ಪರಿಸರ ನಾಶಗೊಳಿಸಿದ್ದಕ್ಕೆ ಪ್ರಾಯಶ್ಚಿತ್ತ ಅಗತ್ಯ
ಹಾಸನ

ಪರಿಸರ ನಾಶಗೊಳಿಸಿದ್ದಕ್ಕೆ ಪ್ರಾಯಶ್ಚಿತ್ತ ಅಗತ್ಯ

July 3, 2019

ಅರಸೀಕೆರೆಯಲ್ಲಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಶಾಸಕ ಕೆಎಂಶಿ
ಅರಸೀಕೆರೆ,ಜು.2- ಪರಿಸರಕ್ಕೆ ಪೂರಕ ವಾದ ಸಸ್ಯಗಳನ್ನು ನೆಡುವ ಮೂಲಕ ಮುಂದಿನ ತಲೆಮಾರಿಗೆ ಉತ್ತಮ ಪರಿಸರ ವನ್ನು ಕೊಡುಗೆಯಾಗಿ ನೀಡಬೇಕಿದೆ. ಈವರೆಗೆ ಪರಿಸರ ನಾಶ ಮಾಡಿರುವ ಎಲ್ಲರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾ ಗಿದೆ ಎಂದು ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ಮಾರುತಿನಗರ ಬಡಾವಣೆ ಯಲ್ಲಿ ನಗರಸಭೆ ಸದಸ್ಯೆ ಕೆ.ಪಿ.ಸುಜಾತ ನೇತೃತ್ವದಲ್ಲಿ ವಿಷ್ಣು ಸೇನಾ ಸಮಿತಿ, ಭುವಿ ಸೇವಾ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಜಂಟಿಯಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕು ಬರ ಪೀಡಿತವಾಗಿದೆ. ನಾವೆಲ್ಲಾ ಮಾಡಿದ ತಪ್ಪುಗಳಿಂದ ಪರಿಸರ ನಾಶ ವಾಗಿ ಇಂದು ಮಳೆಯೇ ಇಲ್ಲದಂತಾ ಗಿದೆ. ಅರಣ್ಯವೂ ಇಲ್ಲವಾಗಿರುವುದೇ ಇದಕ್ಕೆ ಕಾರಣ ಎಂದು ವಿಷಾದಿಸಿದರು.

ಇಂತಹ ಸಮಯದಲ್ಲಿ ನಗರದ ವಿವಿಧ ಬಡಾವಣೆಗಳ ಜನ ಸ್ವಯಂಪ್ರೇರಿತವಾಗಿ ಸಸಿ ನೆಡುತ್ತಿರುವುದು ಸಮಾಧಾನ ತಂದಿದೆ. ಆ ಸಸಿಗಳನ್ನು ಒಂದು ಹಂತದವರೆಗೂ ಸಲುಹಿ ಉಳಿಸಿದರೆ ಸಸಿ ನೆಟ್ಟಿದ್ದಕ್ಕೂ ಸಾರ್ಥಕ. ನೆಪ ಮಾತ್ರಕ್ಕೆ ಸಸಿ ನೆಡದೇ ನೀರು ಮತ್ತು ರಕ್ಷಣೆ ನೀಡಬೇಕು. ನಾನು ವಾಸಿಸುವ ಬಡಾ ವಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಆಂದೋಲನವಾಗಲಿ ಎಂದು ಆಶಿಸಿದರು.

ನಗರಸಭೆ ಆಯುಕ್ತ ಪರಮೇಶ್ವರಪ್ಪ ಮಾತನಾಡಿ, ನಗರ ದಿನೇ ದಿನೇ ಬೆಳೆ ಯುತ್ತಿದೆ. ಅದಕ್ಕೆ ಪೂರಕವಾಗಿ ಆರೋಗ್ಯ ಪೂರ್ಣ ಪರಿಸರÀ ಅಗತ್ಯವಿದೆ. ಎಲ್ಲ ಹಂತ ಗಳಲ್ಲೂ ನಗರಸಭೆಯೇ ಕೆಲಸ ನಿರ್ವ ಹಿಸಲು ಸಾಧ್ಯವಾಗದು, ಜನರ ಸಹ ಕಾರವೂ ಅಗತ್ಯ ಎಂದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಅನಂತ ಕುಮಾರ್, ಕರವೇ ತಾ.ಘಟಕದ ಅಧ್ಯಕ್ಷ ಹೇಮಂತ್ ಕುಮಾರ್ ಮಾತ ನಾಡಿದರು. ಕರವೇ ನಗರಾಧ್ಯಕ್ಷ ಕಿರಣ್ ಕುಮಾರ್, ಭುವಿ ಸೇವಾ ಸಂಘದ ಅಧ್ಯಕ್ಷ ನರೇಂದ್ರ, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ನಯಾಜ್ ಆಹಮ್ಮದ್, ಮಾರುತಿನಗರ ಬಡಾವಣೆ ಮಸೀದಿ ಸಮಿತಿ ಅಧ್ಯಕ್ಷ ಮೋಹಿನ್ ಖಾನ್, ಕಾರ್ಯದರ್ಶಿ ರಿಜ್ವಾನ್, ಸಂತೋಷ್, ಮುಖಂಡರಾದ ರಮೆಶ್, ಬೀರೇಗೌಡ, ರಘು, ಸಂತೋಷ್, ರವಿಶಂಕರ್ ಮತ್ತಿತರರಿದ್ದರು.

Translate »