ಜನ ಕ್ರಾಂತಿಗೆ ಸಜ್ಜಾಗುವಂತೆ ಎಸಿ ಡಾ.ಹೆಚ್.ಎಲ್.ನಾಗರಾಜ್ ಕರೆ
ಹಾಸನ

ಜನ ಕ್ರಾಂತಿಗೆ ಸಜ್ಜಾಗುವಂತೆ ಎಸಿ ಡಾ.ಹೆಚ್.ಎಲ್.ನಾಗರಾಜ್ ಕರೆ

March 12, 2019

ಹಾಸನ: ಕೆರೆ, ಕಟ್ಟೆ, ಕಲ್ಯಾಣಿ ಗಳ ಪುನಶ್ಚೇತನ, ವ್ಯಾಪಕ ಹಸಿರೀಕರಣ ಹಾಗೂ ನೀರಿನ ಮಿತ ಬಳಕೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯಾ ದ್ಯಂತ ಸರ್ಕಾರಿ ಶಕ್ತಿ ಹಾಗೂ ಜನಶಕ್ತಿ ಯನ್ನು ಒಟ್ಟುಗೂಡಿಸಿ ಜನಾಂದೋಲನ ವನ್ನು ರೂಪಿಸಲು ರಾಜ್ಯ ಸರ್ಕಾರ ನಿರ್ಧ ರಿಸಿದ್ದು, ‘ಜಲಾಮೃತ’ ಹೆಸರಿನ ಈ ಯೋಜನೆಗೆ ರಾಜ್ಯ ಸರ್ಕಾರ 500 ಕೋಟಿ ರೂ.ಗಳನ್ನು ತೆಗೆದಿರಿಸಿದ್ದು, ಹಾಸನ ಜಿಲ್ಲೆಯ ಜನರು ಜಲಕ್ರಾಂತಿಗೆ ಸಜ್ಜಾಗಬೇಕೆಂದು ಉಪ ವಿಭಾಗಾಧಿಕಾರಿ ಹಾಗೂ ಹಸಿರುಭೂಮಿ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಹೆಚ್. ಎಲ್.ನಾಗರಾಜ್ ಕರೆ ನೀಡಿದ್ದಾರೆ.

ನಗರದ ಹೊರವಲಯದ ಬಿ.ಕಾಟೀಹಳ್ಳಿ ಯಲ್ಲಿ ಹಸಿರು ಭೂಮಿ ಪ್ರತಿಷ್ಠಾನ, ಗ್ರಾಮ ಪಂಚಾಯಿತಿ ಹಾಗೂ ಶ್ರೀ ಮಾರುತಿ ಕ್ಷೇಮಾ ಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಎರಡು ಕೆರೆಗಳ ಪುನಶ್ಚೇತನ ಕಾರ್ಯ ಕ್ರಮದ ಪ್ರಗತಿ ಪರಿಶೀಲನಾ ಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದ ಅವರು, ಹಾಸನ ಜಿಲ್ಲೆಯಲ್ಲಿ 2017ರ ಮೇ 1ರಂದು ಹಸಿರು ಭೂಮಿ ಪ್ರತಿಷ್ಠಾನ ಆರಂಭಿಸಿದ ಜಲಸಂರ ಕ್ಷಣಾ ಚಟುವಟಿಕೆಗಳಿಗೆ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಬಿ.ಕಾಟೀಹಳ್ಳಿ ಗ್ರಾಮದಲ್ಲಿ ಎರಡು ಕೆರೆ ಗಳು ಹಾಗೂ ಹರಳಹಳ್ಳಿ ಗ್ರಾಮದಲ್ಲಿ ಒಂದು ಕೆರೆಯ ಪುನಶ್ಚೇತನ ಕಾರ್ಯ ಆರಂಭ ವಾಗಿದೆ. ನಗರದ 16ನೇ ವಾರ್ಡ್‍ನಲ್ಲಿ ರುವ ಚಿಕ್ಕಟ್ಟೆಯ ಪುನಶ್ಚೇತನ ಕಾರ್ಯ ಸೋಮವಾರ ಆರಂಭವಾಗಲಿದೆ. ಸ್ಥಳೀಯ ಜನರು ಕೆರೆಗಳ ಪುನಶ್ಚೇತನ ಕಾರ್ಯಕ್ಕೆ ಸ್ವಯಂ ಪ್ರೇರಿತರಾಗಿ ಹಣ ನೀಡುತ್ತಿರು ವುದಲ್ಲದೆ, ಶ್ರಮದಾನವನ್ನೂ ಮಾಡುತ್ತಿ ದ್ದಾರೆ. ಜಿಲ್ಲೆಯ ಜನರು ತಮ್ಮ ತಮ್ಮ ಗ್ರಾಮಗಳಲ್ಲಿ ಸಂಘಟಿತರಾಗಿ ಜಲ ಮೂಲಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
`ಜಲಾಮೃತ’ ಯೋಜನೆಯ ಅನು ಷ್ಠಾನದ ಕುರಿತು ಒಂದು ರೂಪುರೇಷೆ ತಯಾರಿಸಲು ಮೈಸೂರಿನಲ್ಲಿ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರ ನಡೆಯುತ್ತಿದ್ದು, ಈ ಕಾರ್ಯಾಗಾರದಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಪ್ರತಿನಿಧಿಗಳು ಪಾಲ್ಗೊಳ್ಳಲಿ ದ್ದಾರೆ. ಮಳೆಗಾಲ ಆರಂಭವಾಗುವ ಹೊತ್ತಿಗೆ ಕೆರೆಕಟ್ಟೆಗಳು ಹಾಗೂ ಕಲ್ಯಾಣಿಗಳು ಪುನ ಶ್ಚೇತನಗೊಳ್ಳಬೇಕು ಮತ್ತು ಮಳೆಗಾಲದ ಆರಂಭದಲ್ಲಿ ಅರಣ್ಯೀಕರಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಜಲ ಕಾರ್ಯ ಕರ್ತರಿಗೆ ಸೂಚಿಸಿದರು.

ಈ ಸಭೆಯಲ್ಲಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಆರ್.ಪಿ.ವೆಂಕಟೇಶಮೂರ್ತಿ, ಅಧ್ಯಕ್ಷ ವೈ.ಎನ್.ಸುಬ್ಬಸ್ವಾಮಿ, ಸದಸ್ಯ ಮಂಜು ನಾಥ ಮೋರೆ, ಬಿ.ಕಾಟೀಹಳ್ಳಿ ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಶ್ರೀ ಮಾರುತಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಲಿತ್‍ಕುಮಾರ್ ಇಲ್ಲಿಯ ತನಕ ಎರಡು ಕೆರೆಗಳ ಪುನಶ್ಚೇತನ ಕಾರ್ಯದ ಪ್ರಗತಿ ಯನ್ನು ವಿವರಿಸಿ ಅಂದಾಜು 3.5 ಲಕ್ಷ ರೂ. ವೆಚ್ಚವಾಗಿದೆ. ಗ್ರಾಮಸ್ಥರು ತಾವಾಗಿಯೇ ಮುಂದೆ ಬಂದು ಹಣ ನೀಡುತ್ತಿದ್ದಾರೆ. ಸಮಿತಿ ಯವರು ಕೂಡ ಮನೆ ಬಾಗಿಲಿಗೂ ಹೋಗಿ ಹಣ ಕೇಳುತ್ತಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಹಾಜರಿದ್ದ ಪತ್ರಕರ್ತ ಹಾಗೂ ಡೆವಲಪರ್ ಚೌಡುವಳ್ಳಿ ಜಗದೀಶ್, ಸತ್ತೆ ಕಟ್ಟೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿ ಯನ್ನು ತಮ್ಮ ಸಂಸ್ಥೆಯಿಂದ ಮಾಡಿಕೊಡ ಲಾಗುವುದು ಅಥವಾ ಅಗತ್ಯವಾದ ಹಣ ವನ್ನು ನೀಡುವುದಾಗಿ ಭರವಸೆ ನೀಡಿದರು.
ಕೇಂದ್ರೀಯ ವಿದ್ಯಾಲಯದ ಪ್ರಾಂಶು ಪಾಲ ವಾಲ್ಮೀಕಿ ಮಾತನಾಡಿ, ಕೆರೆಯ ಅಭಿವೃದ್ಧಿಗೆ ಪೆÇೀಷಕರಿಂದ ಹಣ ಸಂಗ್ರಹಿಸಿ ಕೊಡಲಾಗುವುದು. ದತ್ತು ತೆಗೆದುಕೊಂಡು ಉದ್ಯಾನವನವನ್ನು ಅಭಿವೃದ್ಧಿಪಡಿಸ ಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ಕೆರೆಯ ಕಾಮಗಾರಿಗೆ ಹಿಟಾಚಿ ಯನ್ನು ಉಚಿತವಾಗಿ ನೀಡಿರುವುದಲ್ಲದೆ, ಸಭೆಯಲ್ಲಿ 20 ಸಾವಿರ ರೂ.ಗಳನ್ನು ನೀಡಿ ದರು. ಬಿ.ಇ.ಶಿವರಾಮೇಗೌಡ ಸ್ವಾಗತಿಸಿ ದರು. ಕೆರೆ ಅಭಿವೃದ್ಧಿ ಸಮಿತಿಯ ಉಪಾ ಧ್ಯಕ್ಷ ಗೋವಿಂದೇಗೌಡ ವಂದಿಸಿದರು.

Translate »