ಶಾಸಕ ತನ್ವೀರ್‍ಸೇಠ್ ಮೇಲಿನ ಹಲ್ಲೆ ಪ್ರಕರಣ: ನ್ಯಾಯಾಂಗ ತನಿಖೆಗೆ ಎಸ್‍ಡಿಪಿಐ ಆಗ್ರಹ
ಮೈಸೂರು

ಶಾಸಕ ತನ್ವೀರ್‍ಸೇಠ್ ಮೇಲಿನ ಹಲ್ಲೆ ಪ್ರಕರಣ: ನ್ಯಾಯಾಂಗ ತನಿಖೆಗೆ ಎಸ್‍ಡಿಪಿಐ ಆಗ್ರಹ

December 3, 2019

ಮೈಸೂರು,ಡಿ.2(ಪಿಎಂ)-ಶಾಸಕ ತನ್ವೀರ್‍ಸೇಠ್ ಮೇಲಿನ ಹಲ್ಲೆ ಪ್ರಕರಣವನ್ನು ಎಸ್‍ಡಿಪಿಐ ಪಕ್ಷದೊಂದಿಗೆ ತಳುಕು ಹಾಕುವ ಎಲ್ಲಾ ಪ್ರಯತ್ನಗಳು ಪೊಲೀಸ್ ಇಲಾಖೆಯಿಂದ ನಡೆಯುತ್ತಿದ್ದು, ಹೀಗಾಗಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಎಸ್‍ಡಿಪಿಐ ಆಗ್ರಹಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜಿದ್, ಪ್ರಕರಣವನ್ನು ಎಸ್‍ಡಿಪಿಐನೊಂದಿಗೆ ತಳುಕು ಹಾಕಿ ನಮ್ಮ ಪಕ್ಷವನ್ನು ದಮನ ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು. ಹಲ್ಲೆ ಪ್ರಕ ರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ಶಿಕ್ಷೆಗೊಳಪಡಿಸಬೇಕು. ಆದರೆ ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸುವುದನ್ನು ಪಕ್ಷ ಸಹಿಸುವುದಿಲ್ಲ. ಪ್ರಮುಖ ಆರೋಪಿ ಫರಾನ್ ಪಾಷ ನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಜೊತೆಗೆ ಇನ್ನಿ ತರೆ ಐವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸ ಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿಕೊಂಡಿದೆ. ಆದರೆ ನ್ಯಾಯಾಂಗ ಬಂಧನದಲ್ಲಿರುವ ಐವರು ಅಮಾಯಕರಾ ಗಿದ್ದು, ಇವರಿಗೂ, ಪ್ರಕರಣಕ್ಕೂ ಯಾವುದೇ ಸಂಬಂಧ ವಿಲ್ಲ. ಈ ಪೈಕಿ ಸೈಯದ್ ಮೂಹಿಬ್ ಹಾಗೂ ಮುಜಾಮಿಲ್ ಎಸ್‍ಡಿಪಿಐ ಕಾರ್ಯಕರ್ತರು ಎಂದು ತಿಳಿಸಿದರು.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಅಮಾಯಕರನ್ನು ಬಂಧಿಸಿದೆ. ಹೀಗಾಗಿ ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಪಕ್ಷದಲ್ಲಿ ಆಂತರಿಕ ಶಿಸ್ತು ಸಮಿತಿ ರಚಿಸಿ, ನ್ಯಾಯಾಂಗ ಬಂಧನದಲ್ಲಿ ರುವ ಯುವಕರಿಗೂ ಪ್ರಕರಣಕ್ಕೂ ಸಂಬಂಧವಿದೆಯೇ? ಎಂದು ಪರಿಶೋಧಿಸಲಾಗಿದ್ದು, ಪ್ರಕರಣದೊಂದಿಗೆ ಈ ಯುವಕರಿಗೆ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟ ವಾಗಿದೆ ಎಂದರು. ಪ್ರಮುಖ ಆರೋಪಿ ಫರಾನ್ ಪಾಷ 3 ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರ ಬಗ್ಗೆ ಮಾಧ್ಯಮ ಗಳಲ್ಲಿ ವರದಿಯಾಗಿದೆ. ಆದರೆ ಪೊಲೀಸರು ಆತನನ್ನು ಎಸ್‍ಡಿಪಿಐ ಕಚೇರಿ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಕಚೇರಿ ಎದುರು ನಿಲ್ಲಿಸಿ ಫೋಟೋ ತೆಗೆಸಿದ್ದಾರೆ. ಕಾನೂನು ಪ್ರಕಾರ ಪಕ್ಷದ ಕಚೇರಿಗಳಿಗೆ ಪೊಲೀ ಸರು ಭೇಟಿ ನೀಡುವ ಮುನ್ನ ನೋಟಿಸ್ ನೀಡಬೇಕಿತ್ತು. ಆ ರೀತಿ ಮಾಡಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣ ವಾಗಿದೆ. ಬಂಧನದಲ್ಲಿರುವ ಅಮಾಯಕರಪರ ಪಕ್ಷ ನಿರಂತರ ಕಾನೂನು ಹೋರಾಟ ಮುಂದುವರೆಸಲಿದ್ದು, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧವೂ ಎಲ್ಲಾ ರೀತಿಯ ಹೋರಾಟ ನಡೆಸಲಾಗುವುದು ಎಂದರು. ವಕೀಲ ಅನಸ್, ಎಸ್‍ಡಿಪಿಐ ಕಾರ್ಯಕರ್ತ ಸೈಯದ್ ಮೂಹಿಬ್ ಪತ್ನಿ ಇನಾ ಕೌಸರ್ ಹಾಗೂ ಇವರ ತಂದೆ ಜಮಿಲ್ ಅಹಮ್ಮದ್ ಖಾನ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »