ಜು.6ರಿಂದ ಬಿಜೆಪಿ ಸದಸ್ಯತ್ವ ಅಭಿಯಾನ
ಹಾಸನ

ಜು.6ರಿಂದ ಬಿಜೆಪಿ ಸದಸ್ಯತ್ವ ಅಭಿಯಾನ

July 3, 2019

ಅರಸೀಕೆರೆಯಲ್ಲಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಅರಸೀಕೆರೆ, ಜು.2- ಕಾಂಗ್ರೆಸ್ ಎಂಬುದು ಸ್ವಾತಂತ್ರ್ಯ ಪೂರ್ವದಲ್ಲಿ ಒಂದು ವೇದಿಕೆಯಾಗಿತ್ತೇ ಹೊರತು ಅದೇನೂ ಪಕ್ಷವಾಗಿರಲಿಲ್ಲ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ದೇಶವನ್ನು ಕಾಂಗ್ರೆಸ್ ಮುಕ್ತವನ್ನಾಗಿಸಲಿದೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗಾಗಿ ಜು.6ರಿಂದ ಸದಸ್ಯತ್ವ ಅಭಿಯಾನವನ್ನು ಜಿಲ್ಲೆಯಾದ್ಯಂತ ಹಮ್ಮಿ ಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಅರಸೀಕೆರೆ ಗ್ರಾಮಾಂತರ ಮಂಡಲ ವ್ಯಾಪ್ತಿಯ ಸದಸ್ಯತ್ವ ಅಭಿಮಾನದ ಪೂರ್ವ ಭಾವಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಒಂದು ಕಾಲದಲ್ಲಿ 416 ಲೋಕ ಸಭಾ ಸದಸ್ಯರನ್ನು ಹೊಂದಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಇಂದು ಅಧಿಕೃತ ವಿರೋಧ ಪಕ್ಷವಾಗಲೂ ಅರ್ಹತೆ ಇಲ್ಲದಂತೆ ಹೀನಾಯ ಸೋಲು ಕಂಡಿದೆ ಎಂದರು.

ಕಾಂಗ್ರೆಸ್ ಅಲ್ಪಸÀಂಖ್ಯಾತರ ತುಷ್ಟೀ ಕರಣ ಮಾಡುತ್ತಲೇ ಬಂದಿತು. ಈಗ ಅದೇ ಅಲ್ಪಸಂಖ್ಯಾತರು ಬಿಜೆಪಿಗೆ ಮತ ಹಾಕಿ ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಹೆಚ್ಚಿಸಿದ್ದಾರೆ. ಈ ಬಾರಿಯ ಲೋಕ ಸಭೆ ಚುನಾವಣೆಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ 75 ಸಾವಿರ ಮತಗಳು ಬಿಜೆಪಿಗೆ ಬಂದಿವೆ. 5.30 ಲಕ್ಷ ಮತಗಳನ್ನು ಹಾಸನ ಲೋಕಸಭಾ ಕ್ಷೇತ್ರದ ಮತದಾರರು ಬಿಜೆಪಿಗೆ ನೀಡಿದ್ದಾರೆ ಎಂದು ವಿವರಿಸಿದರು.

ಬಿಜೆಪಿ ವ್ಯಕ್ತಿ ಆಧಾರಿತವಲ್ಲ. ತತ್ವ, ಸಿದ್ಧಾಂತ ಸೇರಿದಂತೆ ನಿಷ್ಠಾವಂತ ಕಾರ್ಯ ಕರ್ತರ ಪಡೆಯೇ ಅದರ ಬಲವಾಗಿದೆ. ದೇಶದಲ್ಲಿ ಪಕ್ಷ ಅಧಿಕಾರ ಹಿಡಿದಿರುವುದಕ್ಕೆ ಮೂಲ ಕಾರಣ ಅನೇಕರ ತ್ಯಾಗ ಮತ್ತು ಬಲಿದಾನ. ಅವನ್ನೆಲ್ಲಾ ನಾವು ನೆನೆಯ ಬೇಕಿದೆ. ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಕಾಶ್ ಮುಖರ್ಜಿ ಅವರ ನೆನಪಿನಲ್ಲಿ ಪಕ್ಷ ಪ್ರತಿ ವರ್ಷ ಜು.6ರಂದು ಸದಸ್ಯತ್ವ ನೊಂದಣಿ ಅಭಿಯಾನ ನಡೆಸಿಕೊಂಡು ಬಂದಿದೆ. ಈ ಬಾರಿಯ ಸದಸ್ಯತ್ವ ಅಭಿ ಯಾನ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸುವುದಾಗಿದೆ. ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಬಂದÀ ಮತಗಳ ಅಧಾರದ ಮೇಲೆ ಹಾಗೂ ಯಾವ ಬೂತ್‍ನಲ್ಲಿ ಸದಸ್ಯತ್ವ ಕಡಿಮೆ ಇದೆಯೋ ಅಲ್ಲಿ ಒಟ್ಟು ಮತದಾರರ ಪೈಕಿ ಕನಿಷ್ಟ ಶೇ.25ರಷ್ಟು ಸದಸ್ಯರನ್ನು ಮಾಡಲು ಕಾರ್ಯಕರ್ತರು ಶ್ರಮಿಸ ಬೇಕಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಮಾಜಿ ಶಾಸಕ ಎ.ಎಸ್.ಬಸವರಾಜು ಮಾತನಾಡಿ, ಅರಸೀಕೆರೆ, ಬೇಲೂರು, ಸಕಲೇಶಪುರ ಕ್ಷೇತ್ರಗಳು ಜನಸಂಘ ಸ್ಥಾಪಿತವಾದಾಗಿನಿಂದಲೂ ಅತ್ಯುತ್ತಮ ಬೆಂಬಲ ನೀಡುತ್ತಾ ಬಂದಿವೆ. ಜಿಲ್ಲೆಯಲ್ಲಿ ಸ್ವಯಪ್ರೇರಿತ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಈ ಪಡೆಯನ್ನು ಸಂಘಟನೆಗೆ ಪೂರಕವಾಗಿ ಬಳಸಿ ಕೊಳ್ಳಬೇಕು ಎಂದರು.

ಗ್ರಾಮಾಂತರ ಮಂಡಲ ಅಧ್ಯಕ್ಷ ಬಸವ ರಾಜು ಮಾತನಾಡಿದರು. ಜಿಲ್ಲಾ ವಕ್ತಾರ ಪ್ರಸಾದ್, ನಗರಾಧ್ಯಕ್ಷ ಮನೋಜ್ ಕುಮಾರ್, ನಗರಸಭೆ ಸದಸ್ಯ ಗಿರೀಶ್, ಮುಖಂಡರಾದ ಮರಿಸ್ವಾಮಿ, ಗಂಗಾ ಧರ್, ಶಿವು, ರಮೇಶ್, ಶಿವನ್ ರಾಜ್, ಯೋಗೀಶ್, ದಿನೇಶ್, ಅವಿನಾಶ್, ರವಿ, ಅರುಣ್, ಚಂದ್ರಶೇಖರ್, ಗಾಯಿತ್ರಿ, ಶಿಲ್ಪ, ದೀಪಾ, ಉಮಾಕುಮಾರಿ ಸಭೆಯಲ್ಲಿದ್ದರು.

Translate »