ಮಲ್ಲಿಪಟ್ಟಣದಲ್ಲಿ ನಂದಿನಿ ಕ್ಷೀರ ಕೇಂದ್ರ ಉದ್ಘಾಟಿಸಿದ ಎಟಿಆರ್
ಹಾಸನ

ಮಲ್ಲಿಪಟ್ಟಣದಲ್ಲಿ ನಂದಿನಿ ಕ್ಷೀರ ಕೇಂದ್ರ ಉದ್ಘಾಟಿಸಿದ ಎಟಿಆರ್

July 3, 2019

ರಾಮನಾಥಪುರ, ಜು.2- ಅರಕಲಗೂಡು ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶ ಗಳಲ್ಲಿ ನಂದಿನ ಹಾಲಿನ ಕ್ಷೀರ ಕೇಂದ್ರವನ್ನು ತೆರೆದಿದ್ದೇವೆ ಎಂದು ಹಾಸನ ಹಾಲು ಒಕ್ಕೂಟದ ಎಂಡಿ ಗೋಪಾಲಯ್ಯ ತಿಳಿಸಿದರು.

ಮಲ್ಲಿಪಟ್ಟಣ ವೃತ್ತದಲ್ಲಿ ಸೋಮವಾರ ನಂದಿನಿ ಕ್ಷೀರ ಕೇಂದ್ರ ಉದ್ಘಾಟನೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಈಗಾಗಲೇ ನಂದಿನಿ ಹಾಲು, ಮೊಸರು ಮತ್ತಿತರ ಡೈರಿ ಉತ್ಪನ್ನಗಳನ್ನು ಗ್ರಾಮೀಣ ಜನರಿಗೆ ತಲಪುವಂತೆ ಮಾಡ ಲಾಗಿದೆ. ಕೊಡಗಿನ ಕೂಡಿಗೆ ಡೈರಿಯಿಂದ ಬೆಳಿಗ್ಗೆ ಹಾಗೂ ಸಂಜೆ ನಂದಿನಿ ವಾಹನ ಗಳು ನಂದಿನಿ ಕ್ಷೀರ ಕೇಂದ್ರಕ್ಕೆ ಉತ್ಪನ್ನ ಗಳನ್ನು ಸರಬರಾಜು ಮಾಡುತ್ತಿವೆ ಎಂದರು.

ನಂದಿನಿ ಕ್ಷೀರ ಕೇಂದ್ರ ಉದ್ಘಾಟಿಸಿದ ಶಾಸಕ ಎ.ಟಿ.ರಾಮಸ್ವಾಮಿ, ಗ್ರಾಮೀಣ ಜನರು ಕೃಷಿಗೆ ಹೆಚ್ಚಿನ ಒತ್ತು ನೀಡುವ ಜತೆಗೇ ಪಶುಸಂಗೋಪನೆಯತ್ತಲೂ ಗಮನ ಹರಿಸಬೇಕು. ಬರವಿದ್ದರೂ ರೈತ ಮಹಿಳೆಯರು ಹಸು ಸಾಕುತ್ತಿದ್ದಾರೆ. ಸ್ತ್ರೀಶಕ್ತಿ ಸಂಘಗಳ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಆ ಮೂಲಕ ಅರ್ಥಿಕ ವಾಗಿ ಸದೃಢರಾಗಿದ್ದಾರೆ ಎಂದರು.

ಹಾಸನ ಹಾಲು ಉತ್ಪಾದಕರ ಸಂಘ ಗಳ ಒಕ್ಕೂಟದ ಮಾರುಕಟ್ಟೆ ವ್ಯವಸ್ಥಾಪಕ ನಿರಂಜನ್, ಕೂಡಿಗೆ ಡೈರಿ ಉಪ ವ್ಯವಸ್ಥಾ ಪಕ ನಂದೀಶ್, ಸಹಾಯಕ ವ್ಯವಸ್ಥಾಪಕ ಮಲ್ಲೇಶ್, ಮಾರುಕಟ್ಟೆ ವಿಸಾûರಣಾಧಿಕಾರಿ ಕುಮಾರ್ ಮತ್ತಿತರರಿದ್ದರು.

Translate »