ರೋಗಿ ಕಡೆಯವರಿಂದ ‘ಡಿ’ ಗ್ರೂಪ್ ನೌಕರನ ಮೇಲೆ ಹಲ್ಲೆ ಆಸ್ಪತ್ರೆ ಸಿಬ್ಬಂದಿಯಿಂದ ಪ್ರತಿಭಟನೆ
ಹಾಸನ

ರೋಗಿ ಕಡೆಯವರಿಂದ ‘ಡಿ’ ಗ್ರೂಪ್ ನೌಕರನ ಮೇಲೆ ಹಲ್ಲೆ ಆಸ್ಪತ್ರೆ ಸಿಬ್ಬಂದಿಯಿಂದ ಪ್ರತಿಭಟನೆ

March 12, 2019

ಬೇಲೂರು: ಸರ್ಕಾರಿ ಆಸ್ಪತ್ರೆ ಯಲ್ಲಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ನೌಕರರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಅಲ್ಲಿನ ನೌಕರ ವರ್ಗದವರು ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಬೇಲೂರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ‘ಡಿ’ ಗ್ರೂಪ್ ನೌಕರರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಇಂದು ಬೆಳಿಗ್ಗೆ ಸರ್ಕಾರಿ ಆಸ್ಪತ್ರೆ ಮುಂಭಾಗ ವೈದ್ಯಾಧಿ ಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ‘ಡಿ’ ಗ್ರೂಪ್ ನೌಕರ ಪ್ರದೀಪ್ ಮಾತನಾಡಿ, ಪ್ರತಿನಿತ್ಯ ನಾವು ಮಾಡುವ ವೃತ್ತಿಯನ್ನು ಸಾರ್ವಜನಿಕರ ಸೇವೆ ಎಂದು ಬಯಸಿ ರಾತ್ರಿ ವೇಳೆ ಯಾವುದೇ ರೋಗಿಗಳು ಬಂದರೂ ನಮ್ಮ ಕರ್ತವ್ಯ ನಿಭಾಯಿಸುತ್ತೇವೆ. ಇದನ್ನು ಅರಿತುಕೊಳ್ಳದೆ ಕೆಲವು ಪುಂಡರು ಮದ್ಯಪಾನ ಮಾಡಿ ಕೊಂಡು ಬಂದು ನಮ್ಮ ಮೇಲೆ ಹಾಗೂ ಇಲ್ಲಿನ ವೈದ್ಯಾಧಿಕಾರಿಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೆ, ಹಲ್ಲೆ ಮಾಡಲು ಮುಂದಾಗುತ್ತಾರೆ. ಭಾನುವಾರ ರಾತ್ರಿ ಕುಮಾರ್ ಮತ್ತು ಅವರ ಸ್ನೇಹಿತರು ಮದ್ಯಪಾನ ಮಾಡಿಕೊಂಡು ಬಂದು ನಮ್ಮ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಕರ್ತವ್ಯ ನಿರ್ವ ಹಿಸುತ್ತಿದ್ದ ‘ಡಿ’ ಗ್ರೂಪ್ ನೌಕರ ರಘು ಮೇಲೆ ಹಲ್ಲೆ ನಡೆಸಿರುತ್ತಾರೆ.

ಈ ರೀತಿ ಕೆಲವು ದಿನಗಳ ಹಿಂದೆ ಇಲ್ಲಿನ ಕೆಲವು ಸಂಘಟನೆಗಳ ಮುಖಂಡರು ಯಾವುದೊ ರೋಗಿಯ ಪರವಾಗಿ ವಕಾಲತ್ತು ವಹಿಸಿ, ಇಲ್ಲಿನ ಸಿಬ್ಬಂದಿ ಬಸವರಾಜ್ ಎಂಬ ವ್ಯಕ್ತಿಯ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ. ಅಲ್ಲದೆ ವೈದ್ಯಾಧಿಕಾರಿಗಳಿಗೆ ಸಂಘಟನೆಯ ಹೆಸರು ಹೇಳಿಕೊಂಡು ರಾತ್ರಿ ವೇಳೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಈ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಎರಡು ವರ್ಷಗಳಿಂದ ಕೆಲವು ಪುಂಡರು ಗಳಿಂದ 5 ಬಾರಿ ಭರಮಗೌಡ, ಸಂದೀಪ್, ನಾಗಣ್ಣ ಎಂಬ ಸಿಬ್ಬಂದಿಗಳ ಮೇಲೆ ನಾಲ್ಕೈದು ಬಾರಿ ಹಲ್ಲೆ ನಡೆದಿರುತ್ತದೆ. ಆದ್ದರಿಂದ ನಾವುಗಳು ಇಂದು ಬೇಸತ್ತು ಪ್ರತಿಭಟನೆಯ ಹಾದಿ ಹಿಡಿಯಬೇಕಾಗಿದೆ.

ಈ ಕೂಡಲೇ ರಾತ್ರಿ ಹಲ್ಲೆ ನಡೆಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿ ಸುವ ಮೂಲಕ ನಮಗೆ ನ್ಯಾಯ ಒದಗಿಸ ಬೇಕಾಗಿದೆ ಎಂದರು. ನಂತರ ವೈದ್ಯಾಧಿಕಾರಿ ರಾಘವೇಂದ್ರ ಮಾತನಾಡಿ, ನಿನ್ನೆ ರಾತ್ರಿ ನಾಲ್ಕರಿಂದ ಐದು ಜನ ಮದ್ಯಪಾನ ಮಾಡಿ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಪರಿಜ್ಞಾನವೂ ಇಲ್ಲದಂತೆ ನಮ್ಮ ಮೇಲೆ ವರ್ತಿಸುತ್ತಿದ್ದರು. ಆದರೂ ಸಹಿಸಿಕೊಂಡು ಅವರ ಕಡೆ ರೋಗಿಗೆ ಬೇಕಾದ ಚಿಕಿತ್ಸೆ ನೀಡಿ ನಾನು ಬೇರೆ ರೋಗಿ ಗಳನ್ನು ನೋಡಲು ವಾರ್ಡಿಗೆ ಹೋಗಿದ್ದೆ. ಈ ಸಂದರ್ಭ ನಮ್ಮ ‘ಡಿ’ ಗ್ರೂಪ್ ನೌಕರ ರಘು ಮೇಲೆ ಅವರ ಸಂಬಂಧಿಕರು ಹಲ್ಲೆ ಮಾಡಿದ್ದಲ್ಲದೆ, ನನಗೆ ಕರ್ತವ್ಯ ಮಾಡಲು ಅಡ್ಡಿಪಡಿಸಿದರು. ಈ ರೀತಿ ಪ್ರಕರಣಗಳು ನಮ್ಮ ಮೇಲೆ ಹಲವು ಬಾರಿ ನಡೆದಿದೆ. ತೊಂದರೆ ಏನೆಂದರೆ ಬೆಳಿಗ್ಗೆ 9 ರಿಂದ 4 ಗಂಟೆವರೆಗೂ ಸಾಧಾರಣ ಕೆಮ್ಮು, ಶೀತ ದಿಂದ ಬರುವ ರೋಗಿಗಳನ್ನು ನೋಡಲು ಅವಕಾಶವಿದೆ. ಸಂಜೆ 4.30ರಿಂದ ರಾತ್ರಿ ವೇಳೆ ತುರ್ತಾಗಿ ಬರುವಂತಹ ರೋಗಿ ಗಳನ್ನು ನೋಡಲು ಮುಂದಾಗಬೇಕಿದೆ. ಆದರೂ ಯಾವುದೇ ರೋಗಿಗಳು ಬಂದರೂ ನಾವು ಕರ್ತವ್ಯ ನಿರ್ವಹಿಸುತ್ತೇವೆ. ಇದ್ಯಾ ವುದನ್ನೂ ತಿಳಿಯದೆ ಇಂತಹ ವ್ಯಕ್ತಿಗಳು ಆಗಾಗ ವೈದ್ಯಾಧಿಕಾರಿಗಳು ಮತ್ತು ಇಲ್ಲಿನ ಸಿಬ್ಬಂದಿ ಮೇಲೆ ಮಾನಸಿಕವಾಗಿ ನಿಂದಿ ಸುವುದು ಹಾಗೂ ಹಲ್ಲೆ ನಡೆಸಲು ಮುಂದಾ ಗುತ್ತಾರೆ. ಆದ್ದರಿಂದ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನಮಗೆ ರಾತ್ರಿ ವೇಳೆ ಕರ್ತವ್ಯ ನಿರ್ವಹಿ ಸಲು ಸೂಕ್ತ ರಕ್ಷಣೆ ಒದಗಿಸಬೇಕು ಎಂದರು.

ಆಂಬುಲೆನ್ಸ್ ಚಾಲಕ ಗೋಪಾಲ ಕೃಷ್ಣ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ನಾವು ಪ್ರತಿಯೊಬ್ಬ ಸಾರ್ವಜನಿಕರ ಆರೋಗ್ಯವನ್ನು ಬಯಸು ತ್ತೇವೆ. ಆಸ್ಪತ್ರೆಗಳಿಗೆ ಸಮಸ್ಯೆ ಅರಿತು ಬರು ವುದಕ್ಕಿಂತ ಹೆಚ್ಚಾಗಿ ಅವರವರ ನಾಯಕತ್ವ ವಹಿಸಿಕೊಳ್ಳಲು ಬರುವವರು ಹೆಚ್ಚಾಗಿ ದ್ದಾರೆ. ಕೆಲವು ದಿನಗಳ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಚಂದ್ರಶೇಖರ್ ರಾತ್ರಿ ವೇಳೆ ಬಂದು ಇಲ್ಲಿನ ನೌಕರ ಸಂದೀಪ್ ಎಂಬ ವ್ಯಕ್ತಿಗೆ ವಾಹನ ಚಾಲಕ ಗೋಪಾಲ ಎಂಬ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ. ನಾವುಗಳು ಸಮಯದ ಅಂಕುಶವಿಲ್ಲದೆ ರಾತ್ರಿ ವೇಳೆ ವಾಹನ ಚಾಲನೆ ಮಾಡಬೇಕಾಗಿರುತ್ತದೆ. ಇಂತಹ ಸಂದರ್ಭ ನಮ್ಮ ಮೇಲೆ ಹಲ್ಲೆಗಳು ನಡೆ ಯುವುದರಲ್ಲಿ ಯಾವುದೇ ಅನುಮಾನ ವಿಲ್ಲ. ಆದ್ದರಿಂದ ಇಂತಹವರ ವಿರುದ್ಧ ಪೆÇಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿ ಒತ್ತಾಯಿಸುತ್ತೇವೆ ಎಂದರು.

ಆಸ್ಪತ್ರೆಯ ನರ್ಸ್ ಶೋಭಾ ಮಾತನಾಡಿ, ಹಲವು ಬಾರಿ ಈ ರೀತಿಯ ಅನುಭವ ಆಗಿದೆ. ಸಾರ್ವಜನಿಕರ ಸೇವೆ ಮಾಡುವ ನಮಗೆ ಯಾರು ರಕ್ಷಣೆ ನೀಡುತ್ತಾರೆ. ಕೆಲವರು ಆಸ್ಪತ್ರೆಗೆ ಬಂದರೆ ಹೆಣ್ಣು ಎಂಬ ಕನಿಕರವು ಇಲ್ಲದಂತೆ ಅವಾಚ್ಯ ಶಬ್ದ ಗಳಿಂದ ನಿಂದಿಸಿ ನಮ್ಮ ಮೇಲೆ ಕೈ ಮಾಡಲು ಮುಂದಾಗುತ್ತಾರೆ. ನಾವು ಹೆಣ್ಣು ಮಕ್ಕಳು ಅಬಲೆಯರಾಗಿದ್ದೇವೆ. ಆದ್ದರಿಂದ ಇಂತಹ ವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನಮಗೆ ರಕ್ಷಣೆ ಒದಗಿಸಿ ಕೊಡಬೇಕಾಗಿದೆ ಎಂದರು.

ಈ ಸಂದರ್ಭ ವೈದ್ಯಾಧಿಕಾರಿ ಹರೀಶ್ ಬಾಬು, ನರಸೇಗೌಡ ಮಾತನಾಡಿದರು. ‘ಡಿ’ ಗ್ರೂಪ್ ನೌಕರರಾದ ಲೋಕೇಶ್, ರವಿ ಕುಮಾರ್, ಶಿವಕುಮಾರ್, ರಾಜು, ನಾಗ ರಾಜ್, ನಿತ, ಮಮತಾ, ಶೋಭಾ, ಸುಜಾತ, ಗಂಗಮ್ಮ, ಅನಿತಾ ಹಾಗೂ ಇನ್ನು ಮುಂತಾ ದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »