ಮುಖ್ಯಕಾರ್ಯದರ್ಶಿಗಳು ಸಭೆ ನಡೆಸುತ್ತಲೇ ಇದ್ದಾರೆ ಎಂದು ಸಿಎಂ ಹೇಳಿದರು.

Translate »